Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತಾಯಿಯ ನಿಧನದ ನೋವಲ್ಲೂ ಬಿಗ್ ಬಾಸ್ ಏರಿದ ಕಿಚ್ಚ: ಸರೋಜಮ್ಮರಿಗೆ ಕಲರ್ಸ್ ಕನ್ನಡ ನಮನ

---Advertisement---

ಬಿಗ್ ಬಾಸ್ ವೀಕೆಂಡ್ ಶೋನಲ್ಲಿ ಕಿಚ್ಚ ಸುದೀಪ್ ಇದ್ದರೇನೆ ಚೆಂದ. ವಾರಪೂರ್ತಿ ಕಿತ್ತಾಟ, ಜಗಳ, ಟಾಸ್ಕ್ ಗಳ ವಿಚಾರದಲ್ಲಿ ಒಂದಷ್ಟು ಮಿಸ್ಟೇಕ್ ಇದೆಲ್ಲದಕ್ಕೂ ಒಂದಷ್ಟು ಚರ್ಚೆ ನಡೆಯೋದು ವೀಕೆಂಡ್ ಶೋ ನಲ್ಲಿ ವಾರದ ಕಥೆ ಕಿಚ್ಚನ ಜೊತೆ ಹಾಗೇ ಸೂಪರ್ ಸಂಡೇ ವಿತ್ ಸುದೀಪ ಶೋನಲ್ಲಿ ಒಂದಷ್ಟು ನ್ಯಾಯ ಪಂಚಾಯ್ತಿ ಆಗುತ್ತೆ. ಈ ವಾರದ ಕಥೆಯನ್ನು ಕೇಳುವುದಕ್ಕೇನೆ ಸುಮಾರು ಜನ ಕೂತಿರುತ್ತಾರೆ. ಆದರೆ ಕಳೆದ ವಾರ ಕಿಚ್ಚ ಗೈರಿನಲ್ಲಿಯೇ ವಾರದ ಕಥೆ ನಡೆದಿತ್ತು. ಈ ವಾರ ಮನಸ್ಸೊಳಗೆ ನೋವಿದ್ದರೂ ವೇದಿಕೆ ಮೇಲೆ ಹಾಜರಾಗಿದ್ದಾರೆ.

ಭಾನುವಾರದಂದು ಕಿಚ್ಚ ಪಂಚಾಯ್ತಿ ನಡೆಸುವಾಗಲೇ ತಾಯಿ ಸೀರಿಯಸ್ ಕಂಡೀಷನ್ ನಲ್ಲಿ ಇದ್ದರು. ಆದರೆ ಬಿಟ್ಟು ಹೋಗ್ತಾರೆ ಎಂದು ಯಾರಿಗೂ ಊಹೆಯೂ ಇರಲಿಲ್ಲ. ಪಂಚಾಯ್ತಿ ಮುಗಿಸಿ ಆಸ್ಪತ್ರೆಗೆ ಹೋದರು. ಆದರೆ ತಾಯಿಯನ್ನು ಕಡೆ ಸಮಯದಲ್ಲಿ ಮಾತಾಡಿಸುವುದಕ್ಕೂ ಆಗಲಿಲ್ಲ. ತಾಯಿಯನ್ನು ಕಳೆದುಕೊಂಡು ತುಂಬಾ ದುಃಖದಲ್ಲಿದ್ದರು. ಆದರೂ ಕಾಯಕವೇ ಕೈಲಾಸ ಎಂಬಂತೆ ಒಪ್ಪಿಕೊಂಡ ಕೆಲಸ ಮಾಡಲು ಬಂದಿದ್ದಾರೆ.

ಇಂದು ವೇದಿಕೆ ಮೇಲೆ ಕಿಚ್ಚನ ತಾಯಿ ಸರೋಜಮ್ಮ ಅವರಿಗೆ ನಮನ ಸಲ್ಲಿಸಿದರು. ವಾಸುಕಿ ವೈಭವ್ ಪರಪಂಚ ನೀನೆ ಹಾಡು ಹಾಡಿದರು. ಎಲ್ಲರು ಕ್ಯಾಂಡಲ್ ಹಿಡಿದು ಗೌರವ ಸಲ್ಲಿಸಿದರು. ಬಿಗ್ ಬಾಸ್ ವತಿಯಿಂದ ‘ಮಾಣಿಕ್ಯನಂತ ನಾಯಕನನ್ನು, ಕರುನಾಡ ಮಡಿಲಿಗೆ ಹಾಕಿ, ತನ್ನ ಪ್ರೀತಿಯನ್ನು ಮನೆ ಮನೆಗೂ ಹಂಚಿಕೊಂಡ ನಿಮ್ಮ ತಾಯಿಯ ಅಗಲಿಕೆ ಭರಿಸಲರಾದ ನೋವು’ ಎಂದು ಕಿಚ್ಚನಿಗೆ ಸಾಂತ್ವಾನ ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment