ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729
ಸುದ್ದಿಒನ್, ಚಳ್ಳಕೆರೆ, ಸೆಪ್ಟೆಂಬರ್. 24 : ಆಹಾರ ಅರಸಿ ಕಾಡುಪ್ರಾಣಿಗಳು ನಾಡಿನತ್ತ ಬಂದು ಪ್ರಾಣಿಗಳ ಮೇಲೆ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದು ದಿನೇ ದಿನೇ ಹೆಚ್ಚುತ್ತಿದೆ.
ಹಸುಗಳು ಮೇಯಿಸಿಕೊಂಡು ಬರುವಾಗ ಹಸು ಹಾಗೂ ವ್ಯಕ್ತಿ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಭಾನುವಾರ ಸಂಜೆ ತಾಲ್ಲೂಕಿನ ಬಂಡೆಹಟ್ಟಿ ಅರಣ್ಯ ಪ್ರದೇಶದಲ್ಲಿ ಘಟನೆ ಜರುಗಿದೆ.
ಬಂಡೆಹಟ್ಟಿ ಸಮೀಪ ಅರಣ್ಯ ಪ್ರದೇಶದಲ್ಲಿ ಬಂಡಿಹಟ್ಟಿ ಗ್ರಾಮದ ರಘು ಎನ್ನುವ ವ್ಯಕ್ತಿ ಹಸುಗಳು ಮೇಯಿಸಿಕೊಂಡು ಅರಣ್ಯದಿಂದ ಹಸುಗಳನ್ನ ಹೊಡೆದುಕೊಂಡು ಹಟ್ಟಿಗೆ ಬರುವಾಗ ಏಕಾಏಕಿ ಚಿರತೆ ಹಸುವಿನ ಮೇಲೆ ದಾಳಿ ಮಾಡಿದೆ. ಈ ಸಮಯದಲ್ಲಿ ಮಾಲೀಕ ರಘು ಚಿರತೆಯನ್ನು ಒಡಿಸಲು ಹಸುವಿನ ಬಳಿ ಒಡಿದಾಗ ರಘು ಮೇಲೆ ಸಹ ಚಿರತೆ ಎಗರಿ ದಾಳಿಗೆ ಮುಂದಾಗಿದ್ದಾಗ ರಸ್ತೆಯಲ್ಲಿ ಬರುತ್ತಿದ್ದ ಟ್ರಾಕ್ಟರ್ ಚಾಲಕ ಹಾಗೂ ಕುರಿಗಾಯಿಗಳು ಕಿರುಚಾಟ ನಡೆಸಿದಾಗ ವ್ಯಕ್ತಿ ಮೇಲೆ ದಾಳಿ ಮಾಡಿದೆ ಚಿರತೆ ಬಿಟ್ಟು ಅರಣ್ಯ ಪ್ರದೇಶದಲ್ಲಿ ಒಡಿಹೋಗಿದ್ದು, ರಘು ಪ್ರಾಣಪಾಯದಿಂದ ಪಾರಾಗಿದ್ದಾನೆ.
ಈ ಹಿಂದೆ ಗ್ರಾಮದ ಕುರಿ, ಮೇಕೆ, ನಾಯಿಗಳ ಮೇಲೆ ಚಿರತೆ ದಾಳಿ ಮಾಡಿದೆ, ಈಗ ಮತ್ತೆ ದಾಳಿ ಮಾಡಿರುವುದರಿಂದ ಗ್ರಾಮದ ಕುರಿಗಾಯಿಗಳು ಆತಂಕಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.