Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಚಿತ್ರೀಕರಣ ನಿಲ್ಲಿಸಿ : ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹ

Facebook
Twitter
Telegram
WhatsApp

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

 

ಸುದ್ದಿಒನ್, ಚಿತ್ರದುರ್ಗ ನ. 01 : ಎಚ್‍ಎಂಟಿ ಅನುಭೋಗದಲ್ಲಿರುವ ಅರಣ್ಯ ಭೂಮಿಯಲ್ಲಿ ಯಶ್ ಅಭಿನಯದ “ಟಾಕ್ಸಿಕ್’ ಎಂಬ ಸಿನಿಮಾ ಚಿತ್ರೀಕರಣ ನಡೆದಿದ್ದು, ಇದಕ್ಕಾಗಿ ಸಾವಿರಾರು ಗಿಡ-ಮರಗಳನ್ನು ಕಡಿಯಲಾಗಿದೆ. ಕೂಡಲೇ ಟಾಕ್ಸಿಕ್ ಚಿತ್ರೀಕರಣ ಸ್ಥಗಿತಗೊಳಿಸುವಂತೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಸರ್ಕಾರವನ್ನು ಆಗ್ರಹಿಸಿದೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಎಸ್.ಟಿ.ನವೀನ್ ಕುಮಾರ್, ಇದಕ್ಕೆ ಅನುಮತಿ ನೀಡಿದ ಅಧಿಕಾರಿ ಅಥವಾ ಅನುಮತಿ ಪಡೆಯದೆ ಮರ ಕಡಿದ ಚಿತ್ರತಂಡದ ವಿರುದ್ಧ ಅರಣ್ಯ ಅಪರಾಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿರುವುದನ್ನು ಸ್ವಾಗತಿಸಿದ್ದು ಪರಿಸರ ಹಾನಿ ಮಾಡಿ ಸಾವಿರಾರು ವನ್ಯಜೀವಿಗಳ ಆಶ್ರಯ ಕಸಿದ ಕಾರಣ ಸಿನಿಮಾ ನಿರ್ಮಾಪಕ ಮತ್ತು ನಿರ್ದೇಶಕನ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಕೆನರಾ ಬ್ಯಾಂಕ್‍ಗೆ ಮಾರಾಟ ಮಾಡಿದೆ ಎನ್ನಲಾದ ಅರಣ್ಯ ಭೂಮಿಯಲ್ಲಿ ಹಲವು ತಿಂಗಳಿಂದ “ಟಾಕ್ಸಿಕ್’ ಎಂಬ ಹೆಸರಿನ ಚಲನಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಇದಕ್ಕಾಗಿ ಸಾವಿರಾರು ಗಿಡ-ಮರಗಳನ್ನು ಕಡಿದು ಸೆಟ್ ಹಾಕಲಾಗಿದೆ. ಇದಕ್ಕೆ ಅನುಮತಿ ನೀಡಿದ್ದರೆ, ಆ ಅಧಿಕಾರಿ ವಿರುದ್ಧ ಕ್ರಮ ಆಗಬೇಕು. ಅನುಮತಿ ಪಡೆಯದೆ ಗಿಡ-ಮರಗಳನ್ನು ಕಡಿದಿದ್ದರೆ, ಚಿತ್ರತಂಡದ ವಿರುದ್ಧ ಸೇರಿದಂತೆ ಕಾರಣರಾದ ಎಲ್ಲರ ವಿರುದ್ಧವೂ ಅರಣ್ಯ ಅಪರಾಧ ಪ್ರಕರಣ ದಾಖಲಿಸಲು ಸೂಚಿಸಿರುವುದಾಗಿ ಸಚಿವರಿಗೆ ಆಗ್ರಹಿಸಿದರು.

