Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸುಳ್ಳು ಆರೋಪ ಮಾಡುವವರ ವಿರುದ್ಧ ಮಾನನಷ್ಟ ಮೊಕದ್ದಮೆ : ಬದರಿನಾಥ್

Facebook
Twitter
Telegram
WhatsApp

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ, ಸೆಪ್ಟೆಂಬರ್. 20 : ನನ್ನ ಮೇಲೆ ಆರೋಪ ಮಾಡುವವರ ವಿರುದ್ಧ ಮಾನನಷ್ಟ ಕೇಸ್ ದಾಖಲಿಸುವುದಾಗಿದೆ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಮಾರ್ಗದರ್ಶಕರು ಹಾಗೂ ನಗರಾಭಿವೃದ್ಧಿ  ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬದರಿನಾಥ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿಯ ಮಾರ್ಗದರ್ಶಕರಾದ ಭದ್ರೀನಾಥ್ ಅವರು ಮಾತನಾಡಿ, ಕಳೆದ ನಾಲ್ಕೈದು ದಿನಗಳಿಂದ ನನ್ನ ಮೇಲೆ ವೈಯಕ್ತಿಕವಾಗಿ ಸುರೇಶ್ ಬಾಬು @ ಸೈಟ್ ಬಾಬಣ್ಣ ಹಾಗೂ ಇತರೆ ಕೆಲವೊಂದಿಷ್ಟು  ಜನ ವ್ಯಯಕ್ತಿಕವಾದ ಆರೋಪಗಳನ್ನು ಮಾಡುತ್ತಿದ್ದಾರೆ. ನಿನ್ನೆಯೂ ಸಹ ವೈಯಕ್ತಿಕ ವಿಚಾರಗಳನ್ನು  ತೆಗೆದುಕೊಂಡು ಯಾವುದೋ ಆಡಿಯೋ ವೈರಲ್ ಆಗಿದೆ ಎಂದು ಹೇಳಿ ಡಿ.ಸಿ ಕಛೇರಿಗೆ ಹಾಗೂ ಡಿ.ವೈ.ಎಸ್.ಪಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ನಾನು ಯಾವುದೇ ಮುಸ್ಲಿಂ ಸಂಘಟನೆಗಳ ಜೊತೆ ಸೇರಿ ಸಂಘ ಪರಿವಾರದ ಉದ್ದೇಶಗಳು ಹಾಗೂ ಕಾರ್ಯಕರ್ತರಿಗೆ ಬೆದರಿಕೆವೊಡ್ಡಿ ಮೂರು ಕೋಟಿ ರೂಪಾಯಿಗಳ ಡೀಲ್ ಕೊಟ್ಟಿದ್ದಾರೆ ಎಂದು ಆರೋಪ ಇದೆ.. ಅದರಲ್ಲಿ ಸ್ಪಷ್ಟವಾಗಿ ಇದೆ ನನ್ನ ಜೊತೆ ಮಾತನಾಡಿರುವುದು ಯಾವುದೇ ಮುಸ್ಲಿಂ ಸಂಘಟನೆಯವರಲ್ಲ. ನನ್ನ ಜೊತೆ ಮಾತನಾಡಿರುವುದು ಮುಸ್ಲಿಂ ಸಂಘಟನೆ ಜೊತೆ ಸೇರಿ ಡೀಲ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿರುವ ಯರ್ರಿಸ್ವಾಮಿ ರವರ ಜೊತೆ ಮಾತನಾಡಿರುವುದು.ಅದು ನಮ್ಮ ಕುಟುಂಬ ವ್ಯವಹಾರಕ್ಕೆ ಸಂಬಂಧಪಟ್ಟ ವಿಷಯದ ಬಗ್ಗೆ ಎಂದು ಸ್ಪಷ್ಟಪಡಿಸಿದರು.

