ಸುದ್ದಿಒನ್, ಹೊಳಲ್ಕೆರೆ, ಸೆಪ್ಟೆಂಬರ್. 02 : ತಾಲ್ಲೂಕಿನ ಅರೇಹಳ್ಳಿಯ ಸ್ನೇಹ ಪಬ್ಲಿಕ್ ಶಾಲೆ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಇಲ್ಲಿನ
ಸ್ನೇಹ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸಂಸ್ಥೆಯ ಹೊಳಲ್ಕೆರೆ ಸುಮಿತ್ರಕ್ಕ ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಮಾತನಾಡಿ
ಮಹಾವಿಷ್ಣುವಿನ ಎಂಟನೇ ಅವತಾರವಾದ ಶ್ರೀ ಕೃಷ್ಣ ಕೃಷ್ಣನ ಜನಿಸಿ ಮಹಾಭಾರತ ಯುದ್ಧವನ್ನು ನಡೆಸಿ ಎತ್ತಿ ಹಿಡಿದಿದ್ದು ಒಂದು ಅಭೂತಪೂರ್ವ ಕಾರ್ಯ ಈ ಒಂದು ಮಹಾಭಾರತ ಯುದ್ಧದಲ್ಲಿ ಭಗವದ್ಗೀತೆಯನ್ನು ಬೋಧಿಸಿ ಮಾನವರ ಕಲ್ಯಾಣಕ್ಕಾಗಿ ಶ್ರಮಿಸಿದ ಅದ್ಭುತ ಪೂರ್ವ ವ್ಯಕ್ತಿಯಾಗಿ ಅವತರಿಸಿದ ಶ್ರೀ ಕೃಷ್ಣ ಪರಮಾತ್ಮ ಎಂದು ಭೋದಿಸಿದರು.
ಶಾಲೆಯ ಪ್ರಾಂಶುಪಾಲರಾದ ಜಿ. ಸಿ. ವೇಣುಗೋಪಾಲ್ ರವರು ಮಾತನಾಡಿ
ಪೋಷಕರು ಮಕ್ಕಳಿಗೆ ಮನೆಯಲ್ಲಿ ಕೃಷ್ಣನ ಬಗ್ಗೆ ಮಹಾಭಾರತ ಪುರಾಣ ಕಥೆಗಳನ್ನು ಹೇಳಬೇಕು ಎಂದು ತಿಳಿಸಿದರು.
ಶ್ರೀಮತಿ ಛಾಯಾ ಮಂಜುನಾಥ್ ಮಾತನಾಡಿ
ಶ್ರೀ ಕೃಷ್ಣ ಪರಮಾತ್ಮ ಅವತರಿಸಿದ ಉದ್ದೇಶವೇ ಹಿಂದೂ ಧರ್ಮ ರಕ್ಷಣೆಗಾಗಿ. ತನ್ನ ಬಾಲ್ಯದಿಂದಲೂ ಅವತಾರದ ಅಂತ್ಯದವರೆಗೂ ಧರ್ಮರಕ್ಷಣೆಗಾಗಿ ಎತ್ತಿ ಹಿಡಿದರು ಎಂದು ತಿಳಿಸಿದರು.
ಮಕ್ಕಳು ಶ್ರೀ ಕೃಷ್ಣನ ವೇಷ ಧರಿಸಿ ಸಂಭ್ರಮದಿಂದ ಪಾಲ್ಗೊಂಡು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಜೆ. ಎಸ್. ವಸಂತ್, ನಿರ್ದೇಶಕರಾದಂತ ಬಿ. ಎಸ್. ಹರೀಶ್ ಬಾಬು ಎಂ, ಜೆ ನಾಗರಾಜ್ ಹಾಗೂ ಪೋಷಕರು ವಿದ್ಯಾರ್ಥಿಗಳು ಇದ್ದರು.