ದರ್ಶನ್ ಅವರಿಗೆ ಕಿಡ್ನಿ ಸಮಸ್ಯೆಯೂ ಆಗ್ತಿದೆ : ಹೈಕೋರ್ಟ್ ನಲ್ಲಿ ನಾಗೇಶ್ ಹೇಳಿದ್ದೇನು..?

suddionenews
1 Min Read

ಬೆಂಗಳೂರು: ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದು, ಹಲವು ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಮನೆಯಿಂದ ಕೊಟ್ಟ ಐದು ಕೆಜಿ ಬ್ಯಾಗನ್ನು ಕೂಡ ಎತ್ತಲು ಆಗದಷ್ಟು ಬೆನ್ನು ನೋವು ದರ್ಶನ್ ಅವರದ್ದು. ಈಗಾಗಲೇ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಬೆನ್ನು ನೋವಿನ ಸಮಸ್ಯೆ ಇರುವುದು ಕೂಡ ದೃಢವಾಗಿದೆ. ಆಪರೇಷನ್ ಮಾಡಿಸಲೇಬೇಕೆಂದು ಸೂಚನೆ ನೀಡಿದ್ದಾರೆ. ಇಂದು ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯ ವೇಳೆಯೂ ವಕೀಲರು ಅದನ್ನೇ ಪ್ರಸ್ತಾಪಿಸಿದರು.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ. ಇಂದು SPP ಪ್ರಸನ್ನ ಕುಮಾರ್ ಅವರು ವಿಮ್ಸ್ ಆಸ್ಪತ್ರೆಯ ದರ್ಶನ್ ಅವರ ಸ್ಕ್ಯಾನಿಂಗ್ ರಿಪೋರ್ಟ್ ಅನ್ನು ನ್ಯಾಯಾಧೀಶರಿಗೆ ನೀಡಿದರು. ಈ ವೇಳೆ ನ್ಯಾಯಾಧೀಶರಿಗೆ ದರ್ಶನ್ ಪರ ವಕೀಲರಾದ ನಾಗೇಶ್ ಅವರು ಪರಿಸ್ಥಿತಿಯನ್ನು ತಿಳಿಸುವ ಪ್ರಯತ್ನ ಮಾಡಿದರು. ದರ್ಶನ್ ಅವರಿಗೆ ಈಗಾಗಲೇ MRI ಆಗಿದೆ. ಸಿಟಿ ಸ್ಕ್ಯಾನ್ ಕೂಡ ಆಗಿದೆ. ಅವರ ಸ್ಪೈನಲ್ ಕಾರ್ಡ್ ಗೆ ರಕ್ತಚಲನೆ ಆಗ್ತಾ ಇಲ್ಲ. ಡಿಸ್ಕ್ ಕೂಡ ಪ್ರಾಬ್ಲಮ್ ಆಗ್ತಾ ಇದೆ. ಕಿಡ್ನಿ ಸಮಸ್ಯೆಯೂ ಆಗ್ತಾ ಇದೆ. ತಕ್ಷಣವೇ ಆಪರೇಷನ್ ಮಾಡಿಸಬೇಕು. ಇಲ್ಲವಾದಲ್ಲಿ ಪ್ಯಾರಾಲಿಸಿಸ್ ಅಟ್ಯಾಕ್ ಆಗಲಿದೆ ಎಂದಿದ್ದಾರೆ.

ಈ ಸಮಸ್ಯೆಯಿಂದ ದರ್ಶನ್ ಅವರಿಗೆ ಮದ್ಯಂತರ ಜಾಮೀನು ನೀಡಲು ನಾಗೇಶ್ ಅವರು ಮನವಿ ಮಾಡುತ್ತಿದ್ದಂತೆ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ ರಿಪೋರ್ಟ್ ನೋಡಿದ ಜಡ್ಜ್, ಬೆಂಗಳೂರು ಅಥವಾ ಬಳ್ಳಾರಿಯಲ್ಲಿ ಚಿಕಿತ್ಸೆ ನೀಡಬಹುದು ಎಂಬಂತಿದೆ. ವಕೀಲರಿಗೆ ಹಾಗೂ SPP ಅವರಿಗೆ ಕಾಪಿ ನೀಡಲು ತಿಳಿಸುತ್ತೇನೆ. ನಾಳೆ ನೋಡೋಣಾ ಎಂದು ವಿಚಾರಣೆ ಮುಂದೂಡಿದರು.

Share This Article
Leave a Comment

Leave a Reply

Your email address will not be published. Required fields are marked *