ಮಲಯಾಳಂನ ಹೇಮಾ ವರದಿ ರೀತಿಯಲ್ಲಿಯೇ ಸ್ಯಾಂಡಲ್ ವುಡ್ ನಲ್ಲೂ ಒಂದು ಸಮಿತಿ ರಚಿಸಿ : ಶೃತಿ ಹರಿಹರನ್

1 Min Read

 

 

ಬೆಂಗಳೂರು: ಮಲಯಾಳಂ ಇಂಡಸ್ಟ್ರಿಯಲ್ಲಿಯೇ ಹೇಮಾ ಸಮಿತಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಮಲಯಾಳಂ ಚಿತ್ರರಂಗದಲ್ಲಿ ನಟಿಯರು ಎದುರಿಸುತಚತಿರುವ ಲೈಂಗಿಕ ಕಿರುಕುಳ ಹಾಗೂ ಶೋಷಣೆಗಳ ಬಗ್ಗೆ ಈ ವರದಿಯಲ್ಲಿ ಉಲ್ಲೇಖವಿದೆ. ಈ ವರದಿಯೂ 2019ರಲ್ಲಿಯೇ ಸರ್ಕಾರದ ಕೈ ಸೇರಿತ್ತು. ಆದರೆ ಈಗ ಒಂದೊಂದೇ ವಿಚಾರಗಳು ಬಹಿರಂಗವಾಗುತ್ತಿವೆ. ಈ ಸಂಬಂಧ ಇದೀಗ ನಟಿ ಶೃತಿ ಹರಿಹರನ್ ಮಾತನಾಡಿ, ಕನ್ನಡ ಚಿತ್ರರಂಗದಲ್ಲೂ ಇಂಥದ್ದೊಂದು ಸಮಿತಿ ರಚಿಸಲಿ ಎಂದಿದ್ದಾರೆ.

ನನಗೆ ಹೇಮಾ ಸಮಿತಿಯ ವರದಿ ಬಗ್ಗೆ ತುಂಬಾನೇ ಗೌರವ ಇದೆ. ಇಷ್ಟು ದಿನಗಳಿಂದ ಈ ಬಗ್ಗೆ ನಾವು ಇದನ್ನು ಮುಚ್ಚು ಮರೆಯಲ್ಲಿ ಮಾತನಾಡುತ್ತಿದ್ದೆವು. ಸೆಕ್ಷುವಲ್ ಫೇವರ್ ಅತಿಯಾಗಿದೆ ಎಂದು ಹೇಳುತ್ತಿದ್ದೆವು. ಈ ವಿಚಾರವನ್ನು ಆಪ್ತಬಳಗದಲ್ಲಿ ಕೆಲವರು ಜೋಕ್ ಕೂಡ ಮಾಡುತ್ತಿದ್ದರು. ಆದರೆ ಈ ವುಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದು ಹೆಮ್ಮೆಯ ವಿಚಾರವೇ ಸರಿ.

ಸಿನಿಮಾ ಕಲೆಗೆ ಸಂಬಂಧಿಸಿದ್ದು. ಅದರೊಳಗೆ ಇರುವ ಕೆಲ ಒಂದು ವಿಚಾರಗಳನ್ನು ಸ್ವಚ್ಚ ಮಾಡಲು ಇದು ಸರಿಯಾದ ಸಮಯ. ನಮ್ಮ ಮನೆಯನ್ನು ನಾವೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಮಂತಾ ಅವರು ಮಾತನಾಡುವಾಗ ತೆಲುಗು ಚಿತ್ರರಂಗದಲ್ಲೂ ಇಂಥದ್ದೊಂದು ಸಮಿತಿಯ ಅಗತ್ಯವಿದೆ ಎಂದು ಹೇಳಿದ್ದರು. ಹಾಗೇ ಕನ್ನಡದಲ್ಲಿಯೂ ಇಂಥ ಸಮಿತಿಗಳು ರಚನೆ ಆಗಬೇಕು ಎಂದಿದ್ದಾರೆ.

ನಟಿ ಶೃತಿ ಹರಿಹರನ್ ಈ ಮೊದಲು ಮೀಟೂ ಕೇಸ್ ಮೂಲಕ ಸಾಕಷ್ಟು ವಿರೋಧ ಅನುಭವಿಸಿದ್ದರು. ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ ಕೇಸ್ ದಾಖಲಿಸಿದ್ದರು. ಅದಾದ ಬಳಿಕ ಸಾಕಷ್ಟು ನಟಿಯರು ಮೀಟೂ ಕೇಸ್ ಬಗ್ಗೆ ಮಾತನಾಡಿದ್ದರು. ಶೃತಿ ಹರಿಹರನ್ ಈಗಲೂ ಅವರದ್ದೇ ಸ್ಟ್ಯಾಂಡ್ ನಲ್ಲಿ ನಿಂತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *