Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಪು ಮಾಡಿದ್ದ ಆ ಕಡೆಯ ಪೋಸ್ಟ್ ಹಿಂದಿನ ಕನಸು ನನಸು ಮಾಡಲು ಹೊರಟ ಅಶ್ವಿನಿ..!

Facebook
Twitter
Telegram
WhatsApp

ಬೆಂಗಳೂರು : ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಸೋಷಿಯಲ್ ಮೀಡಿಯಾ ಫಾಲೋ ಮಾಡ್ತಾ ಇದ್ದವರಿಗೆ ಅಪ್ಪು ಅವರು ಹಾಕಿದ ಆ ಕಡೆಯ ಪೋಸ್ಟ್ ಬಗ್ಗೆ ಸಾಕಷ್ಟು ಗೊಂದಲ, ಕ್ಯೂರಿಯಾಸಿಟಿ ಇತ್ತು. ಆ ವಿಚಾರವನ್ನು ಹೇಳುವ ಮೊದಲೇ ಅಪ್ಪು ಇಹಲೋಕ ತ್ಯಜಿಸಿದ್ದರು.


ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು.
ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು.
ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು.
ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.
ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ ಎಂದು ಪೋಸ್ಟ್ ಒಂದನ್ನ ಹಾಕಿದ್ದರು. ಇದೀಗ ಆ ಫೋಟೋ ಹಿಂದಿನ ಕನಸು ನನಸು ಮಾಡಲು ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಜ್ಜಾಗಿದ್ದಾರೆ.

ಅಪ್ಪು ಕರುನಾಡ ಬಗ್ಗೆ ಡಾಕ್ಯುಮೆಂಟರಿಯೊಂದನ್ನ ಮಾಡಿದ್ದರು. ಅದಕ್ಕೆ ಗಂಧದಗುಡಿ ಎಂದು ಹೆಸರಿಡಲಾಗಿತ್ತು. ಅದರಲ್ಲಿ ಅಪ್ಪು ಕೂಡ ನಟಿಸಿದ್ದರು. ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ಟೀಸರ್ ರಿಲೀಸ್ ಮಾಡುವ ಫ್ಲ್ಯಾನ್ ಮಾಡಿಕೊಂಡಿದ್ದರು. ಆದ್ರೆ ವಿಧಿ ಬೇಗನೇ ಅವರನ್ನ ಕರೆದುಕೊಂಡಿದೆ.

ಈ ಬಗ್ಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಟ್ವೀಟ್ ವೊಂದನ್ನ ಮಾಡಿದ್ದು, ಅಪ್ಪು ಅವರ ಕನಸೊಂದು 1.11.2021ರಂದು ಕನಸು ಕಾಣಬೇಕಿತ್ತು. ಆದರೆ ಆ ಕನಸಿಗಿಂದು ಅಲ್ಪವಿರಮಾವಷ್ಟೆ. ಅವರ ಕನಸನ್ನು ಅವರಿಷ್ಟದಂತೆಯೇ ನಿಮ್ಮೆದುರಿಗೆ ನನಸಾಗಿಸುವುದು ನಮ್ಮದು. ಇಲ್ಲಿಯ ತನಕ ನೀವೂ ತೋರಿದ ಸಂಯಮ ಮತ್ತು ಸಹಾಕಾರಕ್ಕೆ ನಾವೂ ಆಭಾರಿ ಎಂದು ಟ್ವೀಟ್ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಡಿಸೆಂಬರ್ 01 ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

  ಚಿತ್ರದುರ್ಗ. ನ.22: ಪ್ರಸಕ್ತ ಮುಂಗಾರು ಹಂಗಾಮಿನ ರಾಗಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಡಿಸೆಂಬರ್ 01 ರಿಂದ ನೋಂದಣಿ ಕಾರ್ಯ ಪ್ರಾರಂಭಿಸಲಾಗುವುದು. ಡಿ.31 ರವರೆಗೆ ನೋಂದಣಿ ನಡೆಯಲಿದೆ. ಪ್ರತಿ ಕ್ವಿಂಟಾಲ್

ಸತತ ಏರಿಕೆಯತ್ತ ಸಾಗುತ್ತಿದೆ ಚಿನ್ನದ ಬೆಲೆ : ಇಂದಿನ ದರ ಹೀಗಿದೆ..!

ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿ ಪಡುತ್ತಿರುವಾಗಲೇ ಇದೇನಿದು ಒಂದೇ ಸಮನೇ ಏರುತ್ತಲೇ ಇದೆ. ಅದರಲ್ಲೂ 70-80 ರೂಪಾಯಿ ಏರುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 70 ರೂಪಾಯಿ ಗ್ರಾಂಗೆ ಜಾಸ್ತಿಯಾಗಿದೆ. ಈ

ಚಿತ್ರದುರ್ಗ | ಯೋಗೀಶ್ ಸಹ್ಯಾದ್ರಿ ಬಿಜೆಪಿ ಸೇರ್ಪಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಉಪನ್ಯಾಸಕರು ಹಾಗೂ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ, ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿಯವರು ಬಿಜೆಪಿ

error: Content is protected !!