ಕ್ಯಾಲಿಪೋರ್ನಿಯಾ: ಹಣಕ್ಕೆ ಇರುವ ಬೆಲೆ ಮತ್ಯಾವುದಕ್ಕೂ ಇಲ್ಲ. ನಿದ್ದೆ, ಊಟ ಮುಖ್ಯವಾಗಿ ನೆಮ್ಮದಿಯಿಂದಿರಲು ಮನುಷ್ಯ ದುಡಿಯುತ್ತಿರುವುದೇ ಈ ಹಣಕ್ಕೆ. ಕಷ್ಟಪಟ್ಟು ದುಡಿದರು ಕೈಗೆ ಸಿಗೋದು ಆರು ಕಾಸು ಮೂರು ಕಾಸು. ಅಂತದ್ರಲ್ಲಿ ಪುಕ್ಸಟ್ಟೆ ಸಿಕ್ಕರೆ ಬಿಡ್ತಾರೆಯೇ. ನೋ ವೇ ಚಾನ್ಸೇ ಇಲ್ಲ.
ಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ರಸ್ತೆಯಲ್ಲೆಲ್ಲಾ ಹಣ ಚೆಲ್ಲಾಪಿಲ್ಲಿಯಾಗಿದ್ದು, ಬಾಚಿಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಹಾಗಂತ ಅದೇನು ಫೇಕ್ ಹಣ ಅಲ್ಲ. ಒರಿಜಿಲ್ ಹಣವೇ. ಬ್ಯಾಂಕ್ ಗೆ ತುಂಬಲು ತೆಗೆದುಕೊಂಡು ಹೋಗುತ್ತಿದ್ದ ಹಣವದು.
ಟ್ರಕ್ ನಲ್ಲಿ ಹಣ ತುಂಬಿಕೊಂಡು ಫೆಡರಲ್ ಡಿಪಾಸಿಟ್ ಕಾರ್ಪ್ ಇನ್ಸೂರೆನ್ಸ್ ಕಂಪನಿ ರಸ್ತೆಯಲ್ಲಿ ಸಾಗುತ್ತಿತ್ತು. ಬ್ಯಾಂಕ್ ಹಣ ತುಂಬುವ ಸಲುವಾಗಿ ಟ್ರಕ್ ನಲ್ಲಿ ಹಣ ತೆಗೆದುಕೊಂಡು ಹೋಗ್ತಾ ಇತ್ತು. ಆದ್ರೆ ಇದ್ದಕ್ಕಿದ್ದ ಹಾಗೇ ಟ್ರಕ್ ನ ಬಾಗಿಲು ತೆಗೆದುಕೊಂಡು ಹಣ ನೆಲಕ್ಕೆ ಬಿದ್ದಿದೆ. ಇದನ್ನ ಕಂಡ ಜನ ಓಡೋಡಿ ಬಂದು ಸಿಕ್ಕಷ್ಟು ಹಣವನ್ನ ಬ್ಯಾಗ್ ನಲ್ಲಿ ತುಂಬಿಕೊಂಡಿದ್ದಾರೆ.
ಕಡೆಗೆ ಘಟನಾ ಸ್ಥಳಕ್ಕೆ ಬ್ಯಾಂಕ್ ಅಧಿಕಾರಿಗಳು ಹಾಗೂ ಪೊಲೀಸರು ಬಂದಿದ್ದು, ಇಬ್ಬರನ್ನು ಅರೆಸ್ಟ್ ಕೂಡಾ ಮಾಡಿದ್ದಾರೆ. ಆದ್ರೆ ಎಷ್ಟು ಹಣ ಕಳವಾಗಿದೆ ಅನ್ನೋ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ. ಆದ್ರೆ ಹಣ ತೆಗೆದುಕೊಂಡು ಯಾರು ಹೋಗಿದ್ದೀರಾ ಹಣ ವಾಪಾಸ್ ಮಾಡಿ ಎಂದು ಬ್ಯಾಂಕ್ ಸಾರ್ವಜನಿಕವಾಗಿ ನೊಟೀಸ್ ಹೊರಡಿಸಿದೆ.