ಹಾಸನ: ಕೊರಿನಾ ಕಡಿಮೆಯಾದ ಬಳಿಕ ಕೆಲವು ದಿನಗಳಿಂದೀಚೆಗೆ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭವಾಗಿವೆ. ಮಕ್ಕಳು ಖುಷಿ ಖುಷಿಯಲ್ಲಿ ಶಾಲೆಗೆ ಹೋದ್ರೆ ಪೋಷಕರು ಧೈರ್ಯ ಮಾಡಿ ಶಾಲೆಗೆ ಕಳುಹಿಸುತ್ತಿದ್ದಾರೆ. ಇಂಥ ದುಗುಡ ದುಮ್ಮಾನದ ನಡುವೆಯೂ ಮಕ್ಕಳನ್ನ ಶಾಲೆಗೆ ಕಳುಹಿಸುತ್ತಿರುವ ಸಮಯದಲ್ಲಿ ಆಘಾಗಳಾದರೇ..? ಅಂಥದ್ದೊಂದು ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸಂತೇಪೇಟೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಇದ್ದಕ್ಕಿದ್ದ ಹಾಗೆ ತರಗತಿಯ ಮೇಲ್ಛಾವಣಿ ಕುಸಿದಿದೆ. ಪರಿಣಾಮ ಮಕ್ಕಳಿಗೆ ಗಾಯಗಳಾಗಿದೆ. ಆ ಶಾಲೆಯಲ್ಲಿ ಒಟ್ಟು 85 ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದರು. ಇದ್ದಕ್ಕಿದ್ದ ಹಾಗೇ ಒಂದು ತರಗತಿಯ ಮೇಲ್ಛಾವಣಿ ಕುಸಿದಿದೆ. ಮೂವರು ಮಕ್ಕಳು ಇದರಿಂದ ಗಾಯಗೊಂಡಿದ್ದಾರೆ.
ಹತ್ತನೇ ತರಗತಿಯ ಸುಹಾನಾ. ಕುಲ್ಸಾಮ. ಫಿಸಾ ಎಂಬ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಿಮ್ಸ್ ಆಸ್ಪತ್ರೆಗೆ ಸ್ಥಳೀಯ ಶಾಸಕ ಪ್ರೀತಂ ಗೌಡ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ. ಸರಿಯಾಗಿ ಚಿಕಿತ್ಸೆ ನೀಡಲು ವೈದ್ಯರಿಗೂ ತಿಳಿಸಿದ್ದಾರೆ.