ಟೀಂ ಇಂಡಿಯಾದ ಸ್ಟಾರ್ ವೇಗಿ ಎಂದೇ ಗುರುತಿಸಿಕೊಂಡಿದ್ದ ಮೊಹಮ್ಮದ್ ಸಿರಾಜ್ ಇದೀಗ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡ ಸಿರಾಜ್ ಗೆ ಅಭಿಮಾನಿಗಳು ಕೂಡ ವಿಶ್ ಮಾಡಿದ್ದಾರೆ. ಸದ್ಯ ಮೊಹಮ್ಮದ್ ಸಿರಾಜ್ ತೆಲಂಗಾಣದ ಡೆಪ್ಯೂಟಿ ಸೂಪರಿಡೆಂಟ್ ಆಫ್ ಪೊಲೀಸ್ ಆಗಿದ್ದಾರೆ. ಇಂದು ಮೊಹಮ್ಮದ್ ಸಿರಾಜ್ ಅವರು ತೆಲಂಗಾಣ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಗೆ ರಿಪೋರ್ಟ್ ಮಾಡಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತದ ಪರವಾಗಿ ಮೊಹಮ್ಮದ್ ಸಿರಾಜ್ ಮಾಡಿದ ಸಾಧನೆಗಾಗಿ ತೆಲಂಗಾಣ ಸರ್ಕಾರ ಡಿಸಿಪಿ ಹುದ್ದೆ ನೀಡಿ ಗೌರವಿಸಿದೆ. ರಾಜ್ಯ ಸರ್ಕಾರ ತನಗೆ ನೀಡಿರುವ ಪೋಸ್ಟ್ ಸ್ವೀಕರಿಸಿದ್ದಾಗಿ, ರಿಪೋರ್ಟ್ ನಲ್ಲಿ ಡಿಜಿಪಿಗೆ ಸಿರಾಜ್ ತಿಳಿಸಿದ್ದಾರೆ. ಆರ್ಸಿಬಿ ತಂಡದ ಸ್ಟಾರ್ ವೇಗಿಯಾಗಿದ್ದ ಮೊಹಮ್ಮದ್ ಸಿರಾಜ್ ಈಗ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಇವರ ತಿಂಗಳ ಸಂಬಳ 1,37,050 ರೂಪಾಯಿ ಆಗಿದೆ. ಡಿಸಿಪಿಯಾಗಿ ಈಗಾಗಲೇ ಚಾರ್ಜ್ ತೆಗೆದುಕೊಂಡಿದ್ದಾರೆ.
ಮೊಹಮ್ಮದ್ ಸಿರಾಜ್ ಸಾಮಾನ್ಯ ಆಟೋ ಚಾಲಕನ ಮಗನಾಗಿ ಕ್ರಿಕೆಟ್ ಜೀವನ ಆರಂಭಿಸಿದರು. ತಮ್ಮ ಅಸಾಧಾರಣ ಪ್ರತಿಭೆಯಿಂದಾನೇ ಆರ್ಸಿಬಿ ತಂಡ ಸೇರಿಕೊಂಡರು. ಬಳಿಕ ಟೀಂ ಇಂಡಿಯಾದ ವೇಗಿ ಎನಿಸಿಕೊಂಡರು. 2024ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದಾಗ ಮೊಹಮ್ಮದ್ ಸಿರಾಜ್ ಕೂಡ ಸದಸ್ಯರಾಗಿದ್ದರು. ವಿಶ್ವಕಪ್ ಗೆದ್ದಾಗ ಸಿರಾಜ್ ಗೆ ಬಿಸಿಸಿಐ 5 ಕೋಟಿ ನೀಡಿದೆ. ಆದಾಯ ಗಳಿಕೆಯಲ್ಲೂ ಸಿರಾಜ್ ಮುಂದಿದ್ದಾರೆ. ಇತ್ತೀಚೆಗಷ್ಟೆ ಸಿರಾಜ್ ಬರೋಬ್ಬರಿ ಮೂರು ಕೋಟಿ ರೂಪಾಯಿ ಬೆಲೆಯ ರೇಂಜ್ ರೋವರ್ ಕಾರು ಖರೀದಿ ಮಾಡಿದ್ದಾರೆ. ಈಗ ಸರ್ಕಾರಿ ಅಧಿಕಾರಿಯು ಆಗಿದ್ದಾರೆ.