Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೋಡಿ ಹರಿಸುವ ಹಠ ಬಿಟ್ಟು ಹಿನ್ನೀರಿನ ರೈತರ ಕಷ್ಟಕ್ಕೆ ಸ್ಪಂದಿಸಿ; ಶಾಸಕ ಬಿ.ಜಿ. ಗೋವಿಂದಪ್ಪ

Facebook
Twitter
Telegram
WhatsApp

ಚಿತ್ರದುರ್ಗ: ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾಗಲು ಕೆಲ ಅಡಿಗಳಷ್ಟೇ ಬಾಕಿಯಿದ್ದು, ಇದೀಗ ಕೋಡಿ ವಿಚಾರ ಮುನ್ನಲೆಗೆ ಬಂದಿದೆ.

ಹೊಸದುರ್ಗದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ಶಾಸಕ ಬಿ.ಜಿ. ಗೋವಿಂದಪ್ಪ, ‘ಹಿರಿಯೂರು ರೈತರು ಮಾತ್ರ ಸುಖವಾಗಿದ್ದರೆ ಸಾಲದು, ಹಿನ್ನೀರಿನ ರೈತರ ಕಷ್ಟಗಳಿಗೂ ಸ್ಪಂದಿಸಬೇಕು. ಈ ಗುಣ ರೈತರು ಹಾಗೂ ರಾಜಕೀಯ ನೇತಾರರಿಗೂ ಇರಬೇಕು’ ಎಂದರು.

‘ವಿವಿ ಸಾಗರದಲ್ಲಿ ನೀರು 130 ಅಡಿಗಿಂತ ಹೆಚ್ಚು ಬಂದಾಗ ಹಲವು ಪ್ರದೇಶಗಳು ಮುಳುಗಡೆ ಯಾಗುತ್ತವೆ. ಬಾಗಿನ ಅರ್ಪಿಸುವುದಕ್ಕೆ ಜಲಾಶಯ ತುಂಬಿ‌ಸುವ ಬದಲು, ಜನರ ಉಪಯೋಗಕ್ಕೆ ತುಂಬಿಸುವ ಅಗತ್ಯವಿದೆ’ ಎಂದು ತಿಳಿಸಿದರು.

‘2022ರಲ್ಲಿ ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಹರಿದಿದ್ದರಿಂದ ಹಿನ್ನೀರಿನ ಜನರು ಸಾಕಷ್ಟು ನಷ್ಟ ಅನುಭವಿಸಿದರು. ಪ್ರತಿ ವರ್ಷ ಕೋಡಿ ಹರಿಸಬೇಕು ಎಂಬ ಹಠಕ್ಕೆ ಬೀಳಬಾರದು. ತಾಲ್ಲೂಕಿನ ರೈತರ ಸಂಕಷ್ಟಗಳಿಗೆ ಸ್ಪಂದಿಸುವುದು ಎಲ್ಲರ ಕರ್ತವ್ಯ’ ಎಂದು ತಿಳಿಸಿದರು.

‘ವಿವಿ ಸಾಗರದಲ್ಲಿ ದಿನೇ ದಿನೇ ನೀರಿನ ಪ್ರಮಾಣ ಹೆಚ್ಚುತ್ತಿದೆ. ಹಿನ್ನೀರಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಂತ್ರಜ್ಞರು, ಅಧಿಕಾರಿಗಳ ಸಲಹೆ ಮೇರೆಗೆ ಕಾನೂನಾತ್ಮಕವಾಗಿ ರೈತರಿಗೆ ಶಾಶ್ವತ ಪರಿಹಾರ ನೀಡಲು ಎಲ್ಲರ ಸಹಕಾರ ಅಗತ್ಯ’ ಎಂದು ತಿಳಿಸಿದರು.

‘ ಮೈಸೂರು ಮಹಾರಾಜರು ತಾಲ್ಲೂಕಿನಲ್ಲಿ ವಿವಿ ಸಾಗರ ನಿರ್ಮಾಣ ಮಾಡಿದರು. ಅದಕ್ಕಾಗಿ 25,000 ಎಕರೆ ಭೂಮಿ ನೀಡಿದ ಹೊಸದುರ್ಗ ರೈತರದು ದೊಡ್ಡಗುಣ. ಆಗ ಕೆಲವು ಹಳ್ಳಿಗಳನ್ನು ಮಾತ್ರ ಸ್ಥಳಾಂತರಗೊಳಿಸಿ ಸೂಕ್ತ ಜಾಗ ನೀಡಲಾಗಿದೆ. ಇನ್ನೂ ಕೆಲವರು ಸಂಕಷ್ಟದಲ್ಲಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಭೂಮಿ ನೀಡಬೇಕಾಗಿದೆ’ ಎಂದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಿ ಅಂಗವಿಕಲ ನೌಕರರು ಸರ್ಕಾರಕ್ಕೆ ಮನವಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 05 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಅಂಗವಿಕಲ ನೌಕರರ ಸಂಘದ ಸದಸ್ಯರು

ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಶತಸಿದ್ದ : ಸಿ.ಎಂ.ಸಿದ್ದರಾಮಯ್ಯ

    ಶಿಗ್ಗಾಂವ್,  ನ 5: ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಶತಸಿದ್ದ ಎಂದು ಸಿ.ಎಂ.ಸಿದ್ದರಾಮಯ್ಯ ಪುನರುಚ್ಚರಿಸಿದರು. ಹಿರೇಬೆಂಡಿಗೇರಿ ಗ್ರಾಮದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ

ಬಾಲ್ಯ ವಿವಾಹ: ಎಫ್.ಐ.ಆರ್ ದಾಖಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ

  ಚಿತ್ರದುರ್ಗ. ನ.05: ಬಾಲ್ಯ ವಿವಾಹ ಪ್ರಕರಣಗಳಲ್ಲಿ ನಿಯಮಾನುಸಾರ ಸಂಬಂದಪಟ್ಟವರ ಮೇಲೆ ಎಫ್.ಐ.ಆರ್ ದಾಖಲಿಸದೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.   ನಗರದ ಜಿಲ್ಲಾಧಿಕಾರಿಗಳ

error: Content is protected !!