ಅನಿಲ್ ಮೆಟಲ್ ಸ್ಟೋರ್‌ನ ಮಾಲೀಕರಾದ ಚಂದ್ರಕಾಂತ್ ಜೈನ್ ಹಾಗೂ ನಮ್ಮ ಮಧ್ಯೆ ಸುಮಾರು 50 ವರ್ಷಗಳಿಂದ ಸ್ನೇಹವಿದ್ದು ಸ್ನೇಹದ ಜೊತೆಗೆ ವ್ಯವಹಾರ ಇದೆ. ನಮ್ಮ ಸಹೋದರ, ಚಂದ್ರಕಾಂತ್ ಜೈನ್ ರವರಿಗೆ ಹಣವನ್ನು ಸಾಲ ಸಹ ಕೊಡಿಸಿದ್ದರು.. ಕೊಡಿಸಿದ ಸಾಲವನ್ನು ಅದನ್ನು ಹಿಂದುರುಗಿ ಕೊಡದೇ ಇದ್ದಾಗ ವಾಪಾಸ್ ಕೇಳಿದಾಗ ಯರ್ರಿಸ್ವಾಮಿ ಎಂಬ ವ್ಯಕ್ತಿ ಅಡ್ಡಿ ಪಡಿಸುವ ಕೆಲಸ ಮಾಡಿದ್ದಾನೆ.ಅದನ್ನು ಯರಿಸ್ವಾಮಿಗೆ ಪರಿಚಯದ ಕಾರಣಕ್ಕೆ ತೊಂದರೆ ಏಕೆ ಮಾಡುತ್ತಿದ್ದೀಯ ನಮ್ಮ ಅಣ್ಣಂಗೆ ಎಂದು ಕೇಳಿದ್ದು ಇದು ಪೊಲೀಸ್ ಠಾಣೆಯಲ್ಲಿನೊ ನಡೆಯುತ್ತದೆ ವಿಚಾರ.ಅದು ನಮಗೆ ಸಂಬಂಧಪಟ್ಟ ವಿಚಾರನೇ.. ಸುಮಾರು ಮೂರು ಕೋಟಿ ರೂ ಹಣ ನಮ್ಮ ಅಣ್ಣನಿಗೆ ಕೊಡಬೇಕು.ವೈಯಕ್ತಿಕ ವಿಚಾರವನ್ನು ಹಿಂದೂ ಮಹಾಗಣಪತಿಗೆ ತಳುಕು ಹಾಕುವಂತಹ ಕೆಟ್ಟ ಕೆಲಸವನ್ನು ಸೈಟ್ ಬಾಬುರವರು ಮಾಡುತ್ತಿದ್ದಾರೆ.

ತಮ್ಮ ಮೇಲಿನ ಹಣದ ವ್ಯವಹಾರದ ಕುರಿತು ಸ್ಪಷ್ಟನೆ ನೀಡಿ ಮಾತನಾಡಿದ್ದು ನನ್ನ ಮೇಲೆ ವ್ಯಯಕ್ತಿವಾಗಿ ಸುರೇಶ್ ಬಾಬು ಹಾಗೂ ಕೆಲ ಮಿತ್ರರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಹಣದ ವಿಚಾರದ ಬಗ್ಗೆ ಆಡಿಯೋ ಬಿಡುಗಡೆ ಮಾಡಿದ್ದಾರೆ. ನಾನು ಮುಸ್ಲಿಂ ಸಂಘಟನೆ ಜೊತೆ ಸೇರಿ ಸಂಘ ಪರಿವಾರದವ ಮೇಲೆ 3 ಕೋಟಿ ಡೀಲ್ ಕೊಟ್ಟಿದ್ದಾಗಿ ಆರೋಪ ಮಾಡಿದ್ದು ನನ್ನ ಜೊತೆ ಮಾತನಾಡಿದ್ದು ಯರ್ರಿಸ್ವಾಮಿ ಅವರ ಜೊತೆ ನಮ್ಮ ಕುಟುಂಬದ ವ್ಯವಹಾರದ ಬಗ್ಗೆ ಮಾತನಾಡದ್ದೇನೆ ಎಂದರು.

