ಸುದ್ದಿಒನ್ | ಕೊರೊನಾ ವೈರಸ್‌ನಿಂದಾಗಿ ಇಡೀ ಜಗತ್ತು ಲಾಕ್‌ಡೌನ್ ಆಗಿದ್ದನ್ನು ನಾವು ನೋಡಿದ್ದೇವೆ. ನಂತರದ ದಿನಗಳಲ್ಲಿ ಅಂತಹ ಲಾಕ್‌ಡೌನ್ ವಿಧಿಸುವ ಸಂದರ್ಭ ಎದುರಾಗಿಲ್ಲ. ಆದರೆ ಸೊಳ್ಳೆಗಳ ಕಾಟ ಅಮೆರಿಕದ ಮಸಾಚುಸೆಟ್ಸ್ ರಾಜ್ಯವನ್ನೇ ನಡುಗಿಸುತ್ತಿದೆ. ಅಪರೂಪದ ಮತ್ತು ಮಾರಣಾಂತಿಕ ‘ಟ್ರಿಪಲ್ ಇ’ ವೈರಸ್ ರಾಜ್ಯವನ್ನು ಭಯಭೀತಗೊಳಿಸುತ್ತಿದೆ.
ವೈರಸ್ ಸೋಂಕಿಗೆ ಒಳಗಾದ ನ್ಯೂ ಹ್ಯಾಂಪ್‌ಶೈರ್ ನಿವಾಸಿಯೊಬ್ಬರು ಇತ್ತೀಚೆಗೆ ಸಾವನ್ನಪ್ಪಿದ್ದಾರೆ.
ಅಷ್ಟೇ ಅಲ್ಲದೇ 80 ವರ್ಷದ ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವುದು ಇದೀಗ ಬಾರಿ ಚರ್ಚೆಯ ವಿಷಯವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಹೈ ಅಲರ್ಟ್ ಘೋಷಿಸಿದ್ದಾರೆ. ಅಲ್ಲಿನ 5 ಪಟ್ಟಣಗಳಲ್ಲಿ ಭಾಗಶಃ ಲಾಕ್‌ಡೌನ್ ಹೇರಲಾಗಿದೆ. ಜ್ವರ, ತಲೆನೋವು, ವಾಕರಿಕೆ, ವಾಂತಿ, ಅತಿಸಾರ, ಫಿಟ್ಸ್ ಮೊದಲಾದ ಲಕ್ಷಣಗಳು ಕಂಡುಬರುತ್ತಿವೆ.
ಸೊಳ್ಳೆ ಇಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ. ಸೊಳ್ಳೆ ಕಡಿತದಿಂದ ಹರಡುವ ವೈರಸ್ ವ್ಯಕ್ತಿಯನ್ನು ಸಾವಿನಂಚಿಗೆ ಕೊಂಡೊಯ್ಯುತ್ತಿದೆ. ಹೀಗಾಗಿ ಎಲ್ಲರೂ ಮುಂಜಾಗ್ರತೆ ವಹಿಸುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ. “ಟ್ರಿಪಲ್ ಇ ವೈರಸ್‌ಗೆ ಯಾವುದೇ ಚಿಕಿತ್ಸೆ ಇಲ್ಲ. ವೈರಸ್‌ನ ಇನ್ನೊಂದು ಹೆಸರು ಈಸ್ಟರ್ನ್ ಎಕ್ವೈನ್ ಎನ್ಸೆಫಾಲಿಟಿಸ್. ವೈರಸ್ ಸೋಂಕಿತರಲ್ಲಿ 33 ರಿಂದ 70 ಪ್ರತಿಶತದಷ್ಟು ಜನರು ಸಾಯುತ್ತಾರೆ ಎಂದು ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಸಿಡಿಸಿ ಎಚ್ಚರಿಸಿದೆ. ಈ ಸೋಂಕಿನಿಂದ ಬಳಲುತ್ತಿರುವವರು ನರಗಳ ಸಮಸ್ಯೆಗಳು ಎದುರಾಗುತ್ತಿವೆ.