ಬಾಗಲಕೋಟೆ: ಮುಂಗಾರು ಕೈಕೊಟ್ಟು ಹಾಗೋ ಹೀಗೋ ಫಸಲು ಒಂದಂತಕ್ಕೆ ಬಂದಿದೆ ಎನ್ನುವಾಗ್ಲೇ ಹಿಂಗಾರು ಮಳೆ ಬಿಡುವಿಲ್ಲದೆ ಬಡಿದಿದೆ. ನಿರಂತರ ಸುರಿದ ಮಳೆ ಯಾವ ರೈತನಿಗೂ ಖುಷಿ ಕೊಡಲಿಲ್ಲ. ಬದಲಿಗೆ ಕಂಡ ಕನಸು ನುಚ್ಚು ನೂರಾಯ್ತು, ಹಾಕಿದ ಬಂಡವಾಳ ನೀರಲ್ಲಿಯೇ ಕೊಚ್ಚಿಕೊಂಡು ಹೋಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲೂ ರೈತ ಅಕ್ಷರಶಃ ತಲೆ ಮೇಲೆ ಕೈಹೊತ್ತು ಕೂರುವ ಸ್ಥಿತಿ ನಿರ್ಮಾಣವಾಗಿದೆ.
ಬಾಗಲಕೋಟೆ ಜಿಲ್ಲೆಯ ಹೊರವಲಯದಲ್ಲಿ ರೈತ ಶ್ರೀಶೈಲ್ ಯಲ್ಲಿಗುತ್ತಿ ಎಂಬುವವರು ತಮ್ಮ ಜಮೀನಿನಲ್ಲಿ ದ್ರಾಕ್ಷಿ ಬೆಳೆ ಬೆಳೆದಿದ್ದರು. 10 ಎಕರೆಯಲ್ಲಿ ಸುಮಾರು 15 ಲಕ್ಷ ಖರ್ಚು ಮಾಡಿ ದ್ರಾಕ್ಷಿ ಬೆಳೆ ಹಾಕಿದ್ದರು. ಫಸಲು ಕೂಡ ಚೆನ್ನಾಗಿಯೇ ಬಂದಿತ್ತು. ಆದ್ರೆ ಈ ಅಕಾಲಿಕ ಮಳೆಯಿಂದಾಗಿ ದ್ರಾಕ್ಷಿಯ ಹೂವೆಲ್ಲಾ ನೆಲಕ್ಕೆ ಬಿದ್ದಿದೆ. ಇದರಿಂದ ಬೇದರಗೊಂಡ ರೈತ ದ್ರಾಕ್ಷಿ ಗಿಡಗಳನ್ನ ಕಡಿದು ಹಾಕಿದ್ದಾನೆ.