Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಎಲ್ಲರ ಬದುಕಿಗೆ ದಾರಿ ದೀಪ : ವೀರೇಶಾನಂದ ಸರಸ್ವತೀ ಸ್ವಾಮೀಜಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ, ಆ. 05 : ಸ್ವಾಮಿ ವಿವೇಕಾನಂದರು ತಮ್ಮ ಜೀವಾತಾವಧಿಯಲ್ಲಿ ಹಲವಾರು ಜನರಿಗೆ ಉತ್ತಮವಾದ ಮಾರ್ಗದರ್ಶನ ನೀಡುವುದರ ಮೂಲಕ ಅವರನ್ನು ಸನ್ಮಾರ್ಗದತ್ತ ಕೊಂಡ್ಯೂದಿದ್ದಾರೆ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಆಧ್ಯಕ್ಷರಾದ ವೀರೇಶಾನಂದ ಸರಸ್ವತೀ ಸ್ವಾಮಿಜಿಯವರು ತಿಳಿಸಿದರು.

ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿಬಾಲಭವನದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವೀರೇಶಾನಂದ ಸರಸ್ವತೀಯವರ ವಿರಚಿತ ವಿವೇಕಧಾರಾ ಕೃತಿ ಲೋಕರ‍್ಪಣಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಈಗಾಗಲೇ ಈ ಕೃತಿ 6 ರಿಂದ 7 ಬಾರಿ ಬಿಡುಗಡೆಯನ್ನು ಮಾಡಲಾಗಿದೆ. ಇದೇ ರೀತಿ ಚಿತ್ರದುರ್ಗದಲ್ಲಿಯೂ ಸಹಾ ಬಿಡುಗಡೆ ಮಾಡುವಂತೆ ಶಾರದಾ ರಾಮಕೃಷ್ಣ ಆಶ್ರಮದ ಕಾರ್ಯದರ್ಶಿ ಗಳಾದ ಸ್ವಾಮಿ ಬ್ರಹ್ಮನಿಷ್ಠಾನಂದ ಸ್ವಾಮಿಜಿಯವರ ಮನವಿ ಮೇರೆಗೆ ಇಲ್ಲಿಯೂ ಸಹಾ ಇಂದು ಬಿಡುಗಡೆ ಮಾಡಲಾಗಿದೆ ಎಂದ ಅವರು, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ನಮ್ಮ ಬದುಕಿನಲ್ಲಿ ಎಲ್ಲಾ ರೀತಿಯಲ್ಲಿಯೂ ತೊಡಗಿಸಿಕೊಳ್ಳಲು ಪ್ರೇರಣೆಯನ್ನು ನೀಡಿದೆ. ಅದರಲ್ಲೂ ವಿದ್ಯಾರ್ಥಿ ಜೀವನದಲ್ಲಿ ಉತ್ತಮವಾದ ಮಾರ್ಗ ದರ್ಶನ ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ನಮ್ಮೆಲ್ಲಾ ಬದುಕಿಗೆ ದಾರಿ ದೀಪವಾಗಲಿದೆ, ಮಕ್ಕಳಲ್ಲಿ ಓದಿನ ಬಗ್ಗೆ ಆಸಕ್ತಿಯನ್ನು ಮೂಡಿಸಬೇಕಿದೆ ಇದರಿಂದ ನಮ್ಮ ನಾಡಿನ ದಾರ್ಶನಿಕರ, ಶರಣರ ಇಂತಹ ಮಹಾನೀಯರ ಪುಸ್ತಕಗಳನ್ನು ಓದಲು ಅನುಕೂಲವಾಗುತ್ತದೆ. ನಿಮ್ಮ ಬದುಕಿನಲ್ಲಿ ಬರುವಂತ ವಿವಿಧ ರೀತಿಯ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಿ ಚರ್ಚೆಗಳಲ್ಲಿ, ಸಂವಾದಗಳಲ್ಲಿ, ಸಕ್ರಿಯವಾಗಿ ಭಾಗವಹಿಸಿ ವೇದಿಕೆಯ ಭಯವನ್ನು ಚಿಕ್ಕವರಿರುವಾಗಲೇ ಹೋಗಲಾಡಿಸಿಕೊಳ್ಳಿ ಎಂದು ಕರೆ ನೀಡಿದ ಸ್ವಾಮಿಜಿ, ನಾವುಗಳು ಹಿಂದಿನದ್ದನ್ನು ಈಗ ಕಲಿಯುತ್ತಿದ್ದೆವೆ, ಈಗಿನಿಂದನ್ನು ಅನುಭವಿಸುತ್ತೀದ್ದೆವೆ ಮುಂದಿನದ್ದನ್ನು ಬೇರೆಯವರಿಗೆ ಹೇಳುವ ಕೆಲಸವನ್ನು ಮಾಡುತ್ತೀದೇವೆ, ನಾವುಗಳು ಒಳ್ಳೇಯರವ ಸಹವಾಸವನ್ನು ಮಾಡುವುದರ ಮೂಲಕ ಉತ್ತಮವಾದ ವಾತಾವರಣವನ್ನು ನಿರ್ಮಾಣ ಮಾಡಿಕೊಳ್ಳಬೇಕಿದೆ. ಸ್ವಾಮಿ ವಿವೇಕಾನಂದರ ಚರಿತ್ರೆಯನ್ನು ಓದುವುದರ ಮೂಲಕ ನೀವುಗಳು ವಿಶೇಷವಾದ ವ್ಯಕ್ತಿಯಾಗಬೇಕಿದೆ ಎಂದು ವೀರೇಶಾನಂದ ಸರಸ್ವತೀ ಸ್ವಾಮೀಜಿ ಕರೆ ನೀಡಿದರು.

