ಚಿತ್ರದುರ್ಗ, (ನವೆಂಬರ್. 23) : 2020-21ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ವೃಂದದ ಶಿಕ್ಷಕರನ್ನು ಆನ್ಲೈನ್ ಮೂಲಕ ಕೌನ್ಸಿಲಿಂಗ್ ನಡೆಸಲು ಸುತ್ತೋಲೆ ಹೊರಡಿಸಿದ್ದು, ಈ ಹಿನ್ನಲೆಯಲ್ಲಿ ಮೊದಲನೇ ಹಂತದಲ್ಲಿ ಜಿಲ್ಲೆಯ ಒಳಗಿನ ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಹಾಗೂ ಅಂತಿಮ ಪಟ್ಟಿಯಲ್ಲಿರುವ ಶಿಕ್ಷಕರ ಕೌನ್ಸಲಿಂಗ್ನ್ನು ನವೆಂಬರ್ 24 ರಿಂದ 29 ರವರೆಗೆ ಚಿತ್ರದುರ್ಗ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಎಸ್ಎಸ್ಎ ಸಭಾಂಗಣದಲ್ಲಿ ನಡೆಸಲಾಗುವುದು.
ಕೋರಿಕೆ ವರ್ಗಾವಣೆ ಅಂತಿಮ ಪಟ್ಟಿಯಲ್ಲಿರುವ ಶಿಕ್ಷಕರು ಪ್ರತಿದಿನ ಬೆಳಿಗ್ಗೆ 10.00 ಗಂಟೆಗೆ ಅಂತಿಮ ಆದ್ಯತಾ ಪಟ್ಟಿಯಲ್ಲಿನ ಕ್ರಮ ಸಂಖ್ಯೆಯ ಪ್ರಕಾರ ಕೌನ್ಸಲಿಂಗ್ಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳುವಂತೆ ತಮ್ಮ ತಾಲ್ಲೂಕಿನ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಶಿಕ್ಷಕರುಗಳ ಗಮನಕ್ಕೆ ತರುವಂತೆ ಹಾಗೂ ತಮ್ಮ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದೆ. ಅಂತಿಮಾ ಆದ್ಯತಾ ಪಟ್ಟಿಯನ್ನು ಈಗಾಗಲೇ ತಮಗೆ ಇ-ಮೇಲ್ ಮೂಲಕ ಕಳುಹಿಸಿದ್ದು, ಪಟ್ಟಿಯನ್ನು ಹಾಗೂ ಖಾಲಿ ಹುದ್ದೆ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲು ಹಾಗೂ ತಮ್ಮ ತಾಲ್ಲೂಕಿನ ಖಾಲಿ ಹುದ್ದೆ ಮಾಹಿತಿ ಆನ್ಲೈನ್ನಲ್ಲಿರುವಂತೆ ಪ್ರತಿ ತೆಗೆದು ದೃಢೀಕರಿಸಿ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಲು ತಿಳಿಸಿದೆ.
ಕೌನ್ಸಿಲಿಂಗ್ ಪ್ರಕ್ರಿಯೆ ಸುಗಮವಾಗಿ ನಡೆಯಲು ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಕ್ಷೇತ್ರ ಶಿಕ್ಷಣಾಧಿಕಾರಿಗಳ, ವಿಷಯ ನಿರ್ವಾಹಕರು, ಅಧೀಕ್ಷಕರು ಖುದ್ದು ಹಾಜರಿರಲು ಸೂಚಿಸಿದೆ.
ನವೆಂಬರ್ 24ರಂದು ಪದವಿದರೇತರ ಮುಖ್ಯ ಶಿಕ್ಷಕರು, ಬಡ್ತಿ ಮುಖ್ಯ ಶಿಕ್ಷಕರು ಆದ್ಯತಾ ಕ್ರಮಸಂಖ್ಯೆ 01 ರಿಂದ 60, ದೈಹಿಕ ಶಿಕ್ಷಕರು 01 ರಿಂದ 32 ಹಾಗೂ ವಿಶೇಷ ಶಿಕ್ಷಕರು ಆದ್ಯತಾ ಕ್ರಮಸಂಖ್ಯೆ 01 ಕೌನ್ಸಿಲಿಂಗ್ ನಡೆಯಲಿದೆ.
ಪ್ರಾಥಮಿಕ ಶಾಲಾ ಸಹ ಶಿಕ್ಷಕರು ಕೌನ್ಸಿಲಿಂಗ್ ನ.25ರಂದು ಆದ್ಯತಾ ಕ್ರಮ ಸಂಖ್ಯೆ 01 ರಿಂದ 300, ನ.26ರಂದು ಆದ್ಯತಾ ಕ್ರಮಸಂಖ್ಯೆ 301 ರಿಂದ 600, ನ.27ರಂದು ಆದ್ಯತಾ ಕ್ರಮಸಂಖ್ಯೆ 601 ರಿಂದ 1150 ರವರಗೆ ನಡೆಯಲಿದೆ.
ನವೆಂಬರ್ 29ರಂದು ಪ್ರೌಢಶಾಲಾ ಸಹ ಶಿಕ್ಷಕರು ಆದ್ಯತಾ ಕ್ರಮಸಂಖ್ಯೆ 01 ರಿಂದ 160, ಪ್ರೌಢಶಾಲಾ ದೈಹಿಕ ಶಿಕ್ಷಕರು ಆದ್ಯತಾ ಕ್ರಮ ಸಂಖ್ಯೆ 01 ರಿಂದ 16 ಹಾಗೂ ಪ್ರೌಢಶಾಲಾ ವಿಶೇಷ ಶಿಕ್ಷಕರು ಆದ್ಯತಾ ಕ್ರಮಸಂಖ್ಯೆ 01 ರಿಂದ 4 ರವರೆಗೆ ಕೌನ್ಸಲಿಂಗ್ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.