Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದಸರಾ ವಿಶೇಷ: ಚಿತ್ರದುರ್ಗದಲ್ಲೊಂದು ಬೊಂಬೆಗಳ ಮನೆ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 07 : ನವರಾತ್ರಿ ದಸರಾ ಪ್ರಯುಕ್ತ ಬೊಂಬೆಗಳನ್ನು ಕೂರಿಸುವ ಸಂಪ್ರದಾಯ ವಿಶೇಷವಾಗಿದೆ. ಮನೆಗಳಲ್ಲಿ ಶಾಸ್ತ್ರಕ್ಕೆ ಕೆಲವು ಬೊಂಬೆಗಳನ್ನು ಕೂರಿಸಿ ಪೂಜಿಸುವವರು ಹಲವರಾದರೆ, ಪ್ರತಿವರ್ಷವೂ ತಮ್ಮ ಮನೆಯನ್ನೇ ಬೊಂಬೆಗಳ ಆಲಯವಾನ್ನಾಗಿಸಿ ಕೂರಿಸಿ ಪೂಜಿಸುವವರು ಕೆಲವೇ ಕೆಲವರು. ವಿಶೇಷವಾಗಿ ಮೈಸೂರು ಅರಮನೆ ಹಾಗೂ ದೊಡ್ಡ ಮಹಾನಗರಗಳಲ್ಲಿ ಹಾಗೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕೆಲವು ಉದಾಹರಣೆಗಳಿದ್ದು, ಚಿತ್ರದುರ್ಗದಲ್ಲಿಯೂ ಇಂತಹ ಒಂದು ಅಪೂರ್ವ ಉದಾಹರಣೆ ನಮ್ಮೆದುರಿಗೆ ಇದೆ.

ಚಿತ್ರದುರ್ಗ ನಗರದ ವಿಪಿ ಬಡಾವಣೆಯಲ್ಲಿರುವ ಶ್ರೀಮತಿ ಎಂ. ಬಿ. ಲಕ್ಷ್ಮೀ ಅವರ ಮನೆಯಲ್ಲಿ ಪ್ರತಿ ವರ್ಷವೂ ದಸರಾ ಹಬ್ಬದ ಪ್ರಯುಕ್ತ 10 ದಿನಗಳ ಕಾಲ ಗೊಂಬೆಗಳನ್ನು ಕೂಡಿಸುತ್ತಿದ್ದಾರೆ. ಇವರು ಕಳೆದ 30 ವರ್ಷಗಳಿಂದ ಈ ಕಾರ್ಯವನ್ನು ಮಾಡುತ್ತಾ ಇದ್ದಾರೆ. ಇದರಲ್ಲಿ ವಿಧವಿಧವಾದ ಗೊಂಬೆಗಳನ್ನು ನೋಡುವುದೇ ಚಂದ. ವರ್ಷದಿಂದ ವರ್ಷಕ್ಕೆ ಗೊಂಬೆಗಳು ಹೆಚ್ಚಾಗುತ್ತಿವೆ. ಇದನ್ನ ನೋಡಿದರೆ ಮೈಸೂರಿನಲ್ಲಿರುವ ಗೊಂಬೆ ಮನೆ ನೋಡಿದ ಹಾಗೆ ಅನುಭವವಾಗುತ್ತದೆ. ಪ್ರತಿದಿನ ಸಂಜೆ ಭಜನಾ ಕಾರ್ಯಕ್ರಮಗಳು ಇರುತ್ತದೆ. ಹಾಗೂ ವಿಧವಿಧವಾದ ಪ್ರಸಾದಗಳನ್ನು ದೇವರಿಗೆ ನೈವೇದ್ಯವನ್ನು ಮಾಡಿ ಬೊಂಬೆಗಳನ್ನು ನೋಡಲು ಬರುವ ಸಾರ್ವಜನಿಕರಿಗೆ ವಿತರಿಸುತ್ತಾರೆ.

ಎಲ್ಲರೂ ಈ ದಸರಾ ಹಬ್ಬದ ಸಂದರ್ಭದಲ್ಲಿ ಚಿತ್ರದುರ್ಗ ನಗರದ ವಿ.ಪಿ. ಬಡಾವಣೆಯಲ್ಲಿರುವ ಈ ಗೊಂಬೆ ಮನೆಗೆ ಭೇಟಿ ಕೊಟ್ಟು ಬೊಂಬೆಗಳ ಲೋಕವನ್ನೇ ನೋಡಬಹುದು.
ಗೊಂಬೆಗಳಲ್ಲಿ ದಶಾವತಾರ ಸೇರಿದಂತೆ ವಿವಿಧ ದೇವಿ – ದೇವರ ಬೊಂಬೆಗಳು, ಗುರುಗಳು ದಾರ್ಶನಿಕರ ಬೊಂಬೆಗಳು, ಕ್ರಿಕೆಟ್ ಮೈದಾನ ಆಟಗಾರರ ಪ್ರತಿಕೃತಿ, ಅಡಿಗೆಮನೆಯ ಸಾಮಾನುಗಳ ಆಕರ್ಷಣೀಯ ಕಿರು ಪ್ರತಿಕೃತಿಗಳು, ಮೋಟಾರ್ ವಾಹನ ಕಾರುಗಳ ಕಿರು ಮಾದರಿ ಬೊಂಬೆಗಳು ಒಳಗೊಂಡಂತೆ ಮುದ್ದಾದ ಬೊಂಬೆಗಳ ಪುಟ್ಟ ಲೋಕವೇ ಈ ಬೊಂಬೆ ಮನೆಗೆ ಬರುವವರ ಕಣ್ಣೆದುರಿಗೆ ಅನಾವರಣಗೊಳ್ಳುತ್ತದೆ.ಅದರಲ್ಲಿಯೂ ಮಕ್ಕಳಿಗಂತೂ ಇದು ಬಹಳ ಆಕರ್ಷಣೀಯ ಅನುಭವವನ್ನೇ ನೀಡುತ್ತದೆ.

ಸಾರ್ವಜನಿಕರು ಹಾಗೂ ವಿಶೇಷವಾಗಿ ಮಕ್ಕಳು ಬೊಂಬೆಗಳನ್ನು ನೋಡಿ ಆನಂದಿಸಿ, ಪ್ರಸಾದ ಸ್ವೀಕರಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ.

ವಿಶೇಷ ಲೇಖನ :  

ಶ್ರೀಮತಿ ಎಂ. ಬಿ. ಲಕ್ಷ್ಮೀ,                                          ಪೋಸ್ಟ್ ಭೀಮರಾವ್ ಮನೆ ಕಾಂಪೌಂಡ್,                ಮಾರುತಿ ಗ್ಯಾಸ್ ಏಜನ್ಸಿ ಎದುರು,                                    ವಿ. ಪಿ. ಬಡಾವಣೆ, ಚಿತ್ರದುರ್ಗ

ಮೊಬೈಲ್ ಸಂಖ್ಯೆ: 9844444386

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಜಗದೀಶ್ ಕ್ಷಮೆಯಾಚನೆ : ಯಾಕೆ ಗೊತ್ತಾ..?

  ಬೆಂಗಳೂರು : ಕಳೆದ ಸೀಸನ್ ನಿಂದ ಬಿಗ್ ಬಾಸ್ ರೀತಿ ನೀತಿಯೇ ಬದಲಾಗಿದೆ‌. ಮೊದಲೆಲ್ಲಾ ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ಭಾವನೆಗಳಿಗೂ ಜಾಗ ಇರುತ್ತಾ ಇತ್ತು. ಆದರೆ ಈಗ ಓನ್ಲಿ ಸ್ಪರ್ಧೆ. ಗೆಲ್ಬೇಕು

ಬಿಜೆಪಿ ಸರ್ಕಾರ ಕೊಟ್ಟಿದ್ದ 2D ಬೇಡ, 2A ಬೇಕು : ಕಾಂಗ್ರೆಸ್ ಗೆ ಪಂಚಮಸಾಲಿ ಸ್ವಾಮೀಜಿ ಒತ್ತಾಯ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಹೋರಾಟಗಳು ನಡೆಯುತ್ತಿವೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಸಂಬಂಧ ಸಭೆ ಕೂಡ ನಡೆಸಲಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ, ಶಾಸಕ ಯತ್ನಾಳ್ ಕೂಡ ಭಾಗಿಯಾಗಲಿದ್ದಾರೆ. ಜಯ

ರಾಮನಗರದ ತೋಟದ ಮನೆಯಲ್ಲಿ ಚನ್ನಪಟ್ಟಣ ಅಭ್ಯರ್ಥಿ ಫೈನಲ್ : ಯೋಗೀಶ್ವರ್ ಸಮಾಧಾನಗೊಳಿಸಲು ನಿರ್ಧಾರ..!

    ರಾಮನಗರ: ಚನ್ನಪಟ್ಟಣ ಬೈಎಲೆಕ್ಷನ್ ವಿಚಾರ ರಾಜ್ಯದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಕಾಂಗ್ರೆಸ್ ಪಕ್ಷಕ್ಕೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದ್ರೆ, ಜೆಡಿಎಸ್ ಲೆಕ್ಕಚಾರದಲ್ಲಿ ಮಗನ ರಾಜಕೀಯ ಭವಿಷ್ಯಕ್ಕೂ ಬಹಳ ಮುಖ್ಯವಾಗಿದೆ. ಇಲ್ಲಿ ಮೈತ್ರಿ

error: Content is protected !!