Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಿಚ್ಚ ಬಿಗ್ ಬಾಸ್ ಗೆ ವಿದಾಯ ಹೇಳಿದ್ದಕ್ಕೆ ಕಾರಣ ಯಾರು..? ಹೊಸ ಟ್ವೀಟ್ ನಲ್ಲಿ ಏನಿದೆ..?

Facebook
Twitter
Telegram
WhatsApp

 

 

ಬಿಗ್ ಬಾಸ್ ಸೀಸನ್ 11.. ಸತತ ಹನ್ನೊಂದನೇ ವರ್ಷವೂ ಬಿಗ್ ಬಾಸ್ ಅನ್ನು ಅತ್ಯದ್ಭುತವಾಗಿ ನಡೆಸಿಕೊಂಡು ಬಂದ ಹೆಗ್ಗಳಿಕೆ ಕಿಚ್ಚ  ಸುದೀಪ್ ಅವರಿಗೆ  ಸಲ್ಲುತ್ತದೆ. ಆದರೆ ಸೀಸನ್ 12ಕ್ಕೆ ಕಿಚ್ಚ ಮುಂದುವರೆಯಲ್ಲ ಎಂಬುದು ಬಿಗ್ ಬಾಸ್ ಫ್ಯಾನ್ಸ್ ಬೇಸರ. ಕಿಚ್ಚ ಸುದೀಪ್ ಯಾವಾಗ ಬಿಗ್ ಬಾಸ್ ಗೆ ಗುಡ್ ಬೈ ಹೇಳುತ್ತಿರುವ ಪೋಸ್ಟ್ ಹಾಕಿದರೋ ಅಂದಿನಿಂದ ಸಾಕಷ್ಟು ವಿಚಾರಗಳು ಚರ್ಚೆಗೆ ಗ್ರಾಸವಾಗಿವೆ. ಸುದೀಪ್ ಅವರಿಗೆ ವಾಹಿನಿ ಏನಾದರೂ ನೋವು ಮಾಡೀತಾ ಎಂಬೆಲ್ಲಾ ಸುದ್ದಿಗಳು ವೈರಲ್ ಆಗುತ್ತಿವೆ. ಕಳೆದ ಎರಡ್ಮೂರು ದಿನದಿಂದ ಹಬ್ಬಿದ ಸುದ್ದಿಗೆ ಇದೀಗ ಸುದೀಪ್ ಅವರೇ ಉತ್ತರ ನೀಡಿದ್ದಾರೆ.

ಇಂದು ಮತ್ತೊಂದು ಟ್ವೀಟ್ ಮೂಲಕ ಕ್ಲಾರಿಟಿ ಕೊಟ್ಟಿದ್ದಾರೆ. ‘ನನ್ನ ಒಂದು ಟ್ವೀಟ್ ಗೆ ನೀವುಹ ಸ್ಪಂದಿಸಿರುವ ರೀತಿಗೆ ಹಾಗೂ ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ನಾನು ಮೆಚ್ಚುತ್ತೇನೆ. ಇದು ನನಗೆ ತುಂಬಾ ಸಂತೋಷವಾಗಿದೆ. ಆದರೆ ನನ್ನ ಹಾಗೂ ಚಾನೆಲ್ ನಡುವೆ ಏನೋ ಸಂಘರ್ಷವಾಗಿದೆ ಎಂದು ಹರಿದಾಡುತ್ತಿರುವ ವಿಡಿಯೋ ಹಾಗೂ ಪ್ರತಿಕ್ರಿಯೆಗಳನ್ನು ಸೃಷ್ಟಿಸುತ್ತಿರುವವರಿಗೆ ನಾನು ಕೇಳಿಕೊಳ್ಳುವುದು ಇಷ್ಟೇ. ನಾವೂ ಒಂದು ದೀರ್ಘವಾದ ಹಾಗೂ ಪಾಸಿಟಿವ್ ಹಾದಿಯಲ್ಲಿ ಸಾಗಿದ್ದೇವೆ. ಇದರಲ್ಲಿ ಒಬ್ಬರಿಗೊಬ್ಬರು ಅಗೌರವದಿಂದ ನಡೆದುಕೊಳ್ಳುವ ಪ್ರಶ್ನೆಯೇ ಹುಟ್ಟುವುದಿಲ್ಲ.

