ಸುದ್ದಿಒನ್, ಹೊಸದುರ್ಗ, ಆಗಸ್ಟ್. 30 : ರಾತ್ರೋ ರಾತ್ರಿ ಶ್ರೀಕೃಷ್ಣನ ಪ್ರತಿಮೆ ತಲೆ ಎತ್ತಿ ನಿಂತಿದೆ. ಅದಕ್ಕೆ ಕಾರಣವೇನು..? ಪ್ರತಿಮೆಯನ್ನು ರಾತ್ರೋ ರಾತ್ರಿ ಸ್ಥಾಪನೆ ಮಾಡಿದ್ಯಾಕೆ ಅನ್ನೋದು ಆಶ್ಚರ್ಯಕರ ಪ್ರಶ್ನೆಯಾಗಿದೆ.
ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಬಳಿ ಈ ಘಟನೆ ನಡೆದಿದೆ. ಸಾರಿಗೆ ಬಸ್ ನಿಲ್ದಾಣದ ಬಳಿ ಶ್ರೀಕೃಷ್ಣನ ಪ್ರತಿಮೆಯನ್ನು ಸ್ಥಾಪನೆ ಮಾಡಿದ್ದಾರೆ. ಯಾವುದೇ ರೀತಿಯ ಅನುಮತಿಯನ್ನು ಪಡೆಯದೆ ಹೀಗೆ ರಾತೋರಾತ್ರಿ ಶ್ರೀಕೃಷ್ಣ ಪುತ್ಥಳಿ ಸ್ಥಾಪನೆ ಮಾಡಿದ್ದಾರೆ. ಸಾರಿಗೆ ಬಸ್ ನಿಲ್ದಾಣ ಬಳಿಯ ಖಾಲಿ ಜಾಗದಲ್ಲಿ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ. ಇದು ಪುರಸಭೆ ವ್ತಾಪ್ತಿಗೊಳಪಡುವ ಜಾಗವಾಗಿದೆ. ಇಲ್ಲಿ ಪ್ರತಿಮೆ ಸ್ಥಾಪನೆ ಮಾಡಿದ್ದು, ರಾತೋರಾತ್ರಿ ಶ್ರೀಕೃಷ್ಣ ಪ್ರತಿಮೆ ಸ್ಥಾಪನೆ ಮಾಡಿದ್ದರ ಬಗ್ಗೆ ಪೊಲೀಸರಿಂದ ಪರಿಶೀಲನೆ ನಡೆಯುತ್ತಿದೆ.
ವಿಚಾರಣೆಯ ವೇಳೆ ಪೊಲೀಸರು ಪುರಸಭೆ ಅಧಿಕಾರಿಗಳಿಗೆ ಮಾಹಿತಿ ಕೇಳಿದ್ದಾರೆ. ಇಲ್ಲಿವರೆಗೂ ಕೃಷ್ಣನ ಪ್ರತಿಮೆಯ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ, ಯೋಜನೆಗಳು ನಡೆದಿಲ್ಲ. ಆದರೆ ಕೃಷ್ಣನ ಪ್ರತಿಮೆಯನ್ನು ಇದ್ದಕ್ಕಿದ್ದ ಹಾಗೇ ತಂದಿಟ್ಟವರು ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ ಅಲ್ಲಿನ ಜನರಿಗೆ. ಕೃಷ್ಣ ಜನ್ಮಾಷ್ಠಮಿ ಕಳೆದು ನಾಲ್ಕು ದಿನಗಳಾಗಿವೆ. ಈಗ ಕೃಷ್ಣನನ್ನು ಪ್ರತಿಷ್ಠಾಪನೆ ಮಾಡಿದ್ದರ ಹಿಂದಿನ ಉದ್ದೇಶ ಏನು ಎಂಬುದು ಅರ್ಥವಾಗುತ್ತಿಲ್ಲ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ..? ಯಾಕೆ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ರು ಎಂಬುದೆಲ್ಲಾ ಪೊಲೀಸರ ತನಿಖೆಯ ಬಳಿಕವಷ್ಟೇ ಸತ್ಯ ಹೊರ ಬರಲಿದೆ.