ವರದಿ : ಸುರೇಶ್ ಪಟ್ಟಣ್
ಚಿತ್ರದುರ್ಗ, (ನ.23) : ಹೊಸದುರ್ಗ ತಾಲೂಕಿನ ಮಧುರೆಯ ಬ್ರಹ್ಮ ವಿದ್ಯಾ ನಗರದ ಶ್ರೀ ಡಾ. ಭಗೀರಥಪೀಠದ ಶ್ರೀ ಪುರುಷೋತ್ತಮಾನಂದಪುರಿ ಶ್ರೀಗಳ 53ನೇ ಜನ್ಮ ದಿನದ ಅಂಗವಾಗಿ ಎರಡು ದಿನದ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಬೆಳವಣಿಗೆಯ ಶಿಬಿರವನ್ನು ಹಮ್ಮಿಕೊಂಡಿರುವುದಾಗಿ ಗೌರವಾಧ್ಯಕ್ಷರಾದ ನಾಗರಾಜ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶ್ರೀಗಳು 53ನೇ ವರ್ಷಕ್ಕೆ ಕಾಲಿಡುತ್ತಿದ್ದು, ಇದರ ಸ್ಮರಣಾರ್ಥ ಶಿಬಿರವನ್ನು ನ.28 ಮತ್ತು 29 ರಂದು ಶ್ರೀಪೀಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಭಾರತೀಯ ಸಂಸ್ಕೃತಿ ಉಳಿಸಿ ಬೆಳಸಿ ಜೀವನ ಮೌಲ್ಯಗಳನ್ನು ಆಳವಡಿಸಿಕೊಂಡು ಆರೋಗ್ಯಪೂರ್ಣ ಸುಂದರ ಸ್ವಸ್ತ್ಯ ಸಮಾಜವನ್ನು ಕಟ್ಟಲು ಈ ಶಿಬಿರ ಸಹಾಯಕವಾಗಿದೆ ಎಂದರು.
ಈ ಶಿಬಿರದಲ್ಲಿ ವಿಶ್ರಾಂತ ನ್ಯಾಯಾಧೀಶರಾದ ಹೆಚ್.ಬಿಲ್ಲಪ್ಪ, ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ನಾಯ್ಡು, ಶಾಶ್ವತ ಹಿಂದುಳಿದ ಆಯೋಗಗಳ ಮಾಜಿ ಅಧ್ಯಕ್ಷರಾದ ಡಾ.ಸಿ.ಎಸ್.ದ್ವಾರಕನಾಥ್, ರಾಜೀವಗಾಂಧಿ ಆರೋಗ್ಯ ವಿವಿಯ ಮಾಜಿ ಕುಲಪತಿ ಡಾ.ರವೀಂದ್ರನಾಥ್, ಮಾಜಿ ಶಾಸಕರಾದ ವೈ.ಎಸ್.ದತ್ತ, ಪೋಲಿಸ್ ವರಿಷ್ಟಾಧಿಕಾರಿ ರವಿ ಚನ್ನಣ್ಣನವರ್ ಸೇರಿದಂತರ ಇತರೆ ಪ್ರಮುಖ ವಿದ್ವಾಂಸರು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಶ್ರೀ ಭಗೀರಥ ಗುರುಫೀಠದ ಇತಿಹಾಸ ಪರಂಪರೆ, ಉಪ್ಪಾರ ಸಮಾಜದ ಇತಿಹಾಸ, ಜನಪದ ಸಂಘಟನೆ, ಸರ್ವಾಂಗೀಣ ಅಭೀವೃದ್ದಿ, ಮೀಸಲಾತಿ ಆಯೋಗಗಳ ವರದಿಗಳು ಹಾಗೂ ಇತ್ತೀಚೀನ ಗೊಂದಲಗಳು ಮತ್ತು ಪರಿಹಾರಗಳು, ಉಪ್ಪಾರ ಕುಲಶಾಸ್ರ್ತಿಯ ಅಧ್ಯಯನ ಸೇರಿದಂತೆ ಇತರೆ ವಿಷಯಗಳ ಬಗ್ಗೆ ತಿಳಿಸಿಕೂಡಲಾಗುವುದು. ರಾಜ್ಯದ ವಿವಿಧೆಡೆಗಳಿಂದ ಈ ಶಿಬಿರಕ್ಕೆ ಸಾವಿರ ಶಿಬಿರಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ನಾಗರಾಜ್ ಹೇಳೀದರು.
ಗೋಷ್ಠಿಯಲ್ಲಿ ರಾಜಣ್ಣ, ಚಳ್ಳಕೆರೆ ಹನುಮಂತಪ್ಪ, ಉಪಾಧ್ಯಕ್ಷ ವಿರೇಶ್, ಪ್ರಧಾನ ಕಾರ್ಯದರ್ಶೀ ಮಹೇಶ್, ಯುವ ಘಟಕದ ಅಜ್ಜಪ್ಪ, ತಿಮ್ಮಣ್ಣ, ಬಸವರಾಜ್, ವೆಂಕಟೇಶ್ ಸೇರಿದಂತರ ಇತರರು ಭಾಗವಹಿಸಿದ್ದರು.