ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರಲು ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಕೂಡ ಸಾಕಷ್ಟು ಶ್ರಮ ಹಾಕಿದ್ದಾರೆ. ಆದರೆ ರೇಣುಕಾಸ್ವಾಮಿ ಸಾವಿನ ಬಳಿಕ ಸೆರೆಂಡರ್ ಆಗು ಎಂದಾಗ, ಸಾಧ್ಯವೇ ಇಲ್ಲ ಎಂದು ಚಿತ್ರದುರ್ಗದ ಕಡೆಗೆ ಹೊರಟಿದ್ದರಂತೆ. ಆದರೆ ಗ್ಯಾಂಗ್ ನ ಮೂವರು ಮನವಿ ಮಾಡಿ, ಸರೆಂಡರ್ ಮಾಡಿಸಿದ್ದಾರೆ.
ಸದ್ಯ ದರ್ಶನ್ ಅಂಡ್ ಗ್ಯಾಂಗ್ ನ ಕರಾಳ ಕೃತ್ಯದ ಇಂಚಿಂಚು ವಿಚಾರಗಳು ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಬಯಲಾಗುತ್ತಿದೆ. ಅದರಲ್ಲಿ ರಾಘವೇಂದ್ರ ವಿಚಾರ ಕೂಡ ಒಂದು. ರೇಣುಕಾಸ್ವಾಮಿ ಸಾವಿನ ಮೇಲೆ, ನಾನ್ಯಾಕೆ ಪೊಲೀಸರಿಗೆ ಸರೆಂಡರ್ ಆಗಬೇಕು. ಅದು ಆಗಲ್ಲ ಎಂದು ಹೇಳಿ ಚಿತ್ರದುರ್ಗದ ಕಡೆಗೆ ಹೊರಟಿದ್ದ ರಾಘವೇಂದ್ರನನ್ನು ತಡೆದು, ದರ್ಶನ್, ವಿನಯ್ ಹಾಗೂ ಪ್ರದೂಶ್ ಒಪ್ಪಿಸಿದ್ದರಂತೆ. ರಾಘವೆಂದ್ರ ಸರೆಂಡರ್ ಆಗಲಿಲ್ಲ ಎಂದರೆ ಚಿತ್ರದುರ್ಗದ ಲಿಂಕ್ ಅನ್ನು ಪೊಲೀಸರಿಗೆ ನೀಡಲು ಕಷ್ಟವಾಗುತ್ತದೆ ಎಂದು ದರ್ಶನ್ ಅಭಿಮಾನಿಯನ್ನೇ ಸಿಕ್ಕಿಸಿಬಿಟ್ಟಿದ್ದಾರೆ.
ರಾಘವೇಂದ್ರ ಇಲ್ಲದೆ ಬರೀ ಬೆಂಗಳೂರು ಹುಡುಗರು ಹೇಳಿದರೆ ಕಥೆಯನ್ನು ಪೊಲೀಸರು ನಂಬುವುದಿಲ್ಲ. ಅದರಲ್ಲಿ ಸತ್ಯ ಎನಿಸುವುದಿಲ್ಲ. ರಾಘವೇಂದ್ರ ಬೇಕೆ ಬೇಕು ಎಂದು ತೀರ್ಮಾನಿಸಿ, ಹಣದ ಆಮಿಷ ತೋರಿಸಿ ಒಪ್ಪಿಸಿದ್ದಾರೆ. ಅದರಂತೆ ರಾಘವೇಂದ್ರ, ಕೇಶವಮೂರ್ತಿ, ಕಾರ್ತಿಕ್ ಪೊಲೀಸರ ಬಳಿ ಹೋಗಿ, ಹಣ ಕೊಡಬೇಕಿತ್ತು, ಅದರ ವಿಚಾರಕ್ಕೆ ಗಲಾಟೆ ಆಯ್ತು ಅದಕ್ಕೆ ಕೊಂದೆವು ಎಂದು ಹೇಳಿದ್ದರು. ಪೊಲೀಸರಿಗೆ ಅಲ್ಲಿಯೇ ಅನುಮಾನ ಮೂಡಿತ್ತು. ಪೊಲೀಸರ ಸ್ಟೈಲ್ ನಲ್ಲಿ ವಿಚಾರಣೆ ಶುರು ಮಾಡಿದಾಗ ದೊಡ್ಡ ದೊಡ್ಡವರೇ ಕೇಸಲ್ಲಿ ಲಾಕ್ ಆದರು.