Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದಾವಣಗೆರೆ | ಸೂಳಿಕೆರೆ ತುಂಬುವುದಕ್ಕೆ ಸನಿಹ : ರೈತರಲ್ಲಿ ಮೂಡಿದೆ ಸಂತಸ

Facebook
Twitter
Telegram
WhatsApp

ದಾವಣಗೆರೆ : ರಾಜ್ಯದಲ್ಲಿ ನಿರಂತರ ಮಳೆಯಿಂದ ಹಲವೆಡೆ ಸಮಸ್ಯೆಗಳು ಉಂಟಾಗಿವೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಕೆಲವೊಂದು ನಗರ ಪ್ರದೇಶ ರಸ್ತೆಗಳಲ್ಲೂ ಕೆರೆಯಂತಾಗಿದೆ. ಇದರ ಜೊತೆಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಕಟ್ಟೆಗಳಿ, ಜಲಾಶಯಗಳು ತುಂಬುವ ಸೂಚನೆ ನೀಡಿದೆ. ಇದರಿಂದ ಬೇಸಿಗೆ ಕಾಲಕ್ಕೂ ಅಚ್ಚಹಸಿರು ಸಿಗಲಿದೆ ಎಂಬುದು ರೈತರ ಸಂತಸಕ್ಕೆ ಕಾರಣವಾಗಿದೆ.

ಅದರಲ್ಲೂ ಏಷ್ಯಾದ ಅತಿ ದೊಡ್ಡ 2ನೇ ಕೆರೆ, ದಾವಣಗೆರೆಯ ಸೂಳಿಕೆರೆ ಕೋಡಿ ಬೀಳಲು ಕೇವಲ ಒಂದೂವರೆ ಅಡಿ ನೀರಷ್ಟೇ ಬಾಕಿ ಇದೆ. ಕೆರೆಯ ನೀರಿನ ಮೂಲವಾದ ಹರಿದ್ರಾವತಿ ಹಳ್ಳ ಮೈದುಂಬಿ ಹರಿಯುತ್ತಿದ್ದು, ಅಪಾರ ಪ್ರಮಾಣದಲ್ಲಿ ನೀರು ಕೆರೆಗೆ ಹರಿದು ಬರುತ್ತಿದೆ. ಹಳ್ಳ ತುಂಬಿ ಹರಿಯುತ್ತಿರುವ ಕಾರಣ ಸಾಗರ-ಕೊರಟಿಗೆರೆ ರಸ್ತೆ ಮೇಲೆ ನೀರು ಹರಿದು ಸಂಪರ್ಕ ಕಡಿತವಾಗಿದೆ. ನ್ಯಾಮತಿ ತಾಲೂಕಿನ ಯರಗನಾಳ್ ಗ್ರಾಮದ ಹೊರವಲಯದಲ್ಲಿರುವ ಗೌಡನಗೆರೆ ನಿರಂತರ ಮಳೆಯಿಂದಾಗಿ ಕೋಡಿಯಿಂದ ಹೆಚ್ಚಾಗಿ ನೀರು ಹೊರಗೆ ಬರುತ್ತಿದೆ. ಅಕ್ಕಪಕ್ಕದ ಗ್ರಾಮಗಳು ನೀರಿನಿಂದ ತುಂಬಿ ತುಳುಕುತ್ತಿವೆ. ಸದಾ ಮಳೆಯಾಗುತ್ತಿರುವ ಕಾರಣ ಒಂದಷ್ಟು ಸಮಸ್ಯೆಗಳು ಕಾಡುತ್ತಿವೆ. ಇದರ ನಡುವೆ ಜಲಾಶಯಗಳು, ಕೆರೆಗಳು ತುಂಬಿರುವುದು ಸಂಸತವನ್ನು ತಂದಿದೆ.

ಆದರೆ ಇಲ್ಲಿ ಬೆಳೆ ಹಾನಿ ಹೆಚ್ಚಾಗುತ್ತಿದೆ. ಮುಂಗಾರು ಬಿತ್ತನೆಗೆ ಅಪಾರ ಹಾನಿಯಾಗಿದೆ. ಆದರೆ ಈಗ ಹಿಂಗಾರು ಬಿತ್ತನೆಗೂ ಅವಕಾಶವಿಲ್ಲದಂತಾಗಿದೆ. ಅದರಲ್ಲೂ ಅಡಿಕೆ, ತೆಂಗು ತೋಟಗಳಲ್ಲಿ ನೀರು ನಿಂತಿದೆ. ಮಳೆ ಹೀಗೆ ಮುಂದುವರೆದರೆ ಇನ್ನಷ್ಟು ಮುಂಗಾರು ಬೆಳೆಗಳ ಜೊತೆಗೆ ತೋಟಗಾರಿಕಾ ಬೆಳೆಗಳು ನಾಶವಾಗುತ್ತವೆ. ಸೂಳೆಕೆರೆ ತುಂಬಿ ಹರಿಯುತ್ತಿರುವ ಕಾರಣ ಅಚ್ಚುಕಟ್ಟು ಪ್ರದೇಶದಲ್ಲಿ ಸಾವಿರಾರು ಎಕರೆ ಭತ್ತದ ಪ್ರದೇಶಗಳು ಜಲಾವೃತವಾಗಿವೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚನ್ನಪಟ್ಟಣದಲ್ಲಿ ನಿಖಿಲ್ ವರ್ಸಸ್ ಯೋಗೀಶ್ವರ್ : ಯುವರಾಜನ ಸ್ಪರ್ಧೆಗೆ ದೊಡ್ಡಗೌಡ್ರು ಏನಂದ್ರು..?

  ಬೆಂಗಳೂರು: ಚನ್ನಪಟ್ಟಣ ಉಪಚುನಾವಣಾ ಅಖಾಡದಲ್ಲಿ ಜಿದ್ದಾಜಿದ್ದಿನ ಕಣವಾಗಿ ಮಾರ್ಪಾಡಾಗಿದೆ. ಏನಾದ್ರು ಆಗಲಿ ಸ್ಪರ್ಧೆ ನಡೆದೇ ಬಿಡಲಿ ಎಂಬಂತೆ ದೊಡ್ಡ ಗೌಡರು ಮೊಮ್ಮಗನನ್ನೇ ಅಖಾಡಕ್ಕೆ ಇಳಿಸಿದ್ದಾರೆ. ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಅವರನ್ನೇ ನಿಲ್ಲಿಸಿ ಎಂದು

ಬೆಳೆ ನಷ್ಟ : ರೈತರು ಆತ್ಮಹತ್ಯೆ ಮಾಡಿಕೊಂಡಾಗ ಕೊಡುವ ಪರಿಹಾರ ಬದುಕಿದ್ದಾಗಲೆ ಕೊಡಿ : ರೈತರ ಅಳಲು

    ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ, ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 24 : ತಾಲೂಕಿನಲ್ಲಿ ಸುಮಾರು 2200 ಹೆಕ್ಟರ್ ಭೂಮಿಯಲ್ಲಿ ನಾಟಿ ಮಾಡಲಾಗಿದ್ದ ಈರುಳ್ಳಿ

ಶಿಗ್ಗಾಂವಿ | ಯಾಸಿರ್ ಅಹ್ಮದ್ ಖಾನ್ ಪಠಾಣ್ ಕಾಂಗ್ರೆಸ್ ಅಭ್ಯರ್ಥಿ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು , ಅಕ್ಟೋಬರ್ 24 : ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷದ ವರಿಷ್ಠರು ಆಯ್ಕೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು

error: Content is protected !!