ವಿನೇಶ್ ಪೋಗಟ್ ಎಂದಾಕ್ಷಣ ಒಲಂಪಿಕ್ ನಲ್ಲಿ ನಡೆದ ಅವಾಂತರವೇ ತಕ್ಷಣಕ್ಕೆ ಕಣ್ಣ ಮುಂದೆ ಬರುತ್ತದೆ. ಚಿನ್ನದ ಪದಕಕ್ಕೆ ಮುತ್ತಿಡಬೇಕಾಗಿದ್ದ ವಿನೇಶ್ ಪೋಗಟ್ ಕೇವಲ 100 ಗ್ರಾಂ ಜಾಸ್ತಿಯಾಗಿದ್ದಕ್ಕೆ ರಿಜೆಕ್ಟ್ ಆಗಿದ್ದರು. ಹಾಗೇ ಕುಸ್ತಿಗೆ ವಿದಾಯವನ್ನು ಘೋಷಿಸಿದರು. ಇದರ ಬೆನ್ನಲ್ಲೇ ಚುನಾವಣೆಯಲ್ಲಿ ಸ್ಪರ್ಧಿಸಿದ ವಿನೇಶ್ ಪೋಗಟ್ ಭರ್ಜರಿ ಗೆಲುವು ಕಂಡಿದ್ದಾರೆ.
ಇಂದು ಹರಿಯಾಣ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಹರಿಯಾಟದಲ್ಲಿ ವಿನೇಶ್ ಪೋಗಟ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜೂಲಾನ ಕ್ಷೇತ್ರದಿಂದ ವಿನೇಶ್ ಪೋಗಟ್ ಸ್ಪರ್ಧೆ ಮಾಡಿದ್ದರು. 11 ನೇ ಸುತ್ತಿನ ಮತ ಎಣಿಕೆಯಲ್ಲೂ ವಿನೇಶ್ ಪೋಗಟ್ 50,617 ಮತಗಳನ್ನು ಪಡೆದಿದ್ದಾರೆ. ಎದುರಾಳಿಯ ವಿರುದ್ಧ 6,050 ಮತಗಳ ಅಂತರದಲ್ಲಿದ್ದಾರೆ. ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಬಹುತೇಕ ವಿನೇಶ್ ಪೋಗಟ್ ಗೆಲ್ಲುವುದು ಖಚಿತವಾಗಿದೆ ಇನ್ನೇನಿದ್ದರೂ ಘೋಷಣೆಯೊಂದೆ ಬಾಕಿ ಇದೆ.
ಇನ್ನೂ ವಿನೇಶ್ ಪೋಗಟ್ ಒಲಂಪಿಕ್ಸ್ ನಲ್ಲಿ ಹೊರಗೆ ಬಂದ ಬಳಿಕ ಸಾಕಷ್ಟು ಕಣ್ಣೀರು ಹಾಕಿದರು. ಕೂದಲೆಳೆ ಅಂತರದಲ್ಲಿ ಈ ರೀತಿಯಲ್ಲಿ ರಿಜೆಕ್ಟ್ ಆದರೆ ಯಾರಿಗೆ ತಾನೇ ನೋವಾಗಲ್ಲ ಹೇಳಿ. ಅಂದೇ ಮತ್ತೆ ಕುಸ್ತಿ ಆಡಲ್ಲ ಎಂದು ನಿರ್ಧಾರ ಕೂಡ ಮಾಡಿದರು. ನಾನು ಹೊಸ ಇನ್ನಿಂಗ್ಸ್ ಪ್ರಾರಂಭಿಸುತ್ತೇನೆ. ನಾನು ಅನುಭವಿಸಿದ್ದನ್ನು ಇನ್ಯಾವ ಕ್ರೀಡಾಪಟು ಅನುಭವಿಸಬಾರದು ಅಂತ ಹೇಳಿದ್ದರು. ಆರಂಭದಿಂದಾನೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಹೋರಾಟ ಮಾಡಿದರು. ಲೈಂಗಿಕ ಕಿರುಕುಳದ ಆರೋಪವಿದ್ದರು, ಬ್ರಿಜ್ ಭೂಷಣ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲದ ಕಾರಣಕ್ಕೂ ವೀನೇಶ್ ಪೋಗಟ್ ಬೇಸರ ಮಾಡಿಕೊಂಡಿದ್ದರು.