ವರದಿ : ಸುರೇಶ್ ಪಟ್ಟಣ್
ಚಿತ್ರದುರ್ಗ, (ನ. 21) : ಕನ್ನಡ ಸಾಹಿತ್ಯ ಪರಿಷತ್‌ಗೆ ಮತದಾರರು ಯಾರು ಬೇಕಾದರೂ ಆಗಬಹುದು ಆದರೆ, ಚುನಾವಣೆಯಲ್ಲಿ ಸ್ಪರ್ಧೆ ಮಾಡುವವರು ಮಾತ್ರ ಸಾಹಿತ್ಯದ ಬಗ್ಗೆ ಆಸಕ್ತಿಯನ್ನು ಹೊಂದಿರುವವರ ಆಗಿರಬೇಕೆಂದು ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
ಕಸಾಪ ಚುನಾವಣೆಯಲ್ಲಿ ಭಾಗವಹಿಸಿ ಮತದಾನ ನೇರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಆರು ಕೋಟಿ ಜನರಿದ್ದಾರೆ. ಕನ್ನಡ ನಾಡಿನಲ್ಲಿ ಹುಟ್ಟಿದವರೆಲ್ಲರು ಇವರು ಪರಿಷತ್‌ಗೆ ಸದಸ್ಯರಾಗಬಹುದು, ಆದರೆ ಸ್ಪರ್ಧೆ ಮಾಡುವವರು ಮಾತ್ರ ಸಾಹಿತ್ಯದ ಬಗ್ಗೆ ಒಲವು ಇರುವವರು ಹೆಚ್ಚು ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿರುವವರು ಆಗಿರಬೇಕಿದೆ. ಇಂದಿನ ಚುನಾವಣೆಯ ಮತದಾರರ ಪಟ್ಟಿಯನ್ನು ನೋಡಿದರೆ ಸಾಮಾನ್ಯ ಚುನಾವಣೆಯ ಮತದಾರರ ಪಟ್ಟಿ ರೀತಿಯಲ್ಲಿ ಇದೆ ಎಂದರು.
ಹಿರಿಯ ಶ್ರೀಗಳು ತಿಳಿಸಿದ ರೀತಿಯಲ್ಲಿ ಪರಿಷತ್‌ನ ರಾಜ್ಯಾಧ್ಯಕ್ಷರನ್ನು ಜಿಲ್ಲಾ ಮತ್ತು ತಾಲ್ಲೂಕು ಆಧ್ಯಕ್ಷರು ಆಯ್ಕೆ ಮಾಡಬೇಕೆಂಬ ಸಲಹೆ ಸ್ವಾಗತಾರ್ಹವಾದದು ಎಂದು ಶ್ರೀ ಪಂಡಿತಾರಾಧ್ಯ ಶ್ರೀಗಳು ತಿಳಿಸಿದರು.