ವರದಿ ಮತ್ತು ಫೋಟೋ ಕೃಪೆ : ಸುರೇಶ್ ಪಟ್ಟಣ್, ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 01 : ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ಹೆಮ್ಮೆಯ ಹಬ್ಬವಾಗಿದ್ದು, ಕೇವಲ ಸರ್ಕಾರಿ ಕಚೇರಿಗಳಿಗೆ ಸೀಮಿತವಾಗದೆ ಎಲ್ಲಾ ಮನೆಮನೆಗಳಲ್ಲಿ ಆಚರಿಸುವಂತ ನಾಡ ಹಬ್ಬವಾಗಿದೆ ಇದರಿಂದ ನಮ್ಮ ಭಾಷೆಯ ಮೇಲೆ ಇರುವ ಪ್ರೀತಿ ಅಭಿಮಾನವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಾಗಿದೆ ಎಂದು
ಅಂಚೆ ಅಧೀಕ್ಷಕರಾದ ಉಷಾ ಕರೆಕೊಟ್ಟರು.
ನಗರದ ಪ್ರಧಾನ ಅಂಚೆ ಕಛೇರಿಯಲ್ಲಿ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಅಂಚೆ ಪಾಲಕರಾದ ದೇವರಾಜ ಅಧ್ಯಕ್ಷತೆ ವಹಿಸಿದ್ದರು. ಕರಿಸಿದ್ದಪ್ಪ, ನಿಜಲಿಂಗಪ್ಪ, ಮಂಜುನಾಥ, ಮಧುಸೂದನ್, ಶ್ರೀನಿವಾಸ, ಲಿಂಗೇಶ, ಯಲ್ಲಮ್ಮ, ಶಶಿಕಲಾ, ಸುಧಾ, ನಿಂಗಮ್ಮ, ಸಂತೋಷ, ಶಶಿಕಾಂತ್, ಜೈಮಾರುತಿ, ಬೀರಪ್ಪ ಜವಲೇರ್, ಅರುಣ್, ವರ್ಷ ಹಾಗೂ ಪ್ರಧಾನ ಅಂಚೆಕಛೇರಿ ಎಲ್ಲಾ ಅಂಚೆ ಸಿಬ್ಬಂದಿ ಭಾಗವಹಿಸಿದ್ದರು.