ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 17 : ನಾವು ಮೌಲ್ಯಯುತ ಜೀವನ ನಡೆಸಲು ಮಹಾತ್ಮರ ಜೀವನ, ತತ್ವಾದರ್ಶಗಳನ್ನು ಅನುಸರಣೆ ಮಾಡಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್‌ನಲ್ಲಿ ಗುರುವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾತ್ಮರ ಜೀವನ ಮತ್ತು ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು ನಮ್ಮ ಉತ್ತಮ ಬದುಕಿಗೆ ಪ್ರೇರಣೆ ನೀಡುತ್ತವೆ ಎಂದರು.
ವಾಲ್ಮೀಕಿ ರಚಿಸಿದ ರಾಮಾಯಣ ನಮ್ಮ ನೆಲದ ಮೊದಲ ಮಹಾಕಾವ್ಯವಾಗಿದ್ದು ಅವರು ತಾತ್ವಿಕತೆ, ಆದರ್ಶ, ಸಮನ್ವಯತೆಯನ್ನೊಳಗೊಂಡ ಕವಿಯಾಗಿದ್ದಾರೆ. ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ದಾರ್ಶನಿಕರ ಜೀವನ ಮೌಲ್ಯಗಳನ್ನು ತಿಳಿಸುವುದರ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿ ಭವಿಷ್ಯದ ಉತ್ತಮ ಜೀವನ ನಡೆಸಲು ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.
ಉಪ ಪ್ರಾಚಾರ್ಯ ಅಶ್ವಥ್ ನಾರಾಯಣ, ಹಿರಿಯ ಉಪನ್ಯಾಸಕರಾದ ಎಸ್.ಸಿ.ಪ್ರಸಾದ್, ಎಸ್.ಜ್ಞಾನೇಶ್ವರ, ತಿಪ್ಪೇಸ್ವಾಮಿ, ಎಚ್.ಗಿರಿಜಾ, ಉಪನ್ಯಾಸಕರಾದ ಆರ್.ನಾಗರಾಜು, ಎಸ್.ಬಸವರಾಜು, ನಿತ್ಯಾನಂದ, ಸಿದ್ದೇಶಿ, ಲೀಲಾವತಿ, ಶಿವಲೀಲಾ, ಪದ್ಮ, ಅರ್ಜುಮಂದ್ ಬಾನು, ರಂಗಸ್ವಾಮಿ, ತಾಂತ್ರಿಕ ಸಹಾಯಕ ಅವಿನಾಶ್, ಅಧೀಕ್ಷಕಿ ಗೀತಾ ಮತ್ತು ಸಿಬ್ಬಂದಿ ವರ್ಗದವರು ಇದ್ದರು.