ಧಾರವಾಡ : ಎಸ್.ಡಿ.ಎಂ ಮೆಡಿಕಲ್ ಕಾಲೇಜ್‌ನಲ್ಲಿ ಕೊರೊನಾ ಸ್ಪೋಟಗೊಂಡಿದ್ದು, ಉಳಿದ ವಿದ್ಯಾರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಧಾರವಾಡ ಹೊರವಲಯದ ಸತ್ತೂರನಲ್ಲಿರೋ ಕಾಲೇಜು ಇದು. ಇಂದು 116 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಒಂದೇ ಕಾಲೇಜಿನಲ್ಲಿ ಸೋಂಕಿತರ ಸಂಖ್ಯೆ 182ಕ್ಕೆ ಏರಿಕೆಯಾದಂತಾಗಿದೆ.
ನಿನ್ನೆ 66 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ 669 ಜನರಿಗೆ RTPCR ಟೆಸ್ಟ್ ಮಾಡಲಾಗಿದೆ. ಅದರಲ್ಲಿ 116 ವಿದ್ಯಾರ್ಥಿಗಳಲ್ಲಿ ಕೊರೊನಾ ಕಂಡು ಬಂದಿದೆ. ಈ ಬೆನ್ನಲ್ಲೇ ಜಿಲ್ಲಾಡಳಿತ ಮುಂಜಾಗ್ರತ ಕ್ರಮ ಕೈಗೊಂಡಿದ್ದು, ಹಾಸ್ಟೇಲ್ ಸೀಲ್‌ಡೌನ್ ಮಾಡಿದೆ.
ಇಷ್ಟೊಂದು ವಿದ್ಯಾರ್ಥಿಗಳಲ್ಲಿ ಕೊರೊನಾ ಕಂಡು ಬಂದ ಹಿನ್ನೆಲೆ ಆರೋಗ್ಯ ಇಲಾಖೆ ಎಲ್ಲರ ತಪಾಸಣೆಗೆ ಮುಂದಾಗಿದೆ. ಇದರಿಂದಾಗಿ ಜಿಲ್ಲೆಯಲ್ಲೂ ಪಾಸಿಟಿವಿಟಿ ದರ ಏರಿಕೆಯಾಗಿದೆ. ಈ ಮುನ್ನ ಜಿಲ್ಲೆಯಲ್ಲಿ 0% ಪಾಸಿಟಿವಿಟಿ ದರವಿತ್ತು. ಆದ್ರೀಗ ಏಕಾಏಕಿ ಶೇ. 2ಕ್ಕೆ ಪಾಸಿಟಿವಿಟಿ ದರ ಏರಿಕೆಯಾಗಿದೆ.
ವಿದ್ಯಾರ್ಥಿಗಳಲ್ಲಿ ಹೀಗೆ ಕೊರೊನಾ ಕಂಡು ಬಂದಿರುವುದು ಜಿಲ್ಲೆಯ ಜನರನ್ನು ಕಂಗೆಡಿಸಿದೆ. ಕೊರೊನಾ ಈಗ ಎಲ್ಲೆಡೆ ಕಡಿಮೆಯಾಗಿದೆ ಎಂದುಕೊಳ್ಳುತ್ತಿರಯವಾಗ್ಲೆ ಹೀಗೆ ಏಕಾಏಕಿ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿರುವುದೇ ಆತಂಕಕ್ಕೆ ಕಾರಣವಾಗಿದೆ. ಕಾಲೇಜಿನಲ್ಲಿ ಗೆಟ್ ಟುಗೇದರ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಆ ಪಾರ್ಟಿಯಲ್ಲಿ ಹಲವು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಆ ಬಳಿಕವೇ ಹಲವು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ.