ನಮ್ಮಲ್ಲಿ ಸಿನಿಮಾ ನೋಡಬೇಕು ಅಂದ್ರೆ ಮಿಡಲ್ ಕ್ಲಾಸ್ ಮಂದಿ ಫ್ಯಾಮಿಲಿ ಸಮೇತ ಹೋಗುವುದಕ್ಕೆ ಸಾಧ್ಯವಿಲ್ಲ. ಟಿಕೆಟ್ ದರದ ಜೊತೆಗೆ ಮಲ್ಟಿಪ್ಲೆಕ್ಸ್ ಗಳಲ್ಲಿ ಪಾಪ್ ಕಾರ್ನ್ ದರವೂ ದುಬಾರಿ. ಆದರೆ ಪಕ್ಕದ ರಾಜ್ಯದಲ್ಲಿ ಟಿಕೆಟ್ ದರ ಪರವಾಗಿಲ್ಲ ಎನಿಸಿದೆ. ಬಹು ನಿರೀಕ್ಷಿತ ದೇವರ ಸಿನಿಮಾ ಇಂದಿನಿಂದ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಸಕ್ಸಸ್ ನಿರ್ದೇಶಕ ಹಾಗೂ ನಟ ಇಬ್ಬರಿಗೂ ಬಹಳ ಮುಖ್ಯವಾಗಿದೆ.
ಜೂ.ಎನ್ಟಿಆರ್ ಸುಮಾರು 6 ವರ್ಷಗಳ ಬಳಿಕ ಸೋಲೋ ಹೀರೋ ಆಗಿ ಮಾಡಿರುವಂತ ಸಿನಿಮಾ ಇದು. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಜೂ.ಎನ್ಟಿಆರ್ ಅವರು ಅಗ್ನಿಪರೀಕ್ಷೆಗೆ ಇಳಿದಿದ್ದಾರೆ. ಹಾಗೇ ನಿರ್ದೇಶಕ ಕೊರಟಾಲ ಶಿವುಗು ಈ ಸಿನಿಮಾ ಒಂದು ರೀತಿಯಲ್ಲಿ ಅಗ್ನಿ ಪರೀಕ್ಷೆಯೇ ಸರಿ. ಯಾಕಂದ್ರೆ ಆಚಾರ್ಯ ಸಿನಿಮಾ ಸೋತು ಸುಣ್ಣವಾದ ಬಳಿಕ ದೇವರ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹೀಗಾಗಿ ದೊಡ್ಡ ನಿರೀಕ್ಷೆಯನ್ನೇ ಸಿನಿಮಾ ಹುಟ್ಟು ಹಾಕಿದೆ.
ಈ ಸಿನಿಮಾಗೆ ಮ್ಯೂಸಿಕ್ ಪ್ಲಸ್ ಪಾಯಿಂಟ್ ಆಗಿದೆ. ಜೈಲರ್ ಮೂಲಕ ಬಾರಿ ಗಮನ ಸೆಳೆದಿದ್ದ ಅನಿರುದ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದು ಎಲ್ಲರ ಚಿತ್ತ ಕದ್ದಿದೆ. ದೇವರ ಮೂಲಕ ಅನಿರುದ್ಧ್ ಮತ್ತೆ ಕಮಾಲ್ ಮಾಡುವುದಕ್ಕೆ ಹೊರಟಿದ್ದಾರೆ. ಇನ್ನು ಟಿಕೆಟ್ ದರವೂ ಮಿಡಲ್ ಕ್ಲಾಸ್ ಮಂದಿಗೂ ಎಟಕುವಂತಿದೆ. ಥಿಯೇಟರ್ ನಲ್ಲಿ 100 ರೂಪಾತಿ ಇದ್ದು ಮಲ್ಟಿಪ್ಲೆಕ್ಸ್ ಗಳಲ್ಲಿ 135 ರೂಪಾಯಿ ಇದೆ. ಈ ಮೂಲಕ ದೇವರ ಸಿನಿಮಾಗೆ ಜನರನ್ನು ಸೆಳೆಯುವ ಪ್ರಯತ್ನವೂ ನಡೆದಿದೆ.