ಇದರ ಸುತ್ತ ಹುಟ್ಟಿರುವ ವಿಚಾರಗಳು ಸುಳ್ಳುಗಳೇ ಆಗಿವೆ. ಹಾಗೇ ಹುಟ್ಟು ಹಾಕಿದವರಲ್ಲಿ ಮಾಹಿತಿಯ ಕೊರತೆಯೂ ಇದೆ. ನಾನು ಮಾಡಿದ ಟ್ವೀಟ್ ಅತ್ಯಂತ ಪ್ರಾಮಾಣಿಕವಾದದ್ದಾಗಿದೆ. ನನ್ನ ಮತ್ತು ಕಲರ್ಸ್ ಕನ್ನಡದ ನಡುವಿನ ಸಂಬಂಧ ಒಂದು ಅದ್ಭುತವಾದದ್ದು. ಅವರು ನನ್ನನ್ನು ತುಂಬಾ ಗೌರವದಿಂದ ನಡೆಸಿಕೊಂಡಿದ್ದಾರೆ. ಡೈರೆಕ್ಟರ್ ಪ್ರಕಾಶ್ ಅದ್ಭುತ ಪ್ರತಿಭೆ ಇರುವ ವ್ಯಕ್ತಿ. ನನ್ನೊಂದಿಗೆ ಕೆಲಸ ಮಾಡಿದವರು ಯಾವುದೋ ಅಪವಾದ ಎದುರಿಸುತ್ತಿದ್ದರೆ, ಅದನ್ನು ನೋಡಿಕೊಂಡು ಸಂಭ್ರಮಿಸುವ ವ್ಯಕ್ತಿ ನಾನಲ್ಲ’ ಎಂದು ಹಬ್ಬಿರುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಳಕಲ್ಲಿನ ಮಹಾಂತೇಶ್‌ ಎಂ.ಗಜೇಂದ್ರಗಡ ಅವರಿಗೆ ಸಂದ ಶ್ರೀ ಶಿವಕುಮಾರ ಪ್ರಶಸ್ತಿ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 18 : ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘ ರಂಗಭೂಮಿಗೆ ಸಲ್ಲಿಸಿದ ಜೀವಮಾನದ ಕೊಡುಗೆಯನ್ನು ಮನ್ನಿಸಿ ಪ್ರತಿವರ್ಷ ಕೊಡಮಾಡುವ ಪ್ರತಿಷ್ಠಿತ ಶ್ರೀ ಶಿವಕುಮಾರ ಪ್ರಶಸ್ತಿಗೆ ಈ ಬಾರಿ  ಇಳಕಲ್ಲಿನ

ಚಿತ್ರದುರ್ಗ : ಮಳೆಗೆ ಜಿಲ್ಲೆಯಾದ್ಯಂತ 80 ಮನೆಗಳು ಹಾನಿ : ಮಳೆ ವರದಿ…!

ಚಿತ್ರದುರ್ಗ.ಅ.18:  ಗುರುವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 11.3 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 15 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 6.8 ಹಿರಿಯೂರು ತಾಲ್ಲೂಕು 14.2 ಮಿ.ಮೀ, ಹೊಳಲ್ಕೆರೆ ತಾಲ್ಲೂಕು

ಚಿತ್ರದುರ್ಗ | ಮೂವರು ಮಹಿಳೆಯರು ಕಾಣೆ : ಪತ್ತೆಗೆ ಮನವಿ

ಚಿತ್ರದುರ್ಗ. ಅ.18: ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂವರು ಮಹಿಳೆಯರು ಕಾಣೆಯಾದ ಕುರಿತು ಮೂರು  ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಹೊಳಲ್ಕೆರೆ ತಾಲ್ಲೂಕಿನ ತೇಕಲವಟ್ಟಿ ಗೊಲ್ಲರಹಟ್ಟಿ ಗ್ರಾಮದ ರೇಣುಕಮ್ಮ ಗಂಡ ಕರಿಯಪ್ಪ

error: Content is protected !!