ಕಾಲೇಜು ಎಂದರೆ ಕಾಲವನ್ನು ಕಳೆಯುವ ಜಾಗವಲ್ಲ, ಅದು ಜ್ಞಾನವನ್ನು ಕಲಿಯುವ ಸಮಯವಾಗಬೇಕಿದೆ ಇಲ್ಲಿ ಸಮಯವನ್ನು ಹಾಳು ಮಾಡಿದರೆ ಮುಂದೆ ಇದರ ಫಲವನ್ನು ಉಣ್ಣಬೇಕಾಗುತ್ತದೆ, ರಾಮಕೃಷ್ಣ ಆಶ್ರಮ ಒಂದು ಜನಾಂಗೀಯ ಆಶ್ರಮವಲ್ಲ ಇದು ಮತಗಳನ್ನು ನೀಡುವುದಿಲ್ಲ. ಇದರ ಬದಲಾಗಿ ಜ್ಞಾನವನ್ನು ತುಂಬುವ ಕಾರ್ಯವನ್ನು ಮಾಡುತ್ತದೆ. ಜನತೆಯನ್ನು ಸನ್ಮಾರ್ಗದತ್ತ ಕರೆದ್ಯೂಯುವ ಕಾರ್ಯವನ್ನು ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿದೆ. ಸ್ವಾಮಿ ವಿವೇಕಾನಂದರು ತಮ್ಮ ಬದುಕಿನಲ್ಲಿ ಹಲವಾರು ಜನರಿಗೆ ಮಾರ್ಗದರ್ಶನ ಹಲವಾರು ಉತ್ತಮವಾದ ಕಾರ್ಯವನ್ನು ಮಾಡಿಸಿದ್ದಾರೆ ಎಂದು ತಿಳಿಸಿದರು.

ಸ್ವಾಮಿ ವೀರೇಶಾನಂದ ಸರಸ್ವತೀಯವರ ವಿರಚಿತ ವಿವೇಕಧಾರಾ ಕೃತಿ ಲೋಕಾರ್ಪಣಾ ಮಾಡಿ ಮಾತನಾಡಿದ ಸರಕಾರಿ ಕಲಾ ಕಾಲೇಜಿನ ಆಂಗ್ಲ ಭಾಷಾ ಪ್ರಾಧ್ಯಾಪಕರಾದ ಶ್ರೀಮತಿ ಪ್ರೊ|| ತಾರಿಣಿ ಶುಭದಾಯಿನಿ ಸ್ವಾಮಿ ವಿವೇಕಾನಂದರ ಬಗ್ಗೆ ಎಷ್ಟು ಮಾತನಾಡಿದರೂ ಸಾಲದು ಅವರ ವ್ಯಕ್ತಿತ್ವ ನಮಗೆಲ್ಲಾ ದಾರಿ ದೀಪವಾಗಿದೆ. ಯುವ ಜನಾಂಗಕ್ಕೆ ದೇಶದ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ. ಅವರ ಜೀವನ ಚರಿತ್ರೆ ನಮ್ಮ ಸಮಕಾಲಿನ ಸಮಸ್ಯೆಗಳಿಗೆ ಉತ್ತರವನ್ನು ನೀಡುತ್ತದೆ. ಸ್ವಾಮಿ ವೀರೇಶಾನಂದ ಸರಸ್ವತೀಯವರ ಸ್ವಾಮಿ ವಿವೇಕಾನಂದ ಸ್ವಾಮಿಜಿಯವರ ಶಿಷ್ಯರಾಗಿ ಅವರವ ಜೀವನ ಚರಿತ್ರೆಯನ್ನು ಎಲ್ಲಾ ಕಡಗೂ ಹರಡುವಂತೆ ಮಾಡಿದ್ದಾರೆ ಹಲವರು ಕಡೆಗಳಲ್ಲಿ ಹೀಗಿ ಉಪನ್ಯಾಸಗಳನ್ನು ನೀಡುವುದರ ಮೂಲಕ ಸ್ವಾಮಿ ವಿವೇಕಾನಂದರ ಬಗ್ಗೆ ಜನರಿಗೆ ತಿಳಿಸುವ ಕಾರ್ಯವನ್ನು ಮಾಡಿದ್ದಾರೆ ಎಂದರು.

ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನಾಧರಿಸಿ ಹಲವಾರು ಆಯಾಮಗಳಲ್ಲಿ ಪರಿಚಯಿಸಿದ ವಿಭಿನ್ನ ಲೇಖನಗಳ ಗುಚ್ಚವೇ ’ವಿವೇಕಧಾರಾ’ ಕೃತಿ. ದಿವ್ಯತ್ರಯರ ಕೃಪಾಶೀರ್ವಾದದ ಫಲವಾಗಿ ಸ್ವಾಮೀಜಿಯವರಿಂದ ಮೂಡಿಬಂದಿದೆ. ರಾಮಕೃಷ್ಣರು ಸಂಸಾರದಿಂದ ಸನ್ಯಾಸಿಗಳಾದರೆ ಸ್ವಾಮಿ ವಿವೇಕಾನಂದರು ಸನ್ಯಾಸದಿಂದ ಜನರಿಗೆ ಉತ್ತಮವಾದ ಸಂದೇಶಗಳನ್ನು ನೀಡುವುದರ ಮೂಲಕ ಸಂಸಾರಗಳಾಗಿದ್ದಾರೆ. ತಮ್ಮ ಸಂದೇಶದಲ್ಲಿ ರಾಷ್ಟ್ರಭಕ್ತಿ, ಸಾಂಸ್ಕೃತಿಕ ಮೌಲ್ಯಗಳು ಹಾಗೂ ವೇದಾಂತ ಸತ್ವದ ಬಗ್ಗೆ ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದರು ಯಾವುದೇ ಜಾತಿ ಧರ್ಮ ಜನಾಂಗಕ್ಕೆ ಸೇರದೇ ದೇಶದ ಬಗ್ಗೆ ಚಿಂತನೆಯನ್ನು ಮಾಡುವಂತ ವ್ಯಕ್ತಿಯಾಗಿದ್ದರು. ಶುದ್ದವಾದ ತಳಹದಿಯ ಮೇಲೆ ದೇಶವನ್ನು ನಿರ್ಮಾಣ ಮಾಡುವ ಕನಸನ್ನು ಕಂಡಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಶಾರದಾ ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗಳಾದ ಸ್ವಾಮಿ ಬ್ರಹ್ಮನಿಷ್ಠಾನಂದ ಸ್ವಾಮಿಜಿ, ತುಮಕೂರು ವಿಶ್ವವಿದ್ಯಾಲಯದ ಹಾಲಿ ಸಿಂಡಿಕೇಟ್ ಸದಸ್ಯರು ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಡಾ ರಾಜೀವಲೋಚನ, ಸಮಾಜ ಸೇವಕರಾದ ಡಾ|| ಜಯರಾಮ್ ರೆಡ್ಡಿ, ಲೆಕ್ಕ ಪರಿಶೋಧಕರು ಹಾಗೂ ಸಮಾಜ ಸೇವಕರಾದ ರೋ| ಕೆ. ಮಧುಪ್ರಸಾದ್ ರೋಟರಿ ಕ್ಲಬ್‌ನ ಅಧ್ಯಕ್ಷರಾದ ವೀರಣ್ಣ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಬಿ.ಎಲ್. ಉದಯ್, ಹಾಗೂ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಜಾಹೀರಾತು ವ್ಯವಸ್ಥಾಪಕ ಉದಯರವಿ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಜೀರ್ಣ, ಮಲಬದ್ಧತೆ ಸಮಸ್ಯೆನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇದು ಹೃದಯಕ್ಕೆ ತೊಂದರೆ

ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ಹೃದಯಕ್ಕೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ: ಈ ರಾಶಿಯವರಿಗೆ ಒಳ್ಳೆಯ ಸಂಬಂಧ ಮದುವೆಗೆ ಒಲೆಯಲಿದೆ ಶುಕ್ರವಾರರಾಶಿ ಭವಿಷ್ಯ -ನವೆಂಬರ್-22,2024 ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

error: Content is protected !!