ಬೆಂಗಳೂರು: ನಟ ದರ್ಶನ್ ಕೊಲೆ ಆರೋಪದ ಮೇಲೆ ಬಳ್ಳಾರಿ ಜೈಲಿನಲ್ಲಿದ್ದು, ಹೊರಗೆ ಬರಲು ಹರಸಾಹಸ ಮಾಡುತ್ತಿದ್ದಾರೆ. ಈಗಾಗಲೇ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದು, ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ದರ್ಶನ್ ಅವರಿಗೆ ಇಂದು ಕೂಡ ನಿರೀಕ್ಷೆ ಹುಸಿಯಾಗಿದೆ. ಜಾಮೀನು ಅಕ್ಟೋಬರ್ 4 ಕ್ಕೆ ಮುಂದೂಡಿಕೆಯಾಗಿದೆ. ಹೀಗಾಗಿ ದರ್ಶನ್ ಅವರಿಗೆ ಮತ್ತೆ ನಿರಾಸೆಯಾಗಿದೆ.
ವಾದ ಮಂಡಿಸಲು ಕಾಲಾವಕಾಶ ಬೇಕೆಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ. ಹೀಗಾಗಿ ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ಅರ್ಜಿ ವಿಚಾರಣೆಯನ್ನು ಮುಂದಕ್ಕೆ ಹಾಕಿದೆ. ಕಳೆದ ವಿಚಾರಣೆಯ ಸಂದರ್ಭದಲ್ಲೂ ಕೂಡ ದರ್ಶನ್ ಪರ ವಕೀಲರು ವಾದ ಮಂಡಿಸಲು ಸಮಾಯವಕಾಶ ಕೇಳೊದ್ದರು. ಆಗ ಸರ್ಕಾರಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ದರ್ಶನದ ಜೈಲು ಸೇರಿ ಈಗಾಗಲೇ ನೂರು ದಿನಗಳ ಮೇಲಾಗಿದೆ. ಜಾಮೀನು ಸಿಕ್ಕರೆ ಸಾಕಪ್ಪ ಎಂಬ ಮನೋಭಾವದಲ್ಲಿದ್ದಾರೆ ದರ್ಶನ್.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾದ ಮೇಲೆ ದರ್ಶನ್ ಪರ ವಕೀಲರು ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದರು. ಕೇಸ್ ಗೆ ಸಂಬಂಧಿಸಿದಂತೆ ಒಂದಷ್ಟು ಮಾಹಿತಿ ಪಡೆಯುವುದಕ್ಕೆ ಬಳ್ಳಾರಿ ಜೈಲಿಗೆ ಹೋಗಿ ಬಂದಂತ ವಕೀಲರು, ಆ ಬಳಿಕ ವಾದ ಮಂಡಿಸಲು ಕೋರ್ಟ್ ನಲ್ಲಿ ಕಾಲಾವಕಾಶ ಪಡೆಯುತ್ತಿದ್ದಾರೆ. ಇತ್ತಿಚೆಗಷ್ಟೇ ದರ್ಶನ್ ಪರ ವಕೀಲರು, ಸೆಷನ್ ನ್ಯಾಯಾಲಯದಲ್ಲಿಯೇ ದರ್ಶನ್ ಅವರಿಗೆ ಜಾಮೀನು ಸಿಗಲಿದೆ. ಒಂದು ವೇಳೆ ಅಲ್ಲಿ ಸಿಗದೇ ಹೋದರೆ ಹೈಕೋರ್ಟ್ ಗೆ ಹೋಗ್ತೀವಿ ಅಂತ ಹೇಳಿದ್ದರು. ಇದೀಗ ವಾದ ಮಂಡಿಸಲು ಸಮಯ ತೆಗೆದುಕೊಳ್ಳುತ್ತಿದ್ದು, ಒಂದಷ್ಟು ಕುತೂಹಲ ಉಳಿಸಿದೆ.