ಶಿವಮೊಗ್ಗ: ಮೂಡಾ ಕೇಸ್ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ ರಿಲೀಫ್ ನೀಡಿಲ್ಲ. ರಾಜ್ಯಪಾಲರ ಆದೇಶವನ್ನೇ ಎತ್ತಿ ಹಿಡಿದಿದೆ. ಈ ಸಂಬಂಧ ಬಿಜೆಪಿ ನಾಯಕರು ಸಿದ್ದರಾಮಯ್ಯ ಮೇಲೆ ವಾಗ್ದಾಳಿ ನಡೆಸಲು ಶುರು ಮಾಡಿದ್ದಾರೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ. ಇದರ ನಡುವೆ ಕೆ.ಎಸ್.ಈಶ್ವರಪ್ಪ ಅವರು ಸಿದ್ದರಾಮಯ್ಯ ಅವರ ಪತ್ನಿ ಪರವಾಗಿ ಮಾತನಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಬಗ್ಗೆ ವೈಯಕ್ತಿಕವಾಗಿ ನಾನು ಏನು ಹೇಳಲ್ಲ. ತೀರ್ಪು ಬರುವುದಕ್ಕೂ ಮುನ್ನ ನ್ಯಾಯ ಸಿಗುತ್ತದ ಎಂದು ಸಿಎಂ ಹೇಳುತ್ತಿದ್ದರು. ತೀರ್ಪು ಬಂದ ಮೇಲೆ ಅದರ ಬಗ್ಗೆ ಮನ್ನಣೆ ಕೊಡಲ್ಲ ಎಂದು ಹೇಳುತ್ತಿದ್ದಾರೆ. ಕೋರ್ಟ್ ತೀರ್ಪಿಗೆ ಸಿದ್ದರಾಮಯ್ಯ ಅವರು ಬದ್ಧರಾಗುತ್ತಾರೋ ಇಲ್ವೊ ಗೊತ್ತಿಲ್ಲ. ಭಗವಂತನ ಧಯೆಯಿಂದ ಸಿದ್ದರಾಮಯ್ಯ ಅವರಿಗೆ ನ್ಯಾಯ ಸಿಗಲಿ. ಸಿದ್ದರಾಮಯ್ಯ ಪತ್ನಿ ಮುಗ್ಧ ಹೆಣ್ಣು ಮಗಳು. ಅವರಿಗೆ ಅನ್ಯಾಯವಾಗಬಾರದು ಎಂದಿದ್ದಾರೆ.
ಸಾತ್ವಿಕ ಹೆಣ್ಣು ಮಗಳು ಅವರು. ಭಗವಂತನಿಗೆ ನಾನು ಪ್ರಾರ್ಥನೆ ಮಾಡುತ್ತೇನೆ. ಆ ತಾಯಿಗೆ ಅನ್ಯಾಯ ಆಗಬಾರದು. ಸಹಿ ಮಾಡು ಅಂದ್ರೆ ಮನೆಯವರು ಸಹಿ ಮಾಡ್ತಾರೆ. ಆ ತಾಯಿಗೆ ಅನ್ಯಾಯ ಆಗಬಾರದು. ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ ಅಂತಿದ್ದಾರೆ. ಹಾಗಾದ್ರೆ ಕೋರ್ಟ್ ಮುಚ್ಚಿಬಿಡಿ. ಯಾಕೆ ಬೇಕು ಕೋರ್ಟ್. ನಿಮ್ಮ ಪರವಾಗಿ ಬಂದ್ರೆ ನ್ಯಾಯ, ನಿಮ್ಮ ವಿರುದ್ಧ ತೀರ್ಪು ಬಂದ್ರೆ ಅನ್ಯಾಯನಾ..? ಸಿದ್ದರಾಮಯ್ಯ ಅವರೇ ನೀವೂ ಸುಪ್ರೀಂ ಕೋರ್ಟ್ ಗೆ ಹೋಗಿ. ಆದರೆ ನ್ಯಾಯಾಂಗ ವ್ಯವಸ್ಥೆಗೆ ತಲೆಬಾಗಿ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಅದರ ಜೊತೆಗೆ ಸಿಎಂ ಪತ್ನಿ ಬಗ್ಗೆ ಕಾಳಜಿ ತೋರಿದ್ದಾರೆ.