ಮೈಸೂರು: ಮೂಡಾ ಹಗರಣ ಬಳಕಿಗೆ ಬಂದಾಗಿನಿಂದ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡುವಂತೆ ಒಂದೇ ಸಮನೇ ದುಂಬಾಲು ಬಿದ್ದಿದ್ದಾರೆ. ಇದರ ನಡುವೆ ಜಿಟಿ ದೇವೇಗೌಡ ಅವರು ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ಯಾಕೆ ರಾಜೀನಾಮೆ ನೀಡಬೇಕು. ಕುಮಾರಸ್ವಾಮಿ ಅವರು ನೀಡುತ್ತಾರಾ ಎಂದು ನೇರವಾಗಿಯೇ ಕೇಳಿದ್ದರು. ಜಿಟಿ ದೇವೇಗೌಡ ಅವರು ಬೆಂಬಲ ನೀಡಿದ್ದರ ಬಗ್ಗೆ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ ನೀಡಿದ್ದು, ಅವರ ಮೇಲೂ ಆರೋಪ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ, ಮೂಡಾ ಹಗರಣದ ತನಿಖೆ ಬಗ್ಗೆ ದೂರು ನೀಡಿ, ಒತ್ತಾಯಿಸುತ್ತಿರುವ ಸ್ನೇಹಮಯಿ ಕೃಷ್ಣ ಅವರು, ಅವರದ್ದು ಪಾಲು ಇದೆ. ಅದಕ್ಕೆ ಈಗಲಿಂದಾನೇ ಪೀಠಿಕೆ ಹಾಕುತ್ತಿದ್ದಾರೆ. ಅವರದ್ದು ಕೂಡ ಇಲ್ಲಿ ನಿವೇಶನಗಳಿದಾವೆ. ಜಿಟಿ ದೇವೇಗೌಡ ಅವರ ಪ್ರಭಾವ ಬಳಸಿಕೊಂಡು ಅವರ ಕುಟುಂಬದವರು ನಿವೇಶನಗಳನ್ನ ಪಡೆದಿದ್ದಾರೆ.
ಜಿಟಿ ದೇವೇಗೌಡ್ರು ಮಾತ್ರವಲ್ಲ ಹಲವು ರಾಜಕಾರಣಿಗಳು ತಮ್ಮ ಪ್ರಭಾವ ಬಳಸಿ ನಿವೇಶನಗಳನ್ನ ಪಡೆದುಕೊಂಡಿದ್ದಾರೆ. ಅದೆಲ್ಲವೂ ಈಗ ತನಿಖೆಯಾಗಬೇಕು. ಸಿದ್ದರಾಮಯ್ಯ ಅವರ ವಿರುದ್ಧ ಮಾತ್ರ ನಾನು ಹೋರಾಡುತ್ತಿಲ್ಲ. ಅಕ್ರಮ ನಡೆಸಿದವರೆಲ್ಲರ ವಿರುದ್ಧ ನನ್ನ ಹೋರಾಟ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದೆಲ್ಲದರ ತನಿಖೆ ನಡೆಯುತ್ತದೆ. ಕಳ್ಳರು ಕಳ್ಳರು ಒಂದಾಗುತ್ತಾರೆ. ತಮ್ಮ ಅಪರಾಧ ಕೊರತೆಯನ್ನು ಮುಚ್ಚಿ ಹಾಕಲು ಒಂದು ಸಂಚು ರೂಪಿಸುತ್ತಾರೆ. ಯಾರೆಲ್ಲ ನಿವೇಶನ ತೆಗೆದುಕೊಂಡಿದ್ದಾರೆ ಅವರೆಲ್ಲಾ ಒಂದಾಗುತ್ತಿದ್ದಾರೆ, ಒಟ್ಟಿಗೆ ಸಭೆ ನಡೆಸುತ್ತಿದ್ದಾರೆ. ಸಂಚು ರೂಪಿಸುತ್ತಿದ್ದಾರೆ. ನೋಡೋಣಾ ಮುಂದೆ ಇನ್ನು ಏನೆಲ್ಲಾ ಮಾಡುತ್ತಾರೆ ಎಂಬುದನ್ನು ಅಂತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.