ಬೆಂಗಳೂರು : ಕಳೆದ ಸೀಸನ್ ನಿಂದ ಬಿಗ್ ಬಾಸ್ ರೀತಿ ನೀತಿಯೇ ಬದಲಾಗಿದೆ. ಮೊದಲೆಲ್ಲಾ ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ಭಾವನೆಗಳಿಗೂ ಜಾಗ ಇರುತ್ತಾ ಇತ್ತು. ಆದರೆ ಈಗ ಓನ್ಲಿ ಸ್ಪರ್ಧೆ. ಗೆಲ್ಬೇಕು ಅಂದ್ರೆ ಕಿರುಚಾಡಬೇಕು, ಹೊಡೆದಾಡುವ ಹಂತಕ್ಕೆ ತಲುಪಬೇಕು. ಇದೇ ಬಿಗ್ ಬಾಸ್ ಅಂದುಕೊಂಡುಬಿಟ್ಟಿದ್ದಾರೆ ಈಗಿನ ಸ್ಪರ್ಧಿಗಳು. ಇದರ ಪರಿಣಾಮ ಕೋಪ ಅತಿರೇಕಕ್ಕೆ ಹೋಗಿ, ನಾಲಿಗೆಯಿಂದ ಕೆಟ್ಟ ಪದಗಳು ಬಂದು, ತಳ್ಳಾಟ ನೂಕಾಟವೂ ಆಗಿದೆ. ಹೀಗಾಗಿ ಲಾಯರ್ ಜಗದೀಶ್ ಹಾಗೂ ರಂಜಿತ್ ಮನೆಯಿಂದ ಹಿರಗೆ ಬಂದಿದ್ದಾರೆ.
ಮನೆಯಿಂದ ಹೊರ ಬಂದ ಲಾಯರ್ ಮೊದಲ ರಿಯಾಕ್ಷನ್ ನೀಡಿದ್ದು, ಕ್ಷಮೆಯನ್ನು ಕೇಳಿದ್ದಾರೆ. ನೂರಾರು ಜ್ಯಾನೆರಾ, ಸಾವಿರಾರು ಬಿಗ್ ಬಾಸ್ ಸಿಬ್ಬಂದಿ, ಆ ನಿರ್ದೇಶಕ, ಆ ಮಾಂತ್ರಿಕ ತಂತ್ರಜ್ಞರು, 20 ಕೋಟಿಗೂ ಅಧಿಕ ಬಿಗ್ ಬಾಸ್ ಅಭಿಮಾನಿಗಳ ಆಶೀರ್ವಾದದಿಂದ ಲಾಯರ್ ಜಗದೀಶ್ ಕರ್ನಾಟಕದ ಹೊಸ ಕ್ರಶ್ ಆಗಿದ್ದಾನೆ. ನಿಮ್ಮ ಪ್ರತಿಯೊಂದು ಚಪ್ಪಾಳೆ, ಸಂದೇಶ, ನಿಮ್ಮ ಆಶೀರ್ವಾದ ನನ್ನ ಈ ಬಿಗ್ ಬಾಸ್ ಪಯಣ ಯಶಸ್ಸು. ಅದು ನೀವೂ ಇಟ್ಟ ಈ ನಂಬಿಕೆ. ಮತ್ತೊಮ್ಮೆ ಕೋಟಿ ಕೋಟಿ ನಮನ. ಸಾರ್ಥಕ ಆಯಿತು. ನನ್ನ ಈ ಹುಟ್ಟು, ಈ ಪ್ರೀತಿ, ನನ್ನ ಗೆಲುವಿಗೆ ನೀವೂ ಕೊಟ್ಟ ಒಡನಾಟ, ನನ್ನ ಬಳಿ ಪದಗಳು ಕಡಿಮೆ. ವಿಶ್ಲೇಷಣೆ ಮಾಡಲು.
ನನ್ನ ಹೀರೋ ಸುದೀಪ್. ನನ್ನ ಕ್ಷಮೆಯನ್ನು ದಯವಿಟ್ಟು ಸ್ವೀಕರಿಸಿ. ರಂಜಿತ್ ಮಾನಸ ಮತ್ತು ಎಲ್ಲರು ನನ್ನನ್ನು ಕ್ಷಮಿಸಿ. ನೀವೆಲ್ಲ ಚಿಕ್ಕ ವಯಸ್ಸಿನಲ್ಲಿ ಅದ್ಭುತ ಕಲಾವಿದರು, ನಾನು ನಿಮ್ಮ ಜೊತೆಯಲ್ಲಿ ಒಬ್ಬನಾಗಿ ನಗಲು ಪ್ರಯತ್ನ ಪಟ್ಟೆ ಅಷ್ಟೇ. ಈ ನಿಟ್ಟಿನಲ್ಲಿ ಕೆಲವು ತಪ್ಪುಗಳು ನನ್ನಿಂದ ಆಗಿವೆ ಎಂದಿದ್ದಾರೆ.