 

ನಮ್ಮ ಕುಟುಂಬದ 3 ಕೋಟಿ ವ್ಯವಹಾರದ ಬಗ್ಗೆ ಮಾತನಾಡಿದ್ದು ಡೀಲ್ ಎಂಬ ಪದ ಬಳಸಿದ್ದೇನೆ. 3 ಕೋಟಿ ಸುಪಾರಿ ಕೊಡುವಂತವರು ಚಿತ್ರದುರ್ಗದಲ್ಲಿ ಯಾರು ಇಲ್ಲ. ನನ್ನ ಖಾಸಗೀ ವ್ಯವಹಾರವನ್ನ ಹಿಂದೂ ಮಹಾ ಗಣಪತಿ ಜೊತೆ ತಳಕು ಹಾಕುವ ಕೆಲಸ ಸೈಟ್ ಬಾಬು ಮಾಡುತ್ತಿದ್ದಾರೆ. ನನ್ನ ಆಡಿಯೋ ತಿರುಚಿ ಪೊಲೀಸ್ ಇಲಾಖೆಗೆ ಕೊಟ್ಟು ನನ್ನನ್ನ ಹಿಂದೂ ಮಹಾ ಗಣಪತಿ ಕಡೆ ಬರಬಾರದು ಎಂದು ಹೇಳುತ್ತಿದ್ದು ಈ ಸಮಿತಿ ಮಾಡುವುದು ಸಂಘಟನೆಯಾಗಿದ್ದು ಅದರಲ್ಲಿ ನಾನು ಇದ್ದೇನೆ. ಇದನ್ನ ತಳಕು ಹಾಕಿ ಮಾತನಾಡಿ ನನ್ನ ಮೇಲೆ ಆರೋಪ ಮಾಡುತ್ತಿದ್ದು ನಾನು ಅವರ ಮೇಲೆ ವ್ಯಯ್ಯಕ್ತಿಕ ನಿಂಧನೆಗೆ ಮಾಡಿದ್ದು ಮಾನನಷ್ಟ ಮೊಕದ್ದಮೆ ಕೇಸ್ ಧಾಖಲು ಮಾಡಲು ನಿರ್ದಾರ ಮಾಡಿದ್ದಾಗಿ ಭಧ್ರೀನಾಥ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

 

ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಕೆ.ಎನ್.ವಿಶ್ವನಾಥಯ್ಯ, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಎಂ.ಸುರೇಶ್ ಉಪಸ್ಥಿತರಿದ್ದರು.

 

 

 

 

 

 

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶ್ವಾಸ ಇರುವವರೆಗೂ ವಿಶ್ವಾಸ ಕಳೆದುಕೊಳ್ಳಬೇಡಿ : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

    ಸುದ್ದಿಒನ್ : ಶ್ವಾಸ ಇರುವವರಿಗೂ ವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. ಮಾಲ್ಡೀವ್ಸ್ ದೇಶದ ವಿಲ್ಲಾ ನೌಟೀಕ ಪ್ಯಾರಡೇಸ್ ದ್ವೀಪದಲ್ಲಿ ಶುಕ್ರವಾರ ನಡೆದ ವಿಶ್ವ

ಡಿ.ಕೆಂಪಣ್ಣನವರು ತಮ್ಮ ಜೀವಿತಾವಧಿಯ ಕೊನೆಯವರೆಗೂ ಭ್ರಷ್ಠಾಚಾರದ ವಿರುದ್ಧ ಹೋರಾಡಿದರು : ಕೆ.ಮಲ್ಲೇಶಪ್ಪ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.20 : ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣನವರ ನಿಧನಕ್ಕೆ ಜಿಲ್ಲಾ ಗುತ್ತಿಗೆದಾರರ ಸಂಘದಿಂದ

ಶಾಸಕ ಮುನಿರತ್ನ ವಿರುದ್ಧ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿ : ಎಸ್.ಜಯಣ್ಣ ಮನವಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.20 : ಗುತ್ತಿಗೆದಾರನನ್ನು ಮನೆಗೆ ಕರೆಸಿಕೊಂಡು ಲಂಚಕ್ಕೆ ಬೇಡಿಕೆಯಿಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬೆಂಗಳೂರು ರಾಜರಾಜೇಶ್ವರಿ

error: Content is protected !!