ಪಾರ್ಶ್ವನಾಥ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

1 Min Read

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಮೊ : 78998 64552

ಸುದ್ದಿಒನ್, ಚಿತ್ರದುರ್ಗ,ನವೆಂಬರ್. 01 : ಪಾರ್ಶ್ವನಾಥ ಶಾಲೆಯಲ್ಲಿ 69 ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಬಾಬುಲಾಲ್ ಕನ್ನಡಾಂಭೆಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತ ಕನ್ನಡಕ್ಕಾಗಿ ಅನೇಕ ಮಹನೀಯರು ಹೋರಾಡಿದ ಪರಿಣಾಮ ಕನ್ನಡ ರಾಜ್ಯೋತ್ಸವನ್ನು ಆಚರಿಸುತ್ತಿದ್ದೇನೆ. ಅಂತಹ ಮಹಾನ್ ಚೇತನರನ್ನು ಸ್ಮರಿಸಿಕೊಳ್ಳುವ ಸುದಿನವೇ ಕನ್ನಡ ರಾಜ್ಯೋತ್ಸವ. ಮಕ್ಕಳು ಚಿಕ್ಕಂದಿನಿಂದಲೆ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನವಿಟ್ಟುಕೊಳ್ಳಬೇಕೆಂದರು.

ಪಾರ್ಶ್ವನಾಥ ಶಾಲೆಯ ಉಪಾಧ್ಯಕ್ಷ ಉತ್ತಮ್‍ಚಂದ್, ಕಾರ್ಯದರ್ಶಿ ಸುರೇಶ್‍ಕುಮಾರ್, ಮುಖ್ಯ ಶಿಕ್ಷಕಿಯರುಗಳಾದ ನಾಜಿಮ, ವಿಜಯಲಕ್ಷ್ಮಿ, ಶಾಂತಿ, ಚಿತ್ರಕಲಾವಿದ ನಾಗರಾಜ್‍ಬೇದ್ರೆ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಕನ್ನಡ ನಾಡು ನುಡಿಯನ್ನು ಸಾರುವ ಸಾಂಸ್ಕøತಿಕ ನೃತ್ಯಗಳನ್ನು ಮಕ್ಕಳು ಪ್ರದರ್ಶಿಸಿದರು.

Share This Article
Leave a Comment

Leave a Reply

Your email address will not be published. Required fields are marked *