ಬೆಂಗಳೂರು: ಪೇಜಾವರ ಶ್ರೀಗಳ ಬಗ್ಗೆ ನೀಡಿದ್ದ ಹಂಸಲೇಖ ಅವರ ಹೇಳಿಕೆ ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಅವರ ವಿರುದ್ಧ ದೂರು ಕೂಡ ದಾಖಲಾಗಿತ್ತು. ಈ ಸಂಬಂಧ ಇಂದು ಹಂಸಲೇಖ ಅವರು ವಿಚಾರಣೆಗೆ ಹಾಜರಾಗುವ ಎಲ್ಲಾ ಸಾಧ್ಯತೆಗಳಿವೆ. ಈ ಬೆನ್ನಲ್ಲೇ ಪೊಲೀಸ್ ಠಾಣೆಗೆ ಬಿಗಿ ಭದ್ರತೆ ನೀಡಲಾಗಿದೆ.
ಪೊಲೀಸ್ ಠಾಣೆಯ ಎದುರು ಈಗಾಗ್ಲೇ ಹಿಂದೂಪರ ಸಂಘಟನೆಗಳು ಜಮಾಯಿಸಿದ್ದಾರೆ. ಭಜರಂಗದಳ ಹಾಗೂ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಜಮಾಯಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಂಸಲೇಖ ಅವರು ಕ್ಷಮೆ ಕೇಳಿದರಷ್ಟೇ ಸಾಲದು ಬೇಷರತ್ ಕ್ಷಮೆಯಾಚಿಸಬೇಕು. ಈ ವಿಷಯದಲ್ಲಿ ಚೇತನ್ ಅವರು ಬರುವ ಅವಶ್ಯಕತೆ ಇಲ್ಲ. ಅವರು ಸಮಾಜ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಚೇತನ್ ಈ ದೇಶದ ನಾಗರಿಕನಲ್ಲ. ಯಾವುದೇ ಕಾರಣಕ್ಕೂ ಚೇತನ್ ಅವರನ್ನು ಠಾಣೆ ಒಳಗೆ ಬಿಡಬಾರದು ಎಂದು ಭಜರಂಗ ದಳದ ಮುಖಂಡ ತೇಜಸ್ ಕಿಡಿಕಾರಿದ್ದಾರೆ.
ಇನ್ನು ಹಂಸಲೇಖ ಅವರ ಜೊತೆಗೆ ನಟ ಚೇತನ್ ಕೂಡ ಪೊಲೀಸ್ ಠಾಣೆಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಠಾಣೆ ಎದುರು ಸಂಘಟಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಯಾವುದೇ ಗಲಾಟೆಗಳಾಗದಂತೆ ತಡೆಯಲು ಪೊಲೀಸರು ಬ್ಯಾರಿಕೇಡ್ ಗಳನ್ನ ಹಾಕಿ ಭದ್ರತೆ ಒದಗಿಸಿದ್ದಾರೆ.