ದರ್ಶನ್ ಹೊರ ಬರುವ ಸುಳಿವು ಕೊಟ್ರಾ ವಿಜಯಲಕ್ಷ್ಮೀ: ಅಭಿಮಾನಿಗಳಿಗೆ ಹೇಳಿದ್ದೇನು..?

1 Min Read

 

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಕ್ತಾಯವಾಗಿದೆ. ಫ್ಯಾಮಿಲಿ, ಫ್ರೆಂಡ್ಸ್, ಫ್ಯಾನ್ಸ್ ತುದಿಗಾಲಿನಲ್ಲಿ ನಿಂತು ನಮ್ಮ ಡಿ ಬಾಸ್ ಯಾವಾಗ ಬರ್ತಾರೆ ಅಂತ ಕಾಯ್ತಿದ್ದಾರೆ. ದಸರಾಗಾದರೂ ಬಂದೇ ಬರ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದರು. ಆದರೆ ಅದು ಕೂಡ ಸಾಧ್ಯವಾಗಲಿಲ್ಲ. ಈಗ ವಿಜಯಲಕ್ಷ್ಮೀ ಹಾಕಿರುವ ಒಂದು ಪೋಸ್ಟ್ ನಿಂದ ಅಭಿಮಾನಿಗಳ ಮನದಲ್ಲಿ ಒಂದಷ್ಟು ಪಾಸಿಟಿವ್ ಥಿಂಕಿಂಗ್ ಶುರುವಾಗಿದೆ.

ದರ್ಶನ್ ಪರ ವಕೀಲರು ಕೋರ್ಟ್ ನಲ್ಲಿ ಸಾಕಷ್ಟು ಸ್ಟ್ರಾಂಗ್ ಆಗಿನೇ ವಾದ ಮಂಡಿಸಿದ್ದಾರೆ. ಪೊಲೀಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿರುವುದೆಲ್ಲ ಸುಳ್ಳು ಎಂಬ ವಾದ ಮಂಡಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಅಷ್ಟೇ ಸ್ಟ್ರಾಂಗ್ ಆಗಿ ವಾದ ಮಂಡಿಸಿದ್ದಾರೆ. ಸದ್ಯ ಅರ್ಜಿ ವಿಚಾರಣೆಯ ವಾದ – ಪ್ರತಿವಾದ ಮುಕ್ತಾಯವಾಗಿದ್ದು, ಜಾಮೀನು ಅರ್ಜಿಯ ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿದೆ. ಇದರ ಬೆನ್ನಲ್ಲೇ ವಿಜಯಲಕ್ಷ್ಮೀ ದರ್ಶನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.

ದರ್ಶನ್ ಜೈಲು ಸೇರಿದ ಮೇಲೆ ವಿಜಯಲಕ್ಷ್ಮೀ ತಮ್ಮ ಸೋಷಿಯಲ್ ಮೀಡಿಯಾದಲ್ಲಿನ ಎಲ್ಲಾ ಫೋಟೋಗಳನ್ನು ತೆಗೆದಿದ್ದರು. ಆಕ್ಟೀವ್ ಆಗಿರುವುದು ಕಡಿಮೆಯಾಗಿದೆ. ಆದರೆ ಇಂದು ದರ್ಶನ್ ಅಭಿಮಾನಿಗಳಿಗೆ ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದು, ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನವಗ್ರಹ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದು, ಶೀಘ್ರವೇ ರಿಲೀಸ್ ಆಗಲಿದೆ ಎಂದಿದ್ದಾರೆ ಅದರ ಜೊತೆಗೆ ಪ್ರೀತಿಯ ಡಿಬಾಸ್ ಸೆಲೆಬ್ರಿಟೀಸ್.. ಪ್ರತಿಯೊಬ್ಬರ ಹೃದಯ ಗೆದ್ದಿರುವ ನವಗ್ರಹ ಸಿನಿಮಾ ಮತ್ತೊಮ್ಮೆ ಬಿಡುಗಡೆಯಾಗುತ್ತಿದೆ. ಈ ಬಾರಿ ಮತ್ತಷ್ಟು ಸ್ಪೆಷಲ್. ನಿಮ್ಮ ಹತ್ತಿರದ ಥಿಯೇಟರ್ ನಲ್ಲಿ ಸಿನಿಮಾ ನೋಡಲು ರೆಡಿಯಾಗಿ. ನಾಡದೇವತೆ ಚಾಮುಂಡೇಶ್ಚರಿಯ ಆಶೀರ್ವಾದ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೆ ಇರಲಿ ಎಂದು ಸ್ಟೋರಿ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *