ಚಿತ್ರದುರ್ಗ. ಸೆ.04: ಜಿಲ್ಲೆಯಲ್ಲಿ 2024-25 ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಾದ ಪ್ರವಾಹ ಅತೀವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಕುರಿತಂತೆ ರೈತವಾರು ಪಟ್ಟಿ ಪ್ರಕಟಿಸಲಾಗಿದೆ.
ಕೃಷಿ ಬೆಳೆಗಳ ಪೈಕಿ ಚಳ್ಳಕೆರೆ ತಾಲ್ಲೂಕಿನ 189.76 ಹೆಕ್ಟೇರ್, ಚಿತ್ರದುರ್ಗ ತಾಲ್ಲೂಕಿನ 366.06 ಹೆಕ್ಟೇರ್ ಸೇರಿ ಒಟ್ಟು 555.82 ಹೆಕ್ಟೇರ್ ಹಾಗೂ ತೋಟಗಾರಿಕೆ ಬೆಳೆಗಳ ಪೈಕಿ ಚಿತ್ರದುರ್ಗ ತಾಲ್ಲೂಕಿನ 335.50 ಹೆಕ್ಟೇರ್, ಚಳ್ಳಕೆರೆ ತಾಲ್ಲೂಕಿನ 33.77 ಹೆಕ್ಟೇರ್, ಹಿರಿಯೂರು ತಾಲ್ಲೂಕಿನ 30.90 ಹೆಕ್ಟೇರ್ ಮತ್ತು ಮೊಳಕಾಲೂರು ತಾಲ್ಲೂಕಿನ 3.13 ಹೆಕ್ಟೇರ್ ಸೇರಿ ಒಟ್ಟು 409.30 ಹೆಕ್ಟೇರ್ ಬೆಳೆ ನಷ್ಟ ಉಂಟಾಗಿದೆ.
ಈ ಕುರಿತು ಜಂಟಿ ಪರಿಶೀಲನಾ ವರದಿಯಂತೆ ಬೆಳೆ ಹಾನಿಯಾದ ರೈತರ ಪಟ್ಟಿಯನ್ನು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್, ಗ್ರಾಮ ಪಂಚಾಯತ್ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಬುಧವಾರ ಪ್ರಕಟಿಸಲಾಗಿದೆ. ಈ ಕುರಿತು ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಿಸಿದ ತಹಶೀಲ್ದಾರ್, ಕೃಷಿ, ತೋಟಗಾರಿಕಾ ಇಲಾಖೆಗಳ ತಾಲ್ಲೂಕು ಕಛೇರಿಗಳಲ್ಲಿ 07 ದಿನಗಳೊಳಗಾಗಿ ಸಲ್ಲಿಸಬಹದು. ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗದಿದ್ದರೆ ಪಟ್ಟಿಯನ್ನು ಅಂತಿಮಗೊಳಿಸಿ ನಿಯಮಾನುಸಾರ ಪರಿಹಾರ ಪಾವತಿಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.