ಭಗತ್ ಸಿಂಗ್ ರ ಕನಸಿನ ಸಮಾಜವಾದಿ ಭಾರತಕ್ಕೆ ಕೈಜೋಡಿಸಿ : ರವಿಕುಮಾರ್

1 Min Read

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 28 : ಬಿಳಿಯರು ತೊಲಗಬಹದು, ನಮ್ಮವರೇ ನಮ್ಮನ್ನು ಆಳ್ವಿಕೆ ಮಾಡಿ ಜನರ ಶೋಷಣೆ ನಿಲ್ಲುವುದಿಲ್ಲ’ ಎಂದು ಭಗತ್ ಸಿಂಗ್ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನುಡಿದ್ದರು. ಅವರು ಹೇಳಿದ ಒಂದು ಮಾತು ಇಂದಿಗೂ ಸತ್ಯ. ಆದ್ದರಿಂದ ನಾವು ಅವರ ವಿಚಾರ ಅರ್ಥಮಾಡಿಕೊಂಡು ಮಾನವನಿಂದ ಮಾನವನ ಮೇಲೆ ಜರುಗುವ ಶೋಷಣೆಯನ್ನು ತೊಲಗಿಸಿ ನೊಂದ ಜನ ಗೌರವದಿಂದ ತಲೆಯೆತ್ತಿ ಜೀವಿಸುವ ಭಗತ್ ಸಿಂಗ್ ರ ಕನಸಿನ ಸಮಾಜವಾದಿ ಭಾರತಕ್ಕೆ ಕೈಜೋಡಿಸಬೇಕು ಎಂದು ಸಾಮಾಜಿಕ ಹೋರಾಟಗಾರ ರವಿಕುಮಾರ್ ಹೇಳಿದರು.

ನಗರದ ಓನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ ಹಾಗೂ ಧೀರ ಹುತಾತ್ಮ ಭಗತ್ ಸಿಂಗ್ ಉದ್ಯಾನವನದಲ್ಲಿ
ಸ್ವಾತಂತ್ರ್ಯ ಸಂಗ್ರಾಮದ ಧೀರ ಹುತಾತ್ಮ, ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ರವರ 117ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಐಡಿಎಸ್ಓ ಜಿಲ್ಲಾ ಮುಖಂಡ ಕೆ.ಈರಣ್ಣ ಅವರು ಮಾತನಾಡುತ್ತಾ ಜಾತಿ – ಧರ್ಮಗಳ ಗಡಿಯನ್ನು ಮೀರಿ ಎಲ್ಲರೂ ಭಾರತವೆಂಬ ಒಂದೇ ಸೂರಿಡಿಯಲ್ಲಿ ಎಲ್ಲರೂ ನೆಮ್ಮದಿಯಿಂದ ಬದುಕುವಂತಾಗಬೇಕು, ಬ್ರಿಟೀಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ರಾಜಿರಹಿತ ಹೋರಾಟ ನಡೆಸಿದ ನಗುನಗುತ್ತಾ ಗಲ್ಗಂಬವನ್ನೀರಿದ ಭಗತ್ ಸಿಂಗ್. ಈ ಸಮಾಜದಲ್ಲಿ ಶಿಕ್ಷಣ ವ್ಯಾಪಾರೀಕರಣ, ನಿರುದ್ಯೋಗ, ಜಾತಿ ಹಾಗೂ ಕೋಮುವಾದದ ವಿರುದ್ಧ ದ್ವನಿ ಎತ್ತಲು ಭಗತ್ ಸಿಂಗ್ ರವರ ವಿಚಾರಗಳು ಸ್ಫೂರ್ತಿಯಾಗಬೇಕಿದೆ. ಭಗತ್ ಸಿಂಗ್ ರ ಜೀವನ ಸಂಘರ್ಷ ಹಾಗೂ ವಿಚಾರಗಳನ್ನು ಸ್ಫೂರ್ತಿಯಾಗಿಸಿಕೊಂಡು ಅವರ ಕನಸಿನ ಸಮಾಜವಾದಿ ಭಾರತ ಕಟ್ಟುಲು ವಿದ್ಯಾರ್ಥಿಗಳು ಸಂಕಲ್ಪವನ್ನು ತೆಗೆದುಕೊಳ್ಳಬೇಕು ಶಿಕ್ಷಣ – ಸಂಸ್ಕೃತಿ – ಮಾನವತೆ ಉಳಿಸಲು ವಿದ್ಯಾರ್ಥಿ-ಯುವಜನತೆ ಒಂದಾಗಬೇಕು ಎಂದು ಕರೆ ನೀಡಿದರು.

ಈ‌ ಕಾರ್ಯಕ್ರಮವನ್ನು ಎಐಡಿಎಸ್‌ಓ ಚಿತ್ರದುರ್ಗ ಮತ್ತು ಇನ್ನಿತರೆ ಶಾಲಾ ಕಾಲೇಜು, ಹಾಸ್ಟೆಲ್ ನಲ್ಲಿ ಭಗತ್ ಸಿಂಗ್ ರವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಮಾಡಲಾಯಿತು.

ಈ ಸಂದರ್ಭದಲ್ಲಿ ಎಐಡಿಎಸ್‌ಓ ಸದಸ್ಯರು ಹೇಮಂತ್, ಪವನ್, ನಿಶಾನ್ ಮತ್ತು ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *