ಲಕ್ನೋ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಉಪಯೋಗಿಸದವರು ಯಾರು ಇಲ್ಲ. ಎಂಥ ಪುಟ್ಟ ಪುಟ್ಟ ಮಕ್ಕಳ ಬಳಿಯೂ ಸ್ಮಾರ್ಟ್ ಫೋನ್ ಇರುತ್ತೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚು ಆನ್ಲೈನ್ ಗೇಮ್ ಗಳಲ್ಲಿ ತಲ್ಲೀನರಾಗುತ್ತಿದ್ದಾರೆ. ಅದರಿಂದ ಅದೆಷ್ಟು ಅಪಾಯ ಅನ್ನೋದು ಮಕ್ಕಳಿಗೆ ಇನ್ನು ಸರಿಯಾಗಿ ತಿಳಿಯುತ್ತಿಲ್ಲ ಅನ್ನಿಸುತ್ತೆ. ಆದ್ರೆ ಆ ಆಟದಲ್ಲಿ ಮುಳುಗಿದ್ದ ಮಕ್ಕಳು ಒಂದೇ ಕ್ಷಣಕ್ಕೆ ಪ್ರಾಣ ಬಿಟ್ಟಿರುವಂಥ ದುರಂತ ಘಟನೆ ನಡೆದಿದೆ.
10 ತರಗತಿ ಓದುತ್ತಿದ್ದ ಆ ಇಬ್ಬರು ಬಾಲಕರು ರೈಲು ಹಳಿ ಮೇಲೆ ಒಬ್ ಜೀ ಗೇಮ್ ಆಡುತ್ತಾ ಕುಳಿತಿದ್ದಾರೆ. ಗೇಮ್ ನಲ್ಲಿ ಮುಳುಗಿದ್ದ ಇವರಿಗೆ ಹೊರಗಿನ ಯಾವುದೇ ಶಬ್ಧವೂ ಕೇಳಿಸಿಲ್ಲ. ಅಷ್ಟೆ ಯಾಕೆ ಅಷ್ಟು ಜೋರಾಗಿ ಶಬ್ಧ ಮಾಡುವ ಟ್ರೈನ್ ಬಂದರೂ ಕೇಳಿಸಿಲ್ಲ. ಮಧಯರಾ – ಕಸಗಂಜ್ ರೈಲು ಇಬ್ಬರು ಬಾಲಕರ ಮೇಲೆ ಹರಿದಿದೆ. ಬಾಲಕರಿಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಗೌರವ್ ಮತ್ತು ಕಪಿಲ್ ಎಂಬ ಇಬ್ಬರು ಬಾಲಕರು ಮೃತರು. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಬಾಲಕರಿಬ್ಬರು ಪಬ್ ಜೀ ಗೇಮ್ ಆಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಜಮಾನಾಪುರ ಠಾಣೆ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಕ್ಕಳ ಮೊಬೈಲ್ ಬಳಕೆ ವಿಚಾರದಲ್ಲಿ ಪೋಷಕರು ಕೂಡ ಎಚ್ಚರವಹಿಸಬೇಕಾದದ್ದು ತುಂಬಾ ಅನಿವಾರ್ಯತೆಯಾಗಿದೆ. ದೇಶದಲ್ಲಿ ಪಬ್ ಜೀ ಬ್ಯಾನ್ ಆಗಿದ್ದರು ಆ ಮಕ್ಕಳ ಮೊಬೈಲ್ ಗೆ ಗೇಮ್ ಸಿಕ್ಕಿದ್ದು ಇನ್ನು ದುರದೃಷ್ಟಕರ.