Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿನ್ನೆ ದರ್ಶನ್ ಹಾಕಿದ್ದದ್ದು ಸನ್ ಗ್ಲಾಸ್ ಅಲ್ಲ.. ಪವರ್ ಗ್ಲಾಸ್ : ಏನಂದ್ರು ಬಳ್ಳಾರಿ ಎಸ್ಪಿ..?

---Advertisement---

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಲಾಕ್ ಆಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದರು. ಆದರೆ ಟೀ ಕುಡ್ಕಿಂಡು, ಸಿಗರೇಟು ಸೇದುತ್ತಾ ರೌಡಿಶೀಟರ್ ಗಳ ಅಡ್ಡದಲ್ಲಿ ಕೂತಿದ್ದ ಫೋಟೋ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಜೈಲಿನ ವ್ಯವಸ್ಥೆಯ ಬಗ್ಗೆ ಚರ್ಚೆಯಾಗುವುದಕ್ಕೆ ಶುರುವಾಗಿತ್ತು. ಸದ್ಯ ದರ್ಶನ್ ಅವರನ್ನು ಸೇರಿದಂತೆ ಗ್ಯಾಂಗ್ ಅನ್ನೇ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ನಟ ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿದ್ದಾರೆ.

ಬಳ್ಳಾರಿ ಜೈಲಿಗೆ ಬರುವಾಗಲೂ ಬಿಂದಾಸ್ ಆಗಿ ಬಂದಿದ್ದಾರೆ ಎಂಬುದು ಚರ್ಚೆಗೆ ಗ್ರಾಸವಾಗಿತ್ತು. ಸನ್ ಗ್ಲಾಸ್ ಹಾಕಿಕೊಂಡಿದ್ದಾರೆ ಎಂಬ ವಿಚಾರ ಜೋರು ಕೇಳಿ ಬಂದಿತ್ತು. ಟೀ ಶರ್ಟ್ ಕಾಲರ್ ಗೆ ಈ ಗ್ಲಾಸ್ ಅನ್ನು ದರ್ಶನ್ ತಗಲಾಕಿಕೊಂಡಿದ್ದರು. ಅದು ಎಲ್ಲರ ಕಣ್ಣಿಗೂ ಬಿದ್ದಿತ್ತು. ಚರ್ಚೆಯಾಗುತ್ತಿದ್ದಂತೆ ಗ್ಲಾಸ್ ಬಗ್ಗೆಯೂ ಬಳ್ಳಾರು ಎಸ್ಪಿ ಶೋಭರಾಣಿ ಸ್ಪಷ್ಟನೆ ನೀಡಿದ್ದಾರೆ.

‘ದರ್ಶನ್ ತಂದಿದ್ದು ಕೂಲಿಂಗ್ ಗ್ಲಾಸ್ ಅಲ್ಲ ಪವರ್ ಗ್ಲಾಸ್. ಅವರು ಜೈಲಿನ ನಿಯಮಗಳನ್ನು ಫಾಲೋ ಮಾಡುತ್ತಿದ್ದಾರೆ. ಪವರ್ ಗ್ಲಾಸ್ ಹಾಕುವವರಿಗೆ ಜೈಲಿನಲ್ಲೂ ಹಾಕುವುದಕ್ಕೆ ಅವಕಾಶವಿದೆ. ಯಾರಿಗಾದರೂ ಕಣ್ಣಿನ ಸಮಸ್ಯೆ ಇದ್ದರೆ ಪವರ್ ಗ್ಲಾಸ್ ಹಾಕುವುದಕ್ಕೆ ಅನುಮತಿ ನೀಡಲಾಗುತ್ತದೆ. ಆ ಪವರ್ ಎಷ್ಟರಮಟ್ಟಿಗೆ ಇದೆ ಎಂಬುದನ್ನು ಚೆಕ್ ಮಾಡುತ್ತೇವೆ. ಇಲ್ಲಿ ಎಲ್ಲರಿಗೂ ನಾರ್ಮಲ್ ಫುಡ್ ಇರುತ್ತದೆ. ಅದೇ ಫುಡ್ ಅನ್ನೇ ದರ್ಶನ್ ಅವರು ತಿಂದಿದ್ದಾರೆ. ಜೊತೆಗೆ ಬರುವಾಗ ಅವರಿಗೆ ಕೋಳವನ್ನೇನು ಹಾಕಿಸಿಕೊಂಡು ಬಂದಿಲ್ಲ. ಅದರ ಅವಶ್ಯಕತೆ ಬಂದಿಲ್ಲ. ದರ್ಶನ್ ಜೈಲಿನ ಎಲ್ಲಾ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಜುಲೈ 05 ರಂದು ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ : ಮಾಲತೇಶ್ ಮುದ್ದಜ್ಜಿ ಮಾಹಿತಿ

ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಶಾಲಾ ಸಂಸತ್ ಚುನಾವಣೆ ದಿಕ್ಸೂಚಿ : ಮುಖ್ಯೋಪಾಧ್ಯಾಯ ಎಸ್. ಹನುಮಂತಪ್ಪ

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ : ಕೆ.ಎಸ್. ಈಶ್ವರಪ್ಪ ಅರ್ಜಿ ಹೈಕೋರ್ಟ್ ನಲ್ಲಿ ವಜಾ

ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೆ ಬಿಗಿ ಕ್ರಮ: ಶಾಲಾ ಅವಧಿಯಲ್ಲಿ ಶಿಕ್ಷಕರಿಗೆ ತರಬೇತಿ, ಸಭೆ ಹಾಗೂ ಡೇಟಾ ಎಂಟ್ರಿ ಕಡ್ಡಾಯ ನಿಷೇಧ!

SIR : ಬಿಎಲ್‌ ಒಗಳು ಕಡ್ಡಾಯವಾಗಿ ಮತದಾರರ ಮನೆಗೆ ಭೇಟಿ ನೀಡಿ ಫಾರಂ ವಿತರಿಸಬೇಕು : ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಆದೇಶ

ಪೋಷಕರೇ ಹುಷಾರ್‌! ಮಕ್ಕಳ ಜ್ವರ, ಕೆಮ್ಮಿಗೆ ನಿಮ್ಮ ಮಾತ್ರೆಗಳನ್ನು ಅರ್ಧ ಕತ್ತರಿಸಿ ನೀಡುತ್ತಿದ್ದೀರಾ? ಜೀವಕ್ಕೇ ಬರಬಹುದು ಅಪಾಯ!

Leave a Comment