ಚಿತ್ರದುರ್ಗದ ಖ್ಯಾತ ವೈದ್ಯರಿಗೆ ಸೈಬರ್ ವಂಚಕರಿಂದ ಮೋಸ : 1.27 ಕೋಟಿ ವಂಚನೆ…!

1 Min Read

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 26 : ಸೈಬರ್ ವಂಚಕರು ದಿನೇ‌ ದಿನೇ ಹೊಸ ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾ ಇರುತ್ತಾರೆ. ಹಳೆಯ ಐಡಿಯಾದಲ್ಲಿ ಜನ ಅಲರ್ಟ್ ಆದರೆ ಅವರ ಬಳಿ ಇನ್ನಷ್ಟು ಐಡಿಯಾಗಳು ರೆಡಿ ಇರುತ್ತವೆ. ಆದರೆ ವಿಚಿತ್ರವೆಂದರೆ ಸೈಬರ್ ಕಳ್ಳರ ಬಗ್ಗೆ ಓದಿ, ತಿಳಿದುಕೊಂಡ ವಿದ್ಯಾವಂತರೆ ಮೋಸ ಹೋಗುತ್ತಾರೆ. ಕೆಲಸದ ಒತ್ತಡವೋ ಏನೋ ಸೈಬರ್ ವಂಚಕರು ಹೇಳಿದ ಮಾತನ್ನು ಬೇಗ ನಂಬಿ ಮೋಸ ಹೋಗುವ ಜನರೇ ಹೆಚ್ಚು. ಇದೀಗ ಚಿತ್ರದುರ್ಗದಲ್ಲೂ ಅಂತದ್ದೇ ಘಟನೆ ನಡೆದಿದೆ. ಆದರೆ ಒಂದೆರಡು ಸಾವಿರ ಅಲ್ಲ ಬರೋಬ್ಬರಿ ಕೋಟಿ ಲೆಕ್ಕದಲ್ಲಿ ಹಣ ವಂಚಿಸಿದ್ದಾರೆ.

ಚಿತ್ರದುರ್ಗದ ಖ್ಯಾತ ಹಾಗೂ ಹಿರಿಯ ವೈದ್ಯರಾದ  ಡಾ. ಶ್ರೀನಿವಾಸ್ ಶೆಟ್ಟಿ ವಂಚನೆಗೊಳಗಾದವರು. ಇವರಿಗೆ ಬಂದ ಒಂದೇ ಒಂದು ಕರೆಯಿಂದ 1 ಕೋಟಿ 27ಲಕ್ಷ ರೂಪಾಯಿ ಕಳೆದುಕೊಳ್ಳುವಂತಾಗಿದೆ.

ಆ ವಂಚಕರು ನಾವು TRAI & ಮುಂಬೈ ಪೊಲೀಸರು ಎಂದು ಹೇಳಿ, ನಿಮ್ಮ ಬ್ಯಾಂಕ್ ಖಾತೆ ಬಳಸಿ ಮನಿ ಲ್ಯಾಂಡರಿಂಗ್ ವಂಚನೆ ಆಗಿದೆ. ನಿಮ್ಮ ಖಾತೆಯ ಹಣದ ಆಡಿಟ್ ಮಾಡಬೇಕಿದೆ ಎಂದು ನಂಬಿಸಿದ್ದರು. ವಾಟ್ಸಪ್ ಕಾಲ್ & ನಾರ್ಮಲ್ ಕಾಲ್ ಮಾಡಿ ನಂಬಿಸಿದ್ದರು. ವೈದ್ಯರು ಅವರೇಳಿದ ನಿಯಮಗಳನ್ನು ಪಾಲನೆ ಮಾಡುತ್ತಾ ಹೋದರು. ಇದರಿಂದ ಡಾ.ಶೆಟ್ಟಿ ಅವರ ಖಾತೆಯಿಂದ ವಂಚಕರ ಖಾತೆಗೆ 1ಕೋಟಿ 27ಲಕ್ಷ ಹಣ ವರ್ಗಾವಣೆಯಾಗಿತ್ತು. ಆಮೇಲೆ ತಾವೂ ಮೋಸ ಹೋಗಿರುವುದು ಡಾ. ಶ್ರೀನಿವಾಸ ಶೆಟ್ಟಿ ಅವರಿಗೆ ತಿಳಿದಿದೆ. ಈ ಘಟನೆ ಶುಕ್ರವಾರ ನಡೆದಿದ್ದು ಈ ಸಂಬಂಧ ಅವರು ಶನಿವಾರ ಚಿತ್ರದುರ್ಗದ CEN ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *