ಬರೀ 10 ಗ್ರಾಂ ಚಿನ್ನ ತೆಗೆದುಕೊಳ್ಳಬೇಕು ಅಂದ್ರೆ ಎಂಭತ್ತು ಸಾವಿರಕ್ಕೂ ಹಡಚ್ಚು ಹಣ ಕೊಡಬೇಕು ಅಂದಾಗ ಮಧ್ಯಮ ವರ್ಗದವರು, ಬಡವರು ಏನು ಯೋಚನೆ ಮಾಡಲು ಸಾಧ್ಯ. ಪ್ರತಿದಿನ ಹಾಕಿಕೊಳ್ಳುವ ನೆಕ್ ಚೈನ್ ಕೂಡ 10 ಗ್ರಾಂ ಇಲ್ಲದೆ ಬರಲ್ಲ. ಹೀಗಿರುವಾಗ ಚಿನ್ನದ ಕನಸು ಕಾಣುವುದಕ್ಕೆ ಅಸಾಧ್ಯವೇ ಸರಿ ಎಂಬಂತೆ ಆಗಿದೆ. ದಿನೇ ದಿನೇ ಚಿನ್ನದ ಬೆಲೆ ಗಗನದತ್ತ ಮುಖ ಮಾಡುತ್ತಿದೆ. ಇಳಿಕೆಯಾಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡರೆ ಅಸಾಧ್ಯವೆನಿಸಿದೆ. ಇಂದು ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ ಹತ್ತು ಗ್ರಾಂ ಚಿನ್ನ ಎಂಭತ್ತು ಸಾವಿರದ ಗಡಿದಾಟಿ ಆಗಿದೆ. ಬೆಳ್ಳಿ ಬೆಲೆಯೂ ಇಳಿಕೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಕೆಜಿಗೆ ಲಕ್ಷ ರೂಪಾಯಿ ಆಗಿದೆ.
ಬೆಂಗಳೂರು ನಗರದಲ್ಲಿ ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನ 73,010 ರೂಪಾಯಿ ತಲುಪಿದೆ. 24 ಕ್ಯಾರೆಟ್ ಚಿನ್ನದ ಬೆಲೆ 79,650 ರೂಪಾಯಿ ತಲುಪಿದೆ. 18 ಕ್ಯಾರೆಟ್ ಚಿನ್ನದ ಬೆಲೆ 59,740 ರೂಪಾಯಿ ಆಗಿದೆ. ಚಿನ್ನದ ದರ ನೋಡಿ, ಮಹಿಳಾ ಮಣಿಯರ ತಲೆ ಗಿರಗಿರ ಎಂದು ತಿರುಗುತ್ತಿದೆ. ಚಿನ್ನವನ್ನು ಕೊಳ್ಳಬೇಕೋ ಅಥವಾ ಆರ್ಟಿಫಿಯಲ್ ಗೋಲ್ಡ್ ತಗೊಂಡು ಸಮಾಧಾನ ಮಾಡುಕೊಳ್ಳಬೇಕೋ ತಿಳಿಯದಾಗಿದೆ.
ಚಿನ್ನದ ಬೆಲೆ ಮಾತ್ರ ಅಲ್ಲ ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗುತ್ತಲೆ ಇದೆ. ಇಂದು ಕೆಜಿ ಬೆಳ್ಳಿಗೆ ಒಂದು ಲಕ್ಷ ರೂಪಾಯಿ ಆಗಿದೆ. ಬೆಳ್ಳಿ ಆಭರಣದಲ್ಲಿ ಆಭರಣಗಳ ತಯಾರಿಕೆಯೂ ಜಾಸ್ತಿಯಾಗಿರುವ ಕಾರಣದಿಂದಾನೂ ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎಂಬುದು ತಜ್ಞರ ಮಾತಾಗಿದೆ. ಈಗ ಮದುವೆ ಶುಭ ಸಮಾರಂಭಗಳಿರುವ ಕಾರಣ ಚಿನ್ನ ಬೆಳ್ಳಿ ಬೆಲೆಯಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.