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ಸಂಚಾಲಕರಾದ ಟಿ.ರುದ್ರಮುನಿ ಮಾತನಡಿ, ಎಚ್‍ಎಂಟಿ ಅನುಭೋಗದಲ್ಲಿರುವ ಜಾಗವು ಅರಣ್ಯ ಇಲಾಖೆಗೇ ಸೇರಿದ್ದು. ತನ್ನ ಸ್ವಾಧೀನದಲ್ಲಿರುವ ಈ ಭೂಮಿಯನ್ನು ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಅರಣ್ಯೇತರ ಚಟುವಟಿಕೆಗಳೂ ನಡೆಯುತ್ತಿವೆ.ಈ ಪ್ರದೇಶದಲ್ಲಿದ್ದ ಮರ-ಗಿಡಗಳನ್ನು ಕಡಿದಿರುವುದು ಉಪಗ್ರಹ ಆಧಾರಿತ ಚಿತ್ರದಿಂದ ಗೋಚರಿಸುತ್ತದೆ. ಸಾಲದ್ದಕ್ಕೆ ತನ್ನ ಸುಪರ್ದಿಯಲ್ಲಿದ್ದ ಅರಣ್ಯ ಭೂಮಿ ಹಾಗೂ ಖಾಲಿ ಜಾಗಗಳನ್ನು ಸಿನಿಮಾ ಚಿತ್ರೀಕರಣಕ್ಕೆ ದಿನದ ಆಧಾರದ ಮೇಲೆ ಬಾಡಿಗೆಗೆ ನೀಡುತ್ತಿರುವುದೂ ಗಮನಕ್ಕೆ ಬಂದಿದೆ ಅರಣ್ಯದಲ್ಲಿ ನೂರಾರು ಮರಗಳ ಕಡಿದು ಟಾಕ್ಸಿಕ್ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಈ ಪ್ರದೇಶಕ್ಕೆ ಸ್ವತಃ ಅರಣ್ಯ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅರಣ್ಯ ಭಾಗಕ್ಕೆ ಹಾನಿಯಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ನಿರ್ಧರಿಸಿದೆ. ಅರಣ್ಯ ಸಚಿವ ಖಂಡ್ರೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಟಾಕ್ಸಿಕ್ ಸಿನಿಮಾ ಚಿತ್ರೀಕರಣದ ವೇಳೆ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾಕಿರುವ ಕೃತ್ಯವು ಸ್ಯಾಟೆಲೈಟ್ ಚಿತ್ರಗಳಿಂದ ಬಯಲಾಗಿದೆ. ಕೂಡಲೇ ಸಿನಿಮಾ ನಿರ್ಮಾಪಕರನ್ನು ಮತ್ತು ನಿರ್ದೇಶಕರನ್ನು ಬಂಧಿಸಬೇಕೆಂದು ಮತ್ತು ಈ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ಎಚ್ಚರಿಸಿದ್ದಾರೆ.

ಪತ್ರಿಕಾ ಗೋಷ್ಟಿಯಲ್ಲಿ ಉಪಾಧ್ಯಕ್ಷರು ಮತ್ತು ಕಾನೂನು ಸಲಹೆಗಾರರಾದ ಡಾ. ಎಂ.ಸಿ.ನರಹರಿ, ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್, ಕಾರ್ಯದರ್ಶಿ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿಗ್ ಬಾಸ್ ಮನೆಯಲ್ಲಿ ನಂಬಿಕೆ ದ್ರೋಹವೇ ಹೆಚ್ಚು : ಕಿವಿಯಲ್ಲಿ ಹೇಳಿದ ಗುಟ್ಟು ಬಟಾ ಬಯಲು..!

ಬಿಗ್ ಬಾಸ್ ಕನ್ನಡ ಸೀಸನ್ 11 ಈಗ ಮುಕ್ಕಾಲು ಭಾಗ ಜರ್ನಿ ಮುಗಿಸಿದೆ. ಆದರೆ ಒಬ್ಬರಿಗೊಬ್ಬರ ನಡುವೆ ಬಾಂಧವ್ಯ, ಪ್ರೀತಿ, ನಿಸ್ಚಾರ್ಥ ಸ್ನೇಹ ಬೆಳೆಯುವುದಕ್ಕಿಂತ ಹೆಚ್ಚಾಗಿ ಬೇಳೆ ಬೇಯಿಸಿಕೊಳ್ಳಲು ಕ್ಲೋಸ್ ಆಗಿದ್ದೇ ಹೆಚ್ಚಾಗಿದೆ. ಇಂದು

ಮಹಾರಾಷ್ಟ್ರದ ನೂತನ ಸಿಎಂ ದೇವೇಂದ್ರ ಫಡ್ನವೀಸ್ : ಏಕನಾಥ್ ಶಿಂಧೆ, ಅಜಿತ್ ಪವಾರ್ ಗೆ ಪ್ರಮುಖ ಸ್ಥಾನ..?

    ಸುದ್ದಿಒನ್ ಮಹಾರಾಷ್ಟ್ರದ ನೂತನ ಸಿಎಂ ಹಾದಿ ಸುಗಮವಾಗಿದೆ. ದೇವೇಂದ್ರ ಫಡ್ನವಿಸ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರ ಹೆಸರನ್ನು ಭಾರತೀಯ ಜನತಾ ಪಕ್ಷದ ಕೋರ್ ಕಮಿಟಿ ಸಭೆ ಅನುಮೋದಿಸಿತು. ಅವರು ಗುರುವಾರ

error: Content is protected !!