ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲು ಭೂಮಿ ವಿಚಾರ ಸುಪ್ರೀಂ ಕೋರ್ಟ್ ನಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಕುರುಬಾರಹಳ್ಳಿ, ಆಲನಹಳ್ಳಿ, ಚೌಡಹಳ್ಳಿಯ 1536 ಎಕರೆ ಭೂ ಪ್ರದೇಶ ಮೈಸೂರು ಅರಸರಿಗೆ ಸೇರಿದ್ದು ಅಂತ ಸುಪ್ರೀಂ ಕೋರ್ಟ್ ತೀರ್ಮಾನ ತಿಳಿಸಿದೆ.
ಕಳೆದ ಜುಲೈನಲ್ಲಿ ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕೂಡ ಇದೇ ತೀರ್ಮಾನ ನೀಡಿತ್ತು. ಹೈಕೋರ್ಟ್ ತೀರ್ಪನ್ನ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಇದೀಗ ಸುಪ್ರೀಂಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನ ಎತ್ತಿ ಹಿಡಿದಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ತಲೆ ದಂಡ ಬಂದಂತಾಗಿದೆ. ರಾಜ ಮನೆತನದವರಿಂದ ಭೂಮಿ ಖರೀದಿಸಿದವರ ಹೆಸರಿಗೆ ಖಾತೆ ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ವಿಳಂಬ ಮಾಡಿದ್ದಕ್ಕೆ ಅಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಭೂಮಾಲಿಕರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿತ್ತು. ಇದೀಗ ಅದರ ವಿಚಾರಣೆ ಕೂಡ ಮುಂದೂಡಲಾಗಿದೆ. ಡಿಸೆಂಬರ್ 7ಕ್ಕೆ ಇದರ ವಿಚಾರಣೆ ಮುಂದೂಡಲಾಗಿದೆ.