Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಉಪರಾಷ್ಟ್ರಪತಿ ಜಗದೀಪ್ ದಂಪತಿ ಭೇಟಿ..!

Facebook
Twitter
Telegram
WhatsApp

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆಯ ಕಾವು ಜೋರಾಗಿದೆ. ದೊಡ್ಡ ಗೌಡರ ಮನೆಗೂ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಮಗ, ಮೊಮ್ಮಗ ಎಲ್ಲಾ ಚನ್ನಪಟ್ಟಣದಲ್ಲಿ ಓಡಾಡುತ್ತಿದ್ದಾರೆ. ಇದರ ನಡುವೆ ಕೂಲ್ ಆದ ವಿಚಾರ ಒಂದು ನಡೆದಿದ್ದು, ಮಾಜಿ ಪ್ರಧಾನಿ ದೇವೇಗವಢರ ಮನೆಗೆ ಉಪರಾಷ್ಟ್ರಪತಿ ದಂಪತಿ ಆಗಮಿಸಿದ್ದಾರೆ. ಇವರ ಆಗಮನದಿಂದ ದೊಡ್ಡಗೌಡರ ಮನೆಯಲ್ಲಿ ಖುಷಿಯಾಗಿದ್ದಾರೆ. ಉಪರಾಷ್ಟ್ರಪತಿಗಳಾದ ಜಗದೀಶ್ ಧನಕರ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಸುಧೇಶ್ ಧನಕರ್ ಆಗಮಿಸಿದ್ದರು. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಆತ್ಮೀಯತೆಯಿಂದ ದಂಪತಿಯನ್ನು ಸ್ವಾಗತಿಸಿದರು‌.

ಕುಮಾರಸ್ವಾಮಿ ಹಾಗೂ ದೇವೇಗೌಡರ ಜೊತೆಯಲ್ಲಿಯೇ ದಂಪತಿ ಊಟ ಮಾಡಿದರು. ಜೊತೆಗೆ ಕೂತು ರಾಷ್ಟ್ರದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಿದರು‌. ಅದರಲ್ಲೂ ಜಗದೀಪ್ ಧನಕರ್ ಅವರು ದೇವೇಗೌಡರ ಬಳಿ ಅವರ ಪತ್ನಿ ಚನ್ನಮ್ಮ ಅವರ ಆರೋಗ್ಯದ ಬಗ್ಗೆ ವಿಚಾರಸಿದರು. ಬೇಗ ಗುಣಮುಖರಾಗಲಿ ಎಂದು ಹಾರೈಸಿದರು‌. ಒಮ್ಮೆ ನಿಮ್ಮ ಜೊತೆಗೆ ದೆಹಲಿಗೂ ಕರೆತನ್ನಿ ಎಂದೇ ಹೇಳಿದರು. ಕುಟುಂಬಸ್ಥರು ಕೂತು ಕೊಂಚ ಸಮಯ ಮಾತಾಡಿದ ಮೇಲೆ ಉಪರಾಷ್ಟ್ರಪತಿ ಜಗದೀಪ್ ದಂಪತಿಯನ್ನು ಬೀಳ್ಕೊಟ್ಟರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಉಪರಾಷ್ಟ್ರಪತಿಗಳು ಹಾಗೂ ಮಾಜಿ ಪ್ರಧಾನಿ ದೇವೇಗೌಡರ ನಡುವೆ ಸ್ನೇಹಪೂರ್ವಕ ಬಾಂಧವ್ಯವಿದೆ. ಇಬ್ಬರು ಪರಸ್ಪರ ಗೌರವ ಭಾವ ಇರಿಸಿಕೊಂಡಿದ್ದಾರೆ. ಅದರಲ್ಲೂ ಉಪರಾಷ್ಟ್ರಪತಿಗಳು ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಇದನ್ನು ಅನೇಕ ಸಲ ಕಣ್ಣಾರ ಕಂಡಿದ್ದೇನೆ. ಇಬ್ಬರೂ ನಾಯಕರು ರೈತ ಕುಟುಂಬದಿಂದ ಬಂದವರೆ. ಹೀಗಾಗಿ ಅವರಿಬ್ಬರ ಚರ್ಚೆ ಬಹುತೇಕ ಕೃಷಿ ಕೇಂದ್ರಿತವಾಗಿತ್ತು ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತ್ಯವನ್ನು ಓದುವುದು, ಹಾಡುವುದು ಉತ್ತಮ ಹವ್ಯಾಸ : ಬಿ.ಎ.ಸೀತಾರಾಂ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 27 : ಹಾಡುಗಾರಿಕೆಯಂತಹ ಉತ್ತಮ ಹವ್ಯಾಸಗಳನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ದಾವಣಗೆರೆ ಜಿಲ್ಲಾಸ್ಪತ್ರೆಯ ನಿವೃತ್ತ ನೇತ್ರತಜ್ಞ ಬಿ.ಎ.ಸೀತಾರಾಂ ಹೇಳಿದ್ದಾರೆ. ಅವರು ಭಾನುವಾರ ನಗರದ ಸ್ಕೌಟ್ ಮತ್ತು ಗೈಡ್ ಭವನದಲ್ಲಿ ಏರ್ಪಡಿಸಿದ್ದ

ಚನ್ನಪಟ್ಟಣ ಗೆಲುವಿನ ಶುಭ ಸೂಚನೆ ನೀಡಿದಳಾ ಹಾಸನಾಂಬೆ ತಾಯಿ : ಕುಮಾರಸ್ವಾಮಿ ದೇವರ ಮುಂದೆ ನಿಂತಾಗ ಆಗಿದ್ದೇನು..?

ಹಾಸನ: ಈಗಾಗಲೇ ಹಾಸನಾಂಬೆಯ ದರ್ಶನ ಆರಂಭವಾಗಿದೆ. ಹತ್ತು ದಿನಗಳು ಮಾತ್ರ ತಾಯಿ ದರ್ಶನ ಭಾಗ್ಯಾ ಕೊಡುತ್ತಾಳೆ. ಈ ಹತ್ತು ದಿನಗಳ ಕಾಲ ರಾಜಕಾರಣಿಗಳು, ಸಾರ್ವಜನಿಕರು ಎಲ್ಲರೂ ದರ್ಶನ ಪಡೆಯಲು ಕ್ಯೂ ನಿಂತಿರುತ್ತಾರೆ. ಇಂದು ಕೇಂದ್ರ

ಊಟದ ವಿಚಾರಕ್ಕೆ ತಂದೆಯನ್ನೇ ಕೊಂದ ಮಗ..!

ಹಿರಿಯೂರು : ಕ್ಷುಲ್ಲಕ ಕಾರಣಕ್ಕೆ ನಡುವೆ ಜಗಳವಾಗಿದ್ದು, ಈ ಜಗಳದಿಂದ ತಂದೆಯ ಕೊಲೆಯಾಗಿರುವ ಘಟನೆ ಕುಂದಲಗುರ ಗ್ರಾಮದಲ್ಲಿ ನಡೆದಿದೆ. 50 ವರ್ಷದ ರಂಗಸ್ವಾಮಿ ಮೃತ ದುರ್ದೈವಿಯಾಗಿದ್ದಾರೆ. ಕೇವಲ ಊಟದ ವಿಚಾರಕ್ಕೆ ತಂದೆ ಮಗನ ನಡುವೆ

error: Content is protected !!