ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಯುವತಿಯೊಬ್ಬಳು ತನ್ನ ಸೋಷಿಯಲ್ ಮೀಡಿಯಾ ಮೂಲಕ ಕನ್ನಡಿಗರನ್ನೇ ಕೆಣಕಿದ್ದಳು. ಉತ್ತರ ಭಾರತೀಯರು ಇಲ್ಲ ಅಂದ್ರೆ ಬೆಂಗಳೂರು ಖಾಲಿ ಖಾಲಿ. ಪಬ್ ಗಳು ನಡೆಯಲ್ಲ. ನಮ್ಮ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಮಾತನಾಡಿ ಎಂದಿದ್ದರು. ಇದೀಗ ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಆಗಿದೆ ಆ ಯುವತಿಯ ಪರಿಸ್ಥಿತಿ. ಈಗ ಇದ್ದ ಕೆಲಸವನ್ನು ಕಳೆದುಕೊಂಡಿದ್ದಾರೆ.
ಕರ್ನಾಟಕದಲ್ಲೇ ಇದ್ದು ಕನ್ನಡಿಗರನ್ನೇ ಕೆಣಕಿ, ತಮಗೆ ಇಷ್ಟ ಬಂದಂತೆ ಇಲ್ಲಿಯೇ ಇರುವುದು ಕಷ್ಟ ಸಾಧ್ಯವೇ. ಕರ್ನಾಟಕ ಅದರಲ್ಲೂ ಬೆಂಗಳೂರು ಎಲ್ಲರಿಗೂ ಜಾಗ ಕೊಟ್ಟಿದ್ದು, ಅನ್ನ ಕೊಟ್ಟಿದೆ. ಅದಕ್ಕೆ ಗೌರವ ಕೊಡಲೇಬೇಕು ಅಲ್ವಾ. ಆದರೆ ಅಗೌರವ ತೋರಿಸಿಕೊಂಡು ನಮ್ಮಿಂದಾನೇ ನೀವೂ ಅನ್ನೋ ಅಹಂಕಾರ ಮೆರೆದರೆ ಕನ್ನಡಿಗರು ಹೇಗೆ ಕಿವಿ ಮಾತು ಹೇಳಬೇಕೋ ಆ ರೀತಿ ಹೇಳುತ್ತಾರೆ. ಈಗ ಆಗಿದ್ದು ಅದೇ. ಆ ಯುವತಿಯ ಮಾತುಗಳು ಕನ್ನಡಿಗರನ್ನು ಕೆರಳಿ ಕೆಂಡವಾಗುವಂತೆ ಮಾಡಿತ್ತು. ಸುಗಂಧ ಶರ್ಮಾ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು, ಟೀಕೆಗಳು ಕೇಳಿ ಬಂದಿತ್ತು.
ಸುಗಂಧ ಶರ್ಮಾ ಆಡಿದ ಮಾತುಗಳಿಗೆ ಕೋರಮಂಗಲದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎಫ್ಐಆರ್ ದಾಖಲಾಗುತ್ತಿದ್ದಂತೆ ಆಕೆ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿ ಆಕೆಯನ್ನು ಕೆಲಸದಿಂದ ವಜಾ ಮಾಡಿದೆ. ಇದರ ಪರಿಣಾಮ ಸುಗಂಧಾ ಶರ್ಮಾ ಗಂಟು ಮೂಟೆ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ. ನಾವಿಲ್ಲದಿದ್ದರೆ ಬೆಂಗಳೂರು ಗ್ಲಾಮರ್ ಕಳೆದುಕೊಳ್ಳುತ್ತದೆ ಎಂದ ಯುವತಿಗೆ ಈಗ ಬಿಸಿ ಮುಟ್ಟಿದೆ. ಇನ್ನಾದರೂ ಬೇರೆ ಕಡೆಯಿಂದ ಬರುವ ಜನ ಸ್ಥಳೀಯವಾಗಿ ಉಳಿದುಕೊಳ್ಳುವ, ಅನ್ನ ತಿನ್ನುವ ಜಾಗಕ್ಕೆ ಬೆಲೆ ಕೊಡೋದನ್ನ ಕಲಿಯಬೇಕಿದೆ.