ಚಿತ್ರದುರ್ಗ | ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಕೆ.ಸಿ.ವೀರೇಂದ್ರ

2 Min Read

 

 

ಸುದ್ದಿ ಮತ್ತು ಫೋಟೋ ಕೃಪೆ
ವೇದಮೂರ್ತಿ,
ಮೊಬೈಲ್ : 9880836505

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 09 : 32 ಕೋಟಿ ರೂ. ವೆಚ್ಚದಲ್ಲಿ ಸಿರಿಗೆರೆಯಿಂದ ಕಡ್ಲೆಗುದ್ದು ಮಾರ್ಗದ ಬೊಮ್ಮೇನಹಳ್ಳಿಯವರೆಗೆ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ ನೀಡಿದರು.

ಬಳಿಕ ಭೀಮಸಮುದ್ರ ಕೆರೆಗೆ ಭೇಟಿ ನೀಡಿ ಸಾಸ್ವೇಹಳ್ಳಿ ಏತ ನೀರಾವರಿ ಕಾಮಗಾರಿ ವೀಕ್ಷಿಸಿದರು. ಈ ವೇಳೆ ಮಾತನಾಡಿ ಸಿರಿಗೆರೆ ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಶ್ರಮ, ಇಚ್ಛಾಶಕ್ತಿ ಫಲ ಅನೇಕ ಕೆರೆಗಳು ತುಂಬಿವೆ. ಜೊತೆಗೆ ಭೀಮಸಮುದ್ರ ಕೆರೆಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಪೈಪ್‍ಲೈನ್ ಜೋಡಣೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

 

ಒಟ್ಟು 121 ಕೆರೆಗೆ ನೀರು ತುಂಬಿಸುವ ಬಾಕಿ ಎರಡು ಕೋಟಿ ಜತೆಗೆ ಹೆಚ್ಚುವರಿ ಮೂರು ಕೋಟಿ ರೂ. ಬಿಡುಗಡೆ ಮಾಡಲು ಪ್ರಯತ್ನಿಸುವುದಾಗಿ ಶಾಸಕರು ಭರವಸೆ ನೀಡಿದರು.
ಮತ್ತು MUSS ಸ್ಥಳ ಪರಿಶೀಲನೆ ಮಾಡಿದರು ನಡೆಸಿ ಶ್ರೀ ಪಾಳ್ಯ ಗ್ರಾಮದ ಸರ್ವೇ ನಂಬರ್ 10. 11 ಎಕರೆ 12 ಗುಂಟೆಇದರಲ್ಲಿ 3 ರಿಂದ 4 ಎಕರೆ ಜಮೀನನ್ನು ಮಂಜೂರು ಮಾಡುವಂತೆ ತಿಳಿಸಿದರು

ಸಾಸ್ವೇಹಳ್ಳಿ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಟಿ.ಪುಟ್ಟಪ್ಪ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮೂಲಕ ಸಿರಿಗೆರೆ ಸ್ವಾಮೀಜಿ ಬರದ ನಾಡಿನ ಭಗೀರಥರಾಗಿದ್ದಾರೆ. ಅವರ ಮಾರ್ಗದಲ್ಲಿ ನಾವೆಲ್ಲರೂ ಶ್ರಮಿಸಬೇಕು. ಜತೆಗೆ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಏಳು ವರ್ಷ ನನೆಗುದಿಗೆ ಬಿದ್ದಿತ್ತು. ನ್ಯಾಯಾಲಯದ ಮೆಟ್ಟಿಲು ಏರಲಾಗಿತ್ತು. ಎಲ್ಲ ಕಾನೂನು ತೊಡಕುಗಳಿಗೆ ತೆರೆ ಬಿದ್ದಿದ್ದು, ಭೀಮಸಮುದ್ರ ಕೆರೆಗೆ ನೀರು ಶೀಘ್ರ ಹರಿಯಲಿದೆ.
ಏಳು ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದ್ದು, ಅವರ ಇಚ್ಛಾಶಕ್ತಿ ಪ್ರದರ್ಶಿಸಿದರೆ ನೀರು ಬರುತ್ತಿರಲಿಲ್ಲ. ಚನ್ನಗಿರಿ, ಜಗಳೂರು, ಹರಪನಹಳ್ಳಿ, ಚಿತ್ರದುರ್ಗ, ಹೊಳಲ್ಕೆರೆ, ಮಾಯಕೊಂಡ ಹೀಗೆ ಅನೇಕ ತಾಲೂಕುಗಳ ಕೆರೆಗೆ ನೀರು ತುಂಬಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಗಿರಿ ಎಂ.ಜಾನಕಲ್, ಬಿಟಿ ವೀರೇಶ್ ಟಿ.ಎಸ್.ಮಹೇಶ್ವರಪ್ಪ. ಗ್ರಾಮ ಪಂಚಾಯತಿ ಸದಸ್ಯ ಶರತ್ ಪಟೇಲ್, ನಾಗರಾಜ, ಸಿ.ಆರ್.ಮಂಜುನಾಥ್, ಟಿ ಜಿ ಅಶೋಕ್ ಆರ್ ರಮೇಶ್ ಮುದ್ದಾಪುರ ರಾಜಣ್ಣ, ಬಸವರಾಜಯ್ಯ ಕೆಡಿಪಿ ಸದಸ್ಯ ಸಿಬಿ ನಾಗರಾಜ್ ಇತರರಿದ್ದರು. ಕಾಂಗ್ರೆಸ್ ಮುಖಂಡ ಸೈಯದ್ ಅನೀಸ್ ವೀರಶೈವ ಲಿಂಗಾಯಿತ ವೇದಿಕೆಯ ಅಧ್ಯಕ್ಷ ಮಂಜುನಾಥ್ ಇತರರು ಇದ್ದರು.

 

Share This Article
Leave a Comment

Leave a Reply

Your email address will not be published. Required fields are marked *