ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 22 : ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕೆರೆ, ಕಾಲುವೆ ಅಪಾಯ ಮಟ್ಟದಲ್ಲಿ ಹರಿದರೆ ಇಲ್ಲೊಂದು ಐತಿಹಾಸಿಕ ಕೆರೆ ಏರಿಯಲ್ಲಿ ನೀರು ಸೋರಿಯಾಗುತ್ತಿದ್ದು ಒಂದು ಅಡಿ ನೀರು ಬಂದರೆ ಕೆರೆ ಏರಿ ಒಡೆದು ಮೇಲೆ ಚಳ್ಳಕೆರೆ ನಗರಕ್ಕೆ ನೀರು ನುಗ್ಗುವ ಆತಂಕ ಎದುರಾಗಿದೆ.
ಹಲವು ವರ್ಷಗಳ ಬಳಿಕ ನಗರದ ಸಮೀಪ ಇರುವ ಕರೆಕಲ್ಲು ಕೆರೆ ತುಂಬಿ ಏರಿಯಾ ಮೇಲೂ ಸಹ ನೀರು ಬರುವ ಹಂತಕ್ಕೆ ತಲುಪಿದೆ. ಕೆಲವು ಕಡೆ ಕೆರೆ ಏರಿಯಲ್ಲಿ ರಂದ್ರವಾಗಿ ನೀರು ಹೊರ ಹೋಗುತ್ತಿದೆ.
ಕೆರೆ ಏರಿ ಮೇಲೆ ನೀರು ನುಗ್ಗು ಭೀತಿ ಎದರುಗಿದ್ದು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜೆಸಿಬಿ ಹಾಗೂ ಕೊರೆಯುವ ಯಂತ್ರದ ಸಾಹಯದಿಂದ ಸಿಮೆಂಟ್ ಹಾಗೂ ಕಬ್ಬಿಣ ನಿರ್ಮಾಣದಿಂದ ಮಾಡಲಾಗಿದ್ದ ಕೆರೆ ಕೋಡಿ ತಗ್ಗಿಸುವ ಕಾರ್ಯ ನಡೆಯುತ್ತಿದ್ದು ಮುನ್ನೆಚ್ಚರಿಕೆ ಯಾಗಿ ನಾಯಕನಹಟ್ಟಿಗೆ ಹೋಗುವ ರಸ್ತೆ ಬಂದ್ ಮಾಡಲಾಗಿದೆ.