ನವರಾತ್ರಿಯೂ ಆರಂಭ : ನಾಳೆ ದರ್ಶನ್ ಗೆ ಸಿಗಬಹುದಾ ಜಾಮೀನು..?

suddionenews
1 Min Read

ಬಳ್ಳಾರಿ: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿ ನೂರು ದಿನಗಳ ಮೇಲಾಗಿದೆ. ಅದರಲ್ಲೂ ಬಳ್ಳಾರಿ ಜೈಲಿನಲ್ಲಿ ಒಂಟಿಯಾಗಿ ಜೀವನ ಕಳೆದು 36 ದಿನಗಳಾಗಿವೆ. ಪರಪ್ಪನ ಅಗ್ರಹಾರದಲ್ಲಿದ್ದಾಗ ಹೇಗೋ ಸಂಗಡಿಗರು ಜೊತೆಗಿದ್ದರು. ಆದರೆ ಬಳ್ಳಾರಿ ಜೈಲಿನಲ್ಲಿ ಹಾಗಲ್ಲ. ಯಾರೂ ಇಲ್ಲದೆ ಒಂಟಿಯಾಗಿದ್ದಾರೆ. ಜೈಲಿನಿಂದ ಯಾವಾಗ ಬಿಡುಗಡೆಯಾಗ್ತಿನೋ ಎಂದೇ ಕಾಯುತ್ತಿದ್ದಾರೆ. ನಾಳೆ ದರ್ಶನ್ ಅವರ ಅರ್ಜಿ ವಿಚಾರಣೆ ನಡೆಯಲಿದೆ. ಜಾಮೀನು ಸಿಗುತ್ತಾ..? ವಿಚಾರಣೆ ಮುಂದೂಡಿಕೆಯಾಗುತ್ತಾ ನೋಡಬೇಕಿದೆ.

ಜಾಮೀನು ಸಿಗುವ ಸಾಧ್ಯತೆ ಯೋಚಿಸಿದರೆ ಸ್ವಲ್ಪ ಕಡಿಮೆಯೆ. ಯಾಕಂದ್ರೆ ದರ್ಶನ್ ಪರ ವಕೀಲರು ವಾದ ಮಂಡಿಸುವುದಕ್ಕೆ ಇನ್ನು ಶುರುನೇ ಮಾಡಿಲ್ಲ. ಎರಡು ಬಾರಿಯಿಂದ ಕಾಲವಕಾಶ ಕೇಳುತ್ತಲೇ ಇದ್ದಾರೆ. ಹೀಗಾಗಿ ನಾಳೆ ವಾದ ಮಂಡಿಸುತ್ತಾರೋ ಅಥವಾ ಮತ್ತೆ ಕಾಲವಕಾಶ ಕೇಳುತ್ತಾರೋ ನೋಡಬೇಕಿದೆ.

ಇದರ ನಡುವೆ ಇಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದರು. ಮಗನನ್ನು ನೋಡಿ ಎಷ್ಟೋ ದಿನಗಳಾಗಿದ್ದ ಮಗ ಇಂದು ತಂದೆಯನ್ನು ನೋಡಿ ಭಾವುಕರಾಗಿದ್ದರು. ಬಳಿಕ ತಂದೆ ನೋಡಿದ ಖುಷಿಯೂ ವಿನೀಶ್ ಮುಖದಲ್ಲಿ ಕಾಣಿಸುತ್ತಿತ್ತು. ಪತಿಗಾಗಿ ವಿಜಯಲಕ್ಷ್ಮೀ ಹಣ್ಣು, ಬೇಕರಿ ತಿನಿಸು, ಡ್ರೈ ಫ್ರೂಟ್ಸ್ ಸೇರಿದಂತೆ ತಿನಿಸುಗಳನ್ನು ತಂದಿದ್ದರು. ನವರಾತ್ರಿ ಬೇರೆ ಆರಂಭವಾಗಿರುವ ಕಾರಣ ವಿಜಯಲಕ್ಷ್ಮೀಗೂ ಒಂದು ನಂಬಿಕೆ. ಈ ಬಾರಿ ಬೇಲ್ ಸಿಗುವ ಸಾಧ್ಯತೆ ಇದೆ ಎಂದು ದರ್ಶನ್ ಅವರ ಮುಂದೆಯೂ ಆತ್ಮವಿಶ್ವಾಸ ತೋರಿದ್ದಾರೆ ಎಂದೇ ಹೇಳಲಾಗುತ್ತಿದೆ. ಬೇಲ್ ಸಿಕ್ಕರೆ ಸಾಕಪ್ಪ, ಜೈಲು ಸಹವಾಸ ಬೇಡಪ್ಪ ಎನ್ನುತ್ತಿರುವ ದರ್ಶನ್, ಹೆಂಡತಿ, ಮಗನನ್ನು ನೋಡಿ ಖುಷಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks