Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಿಗ್ ಬಾಸ್ ಗೆ ಸುದೀಪ್ ಗುಡ್ ಬೈ : ತಂದೆಯ ನಿರ್ಧಾರಕ್ಕೆ ಸಾನ್ವಿ ಹೇಳಿದ್ದೇನು..?

Facebook
Twitter
Telegram
WhatsApp

ಬಿಗ್ ಬಾಸ್ 11 ವರ್ಷದ ಜರ್ನಿ. ಈ ಹತ್ತು ಸೀಸನ್ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಕಿಚ್ಚ ಸುದೀಪ್ ಅವರೇ 11ನೇ ಸೀಸನ್ ಅನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಅದ್ಯಾಕೋ ಏನೋ ಬಿಗ್ ಬಾಸ್ ಜರ್ನಿಗೆ ಕಿಚ್ಚ ಸುದೀಪ್ ವಿದಾಯ ಘೋಷಿಸಿದ್ದಾರೆ. ಇದು ನನ್ನ ಕಡೆಯ ಬಿಗ್ ಬಾಸ್ ಜರ್ನಿ ಎಂದೇ ಹೇಳಿದ್ದಾರೆ. ಇದು ಬಿಗ್ ಬಾಸ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಆಗಿದೆ.

 

ನಿನ್ನೆ ರಾತ್ರಿಯೇ ಕಿಚ್ಚ ಸುದೀಪ್ ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಇದೀಗ ತಂದೆಯ ನಿರ್ಧಾರದ ಬಗ್ಗೆ ಮಗಳು ಸಾನ್ವಿ ಕೂಡ ಪೋಸ್ಟ್ ಹಾಕಿದ್ದಾರೆ. ತಂದೆಯ ನಿರ್ಧಾರವನ್ನು ಗೌರವಿಸುವುದಾಗಿ ತಿಳಿಸಿದ್ದಾರೆ.

‘ಅಪ್ಪ.. ಬಿಗ್ ಬಾಸ್ ಶೋನಲ್ಲಿ ನಿಮಗೆ ಬೇರೆ ಯಾರೂ ಸರಿಸಾಟಿಯೇ ಇಲ್ಲ. ಇಲ್ಲಿವರೆಗೂ ಬಿಗ್ ಬಾಸ್ ಶೋಗೆ ನೀವೂ ನೀಡಿದ ಕೊಡುಗೆಯನ್ನು ನಾನು ಗೌರವಿಸುತ್ತೇನೆ. ಅಪ್ಪ ನಿಮ್ಮ ಬಿಗ್ ಬಾಸ್ ಜರ್ನಿ ಅತ್ಯಂತ ಹೆಮ್ಮೆ ಪಡುವಂಥದ್ದು. ಬೇರೆ ಯಾರೂ ಕೂಡ ನಿಮ್ಮ ರೀತಿ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಬಿಗ್ ಬಾಸ್ ವೇದಿಕೆ ಮೇಲೆ ನೀವೂ ಅಮೋಘವಾಗಿ ಕಾಣಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುತ್ತೀರಿ. ಆದರೆ ಬಿಗ್ ಬಾಸ್ ಜರ್ನಿಯಲ್ಲಿ ನಿಮ್ಮನ್ನು ನೋಡಿದ್ದು, ನನಗೆ ಅತ್ಯಂತ ಸಂತೋಷವನ್ನು ತಂದಿದೆ. ಬಿಗ್ ಬಾಸ್ ಶೋಗಾಗಿ ನೀವೂ ಹಾಕಿದ ಪರಿಶ್ರಮಕ್ಕೆ ಸಾಟಿಯೇ ಇಲ್ಲ’ ಎಂದು ಸಾನ್ವಿ ಸುದೀಪ್ ಅವರು ತಂದೆಯ ಪೋಸ್ಟರ್ ಗೆ ರಿಪ್ಲೆ ಮಾಡಿದ್ದಾರೆ.

ವಾಹಿನಿ ಮತ್ತೆ ಏನಾದರೂ ಸುದೀಪ್ ಅವರನ್ನು ಮನವಿ ಮಾಡಿ ಮತ್ತೆ ನಿರೂಪಣೆಗೆ ಮುಂದುವರೆಸುತ್ತಾರೆ ಎಂಬ ನಂಬಿಕೆ ಇತ್ತು. ಆದರೆ ಈಗ ಸಾನ್ವಿ ಅವರು ಕೂಡ ಅಪ್ಪನ ನಿರ್ಧಾರ ಗೌರವಿಸುತ್ತೇನೆ ಎಂಬ ಪೋಸ್ಟ್ ಹಾಕಿರುವುದು, ಸುದೀಪ್ ಅವರು ಮತ್ತೆ ವಾಪಾಸ್ ಬರುವುದು ಅನುಮಾನವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪಠ್ಯಪುಸ್ತಕಗಳಲ್ಲಿ ಸಿರಿಯಜ್ಜಿ ಜನಪದ ಗೀತೆಗಳನ್ನು ಸೇರಿಸಿ : ಒ. ಚಿತ್ತಯ್ಯ ಒತ್ತಾಯ

ಸುದ್ದಿಒನ್, ಪರಶುರಾಮಪುರ, ಅಕ್ಟೋಬರ್. 18 : ಪ್ರಾಥಮಿಕ ಹಾಗೂ ಪ್ರೌಢಶಾಲಾ ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ನಾಡೋಜೆ ದಿವಂಗತ ಜಾನಪದ ಸಿರಿ ಸಿರಿಯಜ್ಜಿ ಜನಪದ ಗೀತೆಗಳನ್ನು ಸೇರಿಸಿ ಇಂದಿನ ಅಧುನಿಕ ಕಾಲಘಟ್ಟದ ವಿದ್ಯಾರ್ಥಿಗಳಿಗೆ ಜನಪದ ಸಾಹಿತ್ಯದ

ಚಿತ್ರದುರ್ಗದಲ್ಲಿ ಸ್ವಾಮೀಜಿ ವಿರುದ್ಧ ಮುಸ್ಲಿಮರಿಂದ ಬೃಹತ್ ಪ್ರತಿಭಟನೆ : ಕಾನೂನು ಕ್ರಮಕ್ಕೆ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 18 : ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಪ್ರವಾದಿ ಮಹಮದ್ ಪೈಗಂಬರ್ ರವರ ಬಗ್ಗೆ

ಸಾಮಾಜಿಕ ಕಾರ್ಯಗಳಿಗೆ ಸ್ವಯಂ ಸೇವಕರ ಅಗತ್ಯ : ಶಾಸಕ ಕೆ.ಸಿ.ವೀರೇಂದ್ರ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 18 : ಸಾಮಾಜಿಕ ಕಳಕಳಿಯುಳ್ಳವರು ಸಂಘದಲ್ಲಿದ್ದಾಗ ಮಾತ್ರ ಬಲಿಷ್ಟವಾಗಿ ಮುನ್ನಡೆಸಿಕೊಂಡು ಹೋಗಬಹುದು ಎಂದು ಶಾಸಕ

error: Content is protected !!