ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಇಡೀ ವಿಶ್ವದಾದ್ಯಂತ ಸೌಂಡು ಮಾಡಲು ಪ್ರಯತ್ನ ಪಟ್ಟಿದ್ದು ಮಾರ್ಟಿನ್ ಸಿನಿಮಾ. 13 ಭಾಷೆಯಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ತಯಾರಾಗಿತ್ತು. ಆದರೆ ರಿಲೀಸ್ ಆದ ಮೇಲೆ ಅಷ್ಟಾಗಿ ಸದ್ದು ಮಾಡಲಿಲ್ಲ. ನೂರಾರು ಕೋಟಿ ಬಂಡವಾಳ ಹಾಕಿದ್ದರಿಂದ ಥಿಯೇಟರ್ ಗೆ ಜನ ಬರಲೇಬೇಕು ಎಂಬ ಅಭಿಲಾಷೆ ಇಡೀ ತಂಡದ್ದಾಗಿರುತ್ತದೆ. ಈಗಂತು ಒಂದೇ ಒಂದು ವಾರ ಥಿಯೇಟರ್ ನಲ್ಲಿ ಸಿನಿಮಾ ಉಳಿಯುವುದೇ ಹೆಚ್ಚು. ಹೀಗಿರುವಾಗ ಆರಂಭದಲ್ಲೇ ನೆಗೆಟಿವ್ ಕಮೆಂಟ್ ಗಳು ಬಂದರೆ ಸಿನಿಮಾದ ಕಲೆಕ್ಷನ್ ಮೇಲೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ಸಿನಿಮಾ ತಂಡ ನೆಗೆಟಿವ್ ಕಮೆಂಟ್ ನೀಡಬೇಡಿ ಎಂದೇ ಹೇಳುತ್ತಾರೆ. ಆದರೆ ಯೂಟ್ಯೂಬರ್ ಸುಧಾಕರ್ ಎಂಬಾತ ಮಾರ್ಟಿನ್ ಸಿನಿಮಾ ನೆಗೆಟಿವ್ ರಿವ್ಯೂ ಮಾಡಿಯೇ ಸುದ್ದಿಯಾಗಿದ್ದರು. ಇದೀಗ ಹಲ್ಲೆ ಆರೋಪದ ಮೇಲೆ ಸುಧಾಕರ್ ಅರೆಸ್ಟ್ ಆಗಿದ್ದಾರೆ.
ಹಲ್ಲೆ ಆರೋಪದಲ್ಲಿ ಸುಧಾಕರ್ ಭಾಗಿಯಾಗಿದ್ದರು ಎನ್ನಲಾಗಿದ್ದು, ಇದೀಗ ಮಾದನಾಯಕನಹಳ್ಳಿ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ. ಸುಧಾಕರ್ ವಿರುದ್ಧ ಪೊಲೀಸರು ವಾರೆಂಟ್ ಸಹ ಜಾರಿ ಮಾಡಿದ್ದರು. ಹಲ್ಲೆ ಕೇಸಿನಲ್ಲಿ ಸುಧಾಕರ್ ಅರೆಸ್ಟ್ ಆಗಿದ್ದಾರೆ. ಸುಧಾಕರ್ ವಿಚಾರಣೆ ನಡೆಸಿದ ಬಳಿಕ ಹಲ್ಲೆಯ ಮಾಹಿತಿ ಸಿಗಲಿದೆ.
ಮಾರ್ಟಿನ್ ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆ ಮಾಡಿದ್ದಾಗಲೂ ಧ್ರುವ ಸರ್ಜಾ ಫ್ಯಾನ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಾದನಾಯಕನಹಳ್ಳಿ ಪೊಲೀಸರು ಆಗ ಠಾಣೆಗೆ ಕರೆಸಿ, ಬುದ್ದಿ ಮಾತು ಹೇಳಿ, ವಿಡಿಯೋ ಡಿಲೀಟ್ ಮಾಡಿ ಕಳುಹಿಸಿದ್ದರು. ಆದರೆ ಈಗ ಹಲ್ಲೆ ಆರೋಪದ ಮೇಲೆ ಅರೆಸ್ಟ್ ಮಾಡಿದ್ದಾರೆ.