ವಾಹನ ಪ್ರಿಯರು, ಮೊಬೈಲ್ ಪ್ರಿಯರು ಜಾಸ್ತಿ ಇದ್ದಾರೆ. ಹೊಸ ಹೊಸ ಫೀಚರ್ಸ್ ಇರುವ ಮಾಡೆಲ್ ಗಳು ಬಂದಾಗ ಮೊದಲು ತೆಗೆದುಕೊಳ್ಳುತ್ತಾರೆ. ಇದೀಗ ಕ್ಲಾಸಿಕ್ ಒಡೆತನದ ಜಾವಾ ಮೋಟಾರ್ ಸೈಕಲ್ ಕಂಪನಿಯಿಂದ ಹೊಸದೊಂದು ಬೈಕ್ ಬಿಡುಗಡೆಯಾಗಿದೆ. ಜಾವಾ 42 FJ ಬೈಕ್ ಅನ್ನು ಪರಿಚಯಿಸುತ್ತಿದೆ. ಇದರ ವಿಶೇಷತೆಗಳನ್ನು ಗಮನಿಸಿದವರು ಮಾರುಕಟ್ಟೆಯಲ್ಲಿ ರಾಯಲ್ ಎನ್ಫೀಲ್ಡ್ ಗೆ ಟಕ್ಕರ್ ಕೊಡಲಿದೆ ಎಂದೇ ಹೇಳುತ್ತಿದ್ದಾರೆ.
ಇನ್ನು ಈ ಬೈಕ್ ಗಳು 1.99 ಲಕ್ಷದಿಂದ 2.20 ಲಕ್ಷದವರೆಗಿನ ಬೈಕ್ ಗಳು ಲಭ್ಯವಿದೆ ಎನ್ನಲಾಗಿದೆ. ಅರೊರಾ ಗ್ರೀನ್ ಮ್ಯಾಟೆ ಸ್ಪೋಕ್, ಅರೊರಾ ಗ್ರೀನ್ ಮ್ಯಾಟೆ ಅಲಾಯ್, ಮಿಸ್ಟಿಕ್ಯೂ ಕಾಪರ್ ಮತ್ತು ಕ್ಮಾಸ್ಮೊ ಬ್ಯೂ ಮ್ಯಾಟೆ ಎನ್ನುವ ನಾಲ್ಕು ವೆರಿಯೆಂಟ್ ಬಣ್ಣಗಳನ್ನು ಹೊಂದಿದೆ. ವಿನ್ಯಾಸಗಳಲ್ಲೂ ಆಕರ್ಷಣೆಯನ್ನು ಹೊಂದಿದೆ. ಜಾವಾ ಮೋಟಾರ್ ಸೈಕಲ್ ಗಳ ಸಂಸ್ಥಾಪಕರಾದ ಫ್ರಾಂಟಿಸೆಕ್ ಜಾನೆಕೆಕೆ ಅವರ ನೆನಪಿಗಾಗಿ ಈ ಹೊಸ ಬೈಕ್ ಗಳ ಮಾದರಿಯನ್ನು ಬಿಡುಗಡೆ ಮಾಡಲಾಗಿದೆ.
ಅಲ್ಯುಮಿನಿಯಮ್ ಕೂಡ ಇದರಲ್ಲಿದೆ. ಟ್ಯಾಂಕ್ ಕ್ಲಾಡಿಂಗ್ ಅನ್ನು ಅಲ್ಯುಮಿನಿಯಮ್ ನಿಂದ ಸಿದ್ಧಪಡಿಸಲಾಗಿದೆ. ಎಲ್ಇಡಿ ಹೆಡ್ ಲ್ಯಾಂಪ್, ಯೆಜ್ಡಿ ಬೈಕಿನಲ್ಲಿರುವಂತೆ ಇನ್ಸ್ಟುಮೆಂಟ್ ಕ್ಲಸ್ಟರ್ ಮತ್ತು ಸ್ವಿಚ್ ಗೇರ್ ನೀಡಲಾಗಿದೆ. ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಸಸ್ಪೆನ್ಷನ್ ನೀಡಲಾಗಿದ್ದರೆ ಹಿಂಬದಿಯಲ್ಲಿ ಟ್ವಿನ್ ಶಾಕ್ ಅಬ್ಸಾರ್ವರ್ ನೀಡಲಾಗಿದ್ದು, ಇದು 790 ಎಂಎಂ ಆಸನ ಎತ್ತರ ಮತ್ತು 178 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ನೊಂದಿಗೆ ಬರೋಬ್ಬರಿ 184 ಕೆ.ಜಿ ಒಟ್ಟಾರೆ ತೂಕವನ್ನು ಹೊಂದಿದೆ.